ನೀವಿಲ್ಲದೆ ನಾ ಬದುಕುವುದಾದರೂ ಹೇಗೆ; ಕೊರೊನಾದಿಂದ ಅಮ್ಮ- ಅಕ್ಕನನ್ನು ಕಳೆದುಕೊಂಡ ವೇದಾ ಕೃಷ್ಣಮೂರ್ತಿ ಭಾವನಾತ್ಮಕ ಸಂದೇಶ

ನನಗೆ ಇಬ್ಬರು ತಾಯಂದಿರು ಇದ್ದಾರೆ ಎಂದು ನಾನು ಯಾವಾಗಲೂ ಅಹಂ ಪಡುತ್ತಿದ್ದೆ, ಆದರೆ ಬಹುಶಃ ಅಹಃ ಎನ್ನುವುದು ಯಾರಿಗೂ ಒಳ್ಳೆಯದಲ್ಲ ಎಂದು ನನಗೆ ಈಗ ಅನಿಸುತ್ತಿದೆ.

ನೀವಿಲ್ಲದೆ ನಾ ಬದುಕುವುದಾದರೂ ಹೇಗೆ; ಕೊರೊನಾದಿಂದ ಅಮ್ಮ- ಅಕ್ಕನನ್ನು ಕಳೆದುಕೊಂಡ ವೇದಾ ಕೃಷ್ಣಮೂರ್ತಿ ಭಾವನಾತ್ಮಕ ಸಂದೇಶ
ವೇದಾ ಕೃಷ್ಣಮೂರ್ತಿ
Follow us
ಪೃಥ್ವಿಶಂಕರ
|

Updated on: May 10, 2021 | 5:28 PM

ಕೊರೊನಾವೈರಸ್​ನ ಎರಡನೇ ಅಲೆ ದೇಶದ ಅನೇಕ ಕುಟುಂಬಗಳಿಗೆ ಇನ್ನಿಲ್ಲದ ಹಾನಿ ಮಾಡಿದೆ. ಅನೇಕ ಕುಟುಂಬಗಳು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿವೆ. ಇದರಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗ ವೇದ ಕೃಷ್ಣಮೂರ್ತಿಯವರ ಕುಟುಂಬವು ಒಂದಾಗಿದೆ. ವೇದ ಕೃಷ್ಣಮೂರ್ತಿಯ ಸಹೋದರಿ ವತ್ಸಲಾ ಶಿವಕುಮಾರ್ ಕೋವಿಡ್ -19 ಸೋಂಕಿನಿಂದ ನಿಧನರಾದರು. ಇದಕ್ಕೂ ಎರಡು ವಾರಗಳ ಮೊದಲು, ಈ ಮಾರಣಾಂತಿಕ ಸೋಂಕಿನಿಂದ ಅವರ ತಾಯಿ ಕೂಡ ಸಾವನ್ನಪ್ಪಿದರು. ಹೀಗಾಗಿ ವೇದಾ ಅವರ ಬದುಕಲ್ಲಿ ದೊಡ್ಡ ಆಘಾತವೇ ಎದುರಾಗಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ಭಾರತ ಪ್ರಸ್ತುತ ವಿನಾಶವನ್ನು ಎದುರಿಸುತ್ತಿದೆ. ದೇಶದಲ್ಲಿ, ಕಳೆದ ಕೆಲವು ದಿನಗಳಿಂದ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಹೊರಬರುತ್ತಿವೆ. ಅದೇ ಸಮಯದಲ್ಲಿ, ಪ್ರಮುಖ ಔಷಧಿಗಳು ಮತ್ತು ಆಮ್ಲಜನಕದ ಕೊರತೆಯಿಂದಾಗಿ ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಮತ್ತೊಂದೆಡೆ, ಸಾಂಕ್ರಾಮಿಕದ ಮೂರನೇ ಅಲೆಯ ಸುದ್ದಿ ಕಳವಳವನ್ನು ಹುಟ್ಟುಹಾಕಿದೆ.

ಸೋಶಿಯಲ್ ಮೀಡಿಯಾದಲ್ಲಿ ವೇದಾ ಭಾವನಾತ್ಮಕ ಸಂದೇಶ ವೇದಾ ತನ್ನ ಕುಟುಂಬದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಎರಡು ವಾರಗಳಲ್ಲಿ ಕಳೆದುಕೊಂಡಿದ್ದಾರೆ. ಅವರು ತಮ್ಮ ದುಃಖವನ್ನು ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಾಯಿ ಹಾಗೂ ಅಕ್ಕನ ಬಗ್ಗೆ ಭಾವನಾತ್ಮಕವಾಗಿ ಮಾತಾನಾಡಿರುವ ವೇದಾ, ಕಳೆದ ಕೆಲವು ದಿನಗಳಿಂದ ನಮ್ಮ ಮನೆಯಲ್ಲಿ ತುಂಬಾ ಹೃದಯ ವಿದ್ರಾವಕವಾದ ಘಟನೆಗಳು ನಡೆದು ಹೋದವು. ನೀವು ನಮ್ಮ ಮನೆಯ ಆಧಾರಸ್ತಂಭವಾಗಿದ್ದೀರಿ ಆದರೆ ಇಂದು ನೀವಿಲ್ಲದೆ ನನಗೆ ಬದುಕುವುದು ಹೇಗೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ

