ಉತ್ತರಪ್ರದೇಶ ಸರ್ಕಾರ 18-44ವರ್ಷದವರೆಗಿನ ನಾಗರಿಕರಿಗೆ ಕೊರೊನಾ ಲಸಿಕೆ ನೀಡಲು ಶುರು ಮಾಡಿದೆ. ಆದರೆ ಸ್ಥಳೀಯರಿಗಷ್ಟೇ ಲಸಿಕೆ ಕೊಡುತ್ತಿರುವುದರಿಂದ ವಲಸೆ ಬಂದವರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಲಸಿಕೆ ಪಡೆಯುವ ಫಲಾನುಭವಿಗಳು ಸ್ಥಳೀಯರು ಅಂದರೆ ಉತ್ತರಪ್ರದೇಶದವರೇ ಎಂಬುದಕ್ಕೆ ವಿಳಾಸಗಳ ಪುರಾವೆ ಕೊಡಬೇಕು ಎಂದು ಸ್ಥಳೀಯ ಆಡಳಿತಗಳು ಸೂಚಿಸಿವೆ.
ಉತ್ತರ ಪ್ರದೇಶದಲ್ಲಿ ಪ್ರಾರಂಭದಲ್ಲಿ ಕೇವಲ 7 ಜಿಲ್ಲೆಗಳಲ್ಲಿ ಮಾತ್ರ 18 ರಿಂದ 44ವರ್ಷದವರೆಗಿನವರಿಗೆ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರುವಾಗಿತ್ತು. ಇದೀಗ 11 ಜಿಲ್ಲೆಗಳಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶ ಸರ್ಕಾರದ ಎಲ್ಲ ವೆಬ್ಸೈಟ್ಗಳಲ್ಲೂ ಲಸಿಕೆ ಸಂಬಂಧಪಟ್ಟ ವಿವರಗಳು, ಅದನ್ನು ಪಡೆಯುವ ವಿಧಾನ, ನೋಂದಣಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಎಲ್ಲ ವೆಬ್ಸೈಟ್ಗಳಲ್ಲೂ ಕೂಡ ಕೇವಲ ಉತ್ತರ ಪ್ರದೇಶ ನಿವಾಸಿಗಳಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೆ, ಲಸಿಕೆ ಪಡೆಯುವವರು ಇಲ್ಲಿಯವರೇ ಎಂದು ಖಚಿತ ಪಡಿಸಿಕೊಳ್ಳುವ ಅಗತ್ಯ ಇರುವುದರಿಂದ ಅವರು, ಆಧಾರ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ರೇಶನ್ ಕಾರ್ಡ್, ವೋಟರ್ ಐಡಿಗಳನ್ನು ತೋರಿಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ.
ಹಾಗಂತ ಇದು ಕೇಂದ್ರ ಸರ್ಕಾರ ಮಾಡಿದ ನಿಯಮವಂತೂ ಅಲ್ಲ. ಯಾವುದೇ ವ್ಯಕ್ತಿ ಲಸಿಕೆ ಪಡೆಯಬೇಕೆಂದರೆ ಕೊವಿನ್ ಆ್ಯಪ್ನಲ್ಲಿ ನೋಂದಣಿ ಮಾಡಿಕೊಂಡು, ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆಯೇ ಹೊರತು, ಆಯಾ ರಾಜ್ಯಗಳು ಅಲ್ಲಿನ ನಿವಾಸಿಗಳಿಗೆ ಮಾತ್ರ ಲಸಿಕೆ ನೀಡಬೇಕು ಎಂಬ ನಿಯಮವನ್ನೇನೂ ಇದುವರೆಗೆ ಹೇಳಿಲ್ಲ.
ಉತ್ತರಪ್ರದೇಶದ ಈ ಕ್ರಮದಿಂದಾಗಿ ವಲಸಿಗರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಬೇರೆ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ನೆಲೆಸಿದ್ದರೂ, ಸ್ಥಳೀಯ ವಿಳಾಸದ ಪ್ರೂಫ್ ಹೊಂದಿಲ್ಲದೆ ಇರುವವರು ಲಸಿಕೆ ಪಡೆಯಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಅದರಲ್ಲೂ ಉತ್ತರಪ್ರದೇಶದ ನೊಯ್ಡಾ ಮತ್ತು ಘಾಜಿಯಾಬಾದ್ನಲ್ಲೇ ಹೆಚ್ಚಿನ ವಲಸಿಗರು ಇರುವುದರಿಂದ ಅವರಿಗೆ ಲಸಿಕೆ ಸಿಗುತ್ತಿಲ್ಲ.
ಇದನ್ನೂ ಓದಿ: ನೀವಿಲ್ಲದೆ ನಾ ಬದುಕುವುದಾದರೂ ಹೇಗೆ; ಕೊರೊನಾದಿಂದ ಅಮ್ಮ- ಅಕ್ಕನನ್ನು ಕಳೆದುಕೊಂಡ ವೇದಾ ಕೃಷ್ಣಮೂರ್ತಿ ಭಾವನಾತ್ಮಕ ಸಂದೇಶ
ಕೊರೊನಾ ಸೋಂಕಿನಿಂದ ನೂರಾರು ಮಂದಿ ಸಾವು; ಮೃತಪಟ್ಟವರ ಅಂತ್ಯಕ್ರಿಯೆಗೆ ಮುಂದಾದ ಯಾದಗಿರಿ ಸಂಘಟನೆ
Uttarpradesh authorities have mandated that the beneficiaries must produce a local address proof to get the Corona vaccine
Published On - 5:37 pm, Mon, 10 May 21