ಕಳೆದ ಕೆಲವು ದಿನಗಳು ನಿಮ್ಮಿಬ್ಬರೊಡನೆ ತುಂಬಾ ಸಂತೋಷವಾಗಿದ್ದವು ಅಮ್ಮಾ, ನೀವು ನನ್ನನ್ನು ತುಂಬಾ ಧೈರ್ಯಶಾಲಿಗಳನ್ನಾಗಿ ಮಾಡಿದ್ದೀರಿ. ಜೀವನದಲ್ಲಿ ಪ್ರಾಯೋಗಿಕವಾಗಿರುವುದು ಮುಖ್ಯ ಎಂದು ನನಗೆ ಕಲಿಸಿದ್ದೀರಿ. ಅಕ್ಕ, ನೀವು ನನ್ನ ಜೀವನದ ಪ್ರಮುಖ ವ್ಯಕ್ತಿ ಆಗಿದ್ರಿ, ಜೊತೆಗೆ ಜೀವನದಲ್ಲಿ ಕೊನೆಯವರೆಗೂ ಹೋರಾಡುವುದು ಹೇಗೆ ಎಂಬುದನ್ನು ನೀವು ನನಗೆ ಕಲಿಸಿದ್ದೀರಿ. ನಾನು ಮಾಡಿದ್ದ ಸಾಧನೆಯಲ್ಲಿ ಸಂತೋಷವನ್ನು ಕಂಡುಕೊಳ್ಳುವ ವ್ಯಕ್ತಿ ನೀವಿಬ್ಬರೂ. ನನಗೆ ಇಬ್ಬರು ತಾಯಂದಿರು ಇದ್ದಾರೆ ಎಂದು ನಾನು ಯಾವಾಗಲೂ ಅಹಂ ಪಡುತ್ತಿದ್ದೆ, ಆದರೆ ಬಹುಶಃ ಅಹಃ ಎನ್ನುವುದು ಯಾರಿಗೂ ಒಳ್ಳೆಯದಲ್ಲ ಎಂದು ನನಗೆ ಈಗ ಅನಿಸುತ್ತಿದೆ. ಕಳೆದ ಕೆಲವು ದಿನಗಳು ನಿಮ್ಮಿಬ್ಬರೊಡನೆ ತುಂಬಾ ಸಂತೋಷವಾಗಿದ್ದವು, ಇದು ಕೊನೆಯ ಕ್ಷಣ ಎಂದು ನಾನು ಭಾವಿಸಿರಲಿಲ್ಲ. ನಿಮ್ಮಿಬ್ಬರ ನಿರ್ಗಮನದಿಂದ ನನ್ನ ಇಡೀ ಜೀವನ ಬದಲಾಗಿದೆ, ಮುಂದೆ ನಾನು ಏನು ಮಾಡಬೇಕು ಎಂಬುದು ನನಗೆ ಅರಿಯದಾಗಿದೆ. ನಿಮ್ಮಿಬ್ಬರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ವೇದಾ ಬರೆದುಕೊಂಡಿದ್ದಾರೆ.

ಈ ಬಾರಿ ನನಗೆ ದೊರೆತ ಪ್ರೀತಿಗೆ ಧನ್ಯವಾದಗಳು ಇದರೊಂದಿಗೆ ಅವರು ಅಭಿಮಾನಿಗಳನ್ನು ಸುರಕ್ಷಿತವಾಗಿರಲು ಕೇಳಿಕೊಂಡಿದಲ್ಲದೆ ಈ ಸಮಯದಲ್ಲಿ ಅವರನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಬಾರಿ ನನಗೆ ದೊರೆತ ಪ್ರೀತಿಗೆ ಧನ್ಯವಾದಗಳು. ಕೊನೆಯಲ್ಲಿ, ನೀವು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ನಿಮ್ಮೆಲ್ಲರಿಗೂ ಹೇಳಲು ಬಯಸುತ್ತೇನೆ. ಈ ವೈರಸ್ ತುಂಬಾ ಅಪಾಯಕಾರಿ, ನನ್ನ ಕುಟುಂಬವು ಎಲ್ಲವನ್ನೂ ಸರಿಯಾಗಿ ಪಾಲನೆ ಮಾಡಿತ್ತು. ಆದರೂ ಕೊರೊನಾ ನಮ್ಮ ಮನೆಯ ಒಳಗೆ ಪ್ರವೇಶ ಪಡೆದಿತ್ತು. ಹಾಗಾಗಿ ನೀವೆಲ್ಲರೂ ಎಚ್ಚರಿಕೆಯಿಂದಿರಿ ಎಂದಿದ್ದಾರೆ.