ಟೀಂ ಇಂಡಿಯಾ ಆಟಗಾರ ಪಿಯೂಷ್ ಚಾವ್ಲಾಗೆ ಪಿತೃ ವಿಯೋಗ; ಕೊರೊನಾ ಸೋಂಕಿಗೆ ಬಲಿ
ನನ್ನ ತಂದೆ ಪ್ರಮೋದ್ ಚಾವ್ಲಾ ಸೋಮವಾರ ಬೆಳಿಗ್ಗೆ ನಿಧನರಾದರು ಎಂದು ನಾವು ಬಹಳ ದುಃಖದಿಂದ ತಿಳಿಸಬೇಕಾಗಿದೆ. ಅವರು ಕೋವಿಡ್ ಪಾಸಿಟಿವ್ ಆಗಿದ್ದರು
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಇದುವರೆಗೂ ಅನೇಕ ಜನರನ್ನು ಬಲಿ ತೆಗೆದುಕೊಂಡಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಹೇಳ ತೀರದಾಗಿದೆ. ಅನೇಕ ಕ್ರಿಕೆಟಿಗರು ಸಹ ಇದಕ್ಕೆ ಬಲಿಯಾಗಿದ್ದರೆ, ಅವರಲ್ಲಿ ಅನೇಕರು ತಮ್ಮ ಕುಟುಂಬವನ್ನೂ ಕಳೆದುಕೊಂಡಿದ್ದಾರೆ. ಅದರಲ್ಲಿ ಟೀಂ ಇಂಡಿಯಾ ಆಟಗಾರ ಪಿಯೂಷ್ ಚಾವ್ಲಾ ಕೂಡ ಒಬ್ಬರಾಗಿದ್ದಾರೆ. ಅವರ ತಂದೆ ಪ್ರಮೋದ್ ಕುಮಾರ್ ಚಾವ್ಲಾ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಅವರನ್ನು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಿಯೂಷ್ ಚಾವ್ಲಾ ಅವರೇ ತಮ್ಮ ತಂದೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್ ಪರ ಆಡಿದ ವೇಗದ ಬೌಲರ್ ಚೇತನ್ ಸಕಾರಿಯಾ ಅವರ ತಂದೆ ಕೋವಿಡ್ -19ನಿಂದಾಗಿ ಭಾನುವಾರ ನಿಧನರಾದರು. ಅವರ ತಂದೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿದ್ದರು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದರು.
ಪಿಯೂಷ್ ಚಾವ್ಲಾ ಮಾಹಿತಿ ನೀಡಿದರು ಪಿಯುಷ್ ಚಾವ್ಲಾ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ತಂದೆಯ ಚಿತ್ರವನ್ನು ಪೋಸ್ಟ್ ಮಾಡಿ, ಇಂದು ಅವರು ಇಲ್ಲದೆ ಜೀವನ ಒಂದೇ ಆಗಿಲ್ಲ, ಇಂದು ನನ್ನ ಶಕ್ತಿಯ ಸ್ತಂಭ ಕಳಚಿ ಹೋಯಿತು ಎಂದು ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡ ಚಿತ್ರದಲ್ಲಿ, ನನ್ನ ತಂದೆ ಪ್ರಮೋದ್ ಚಾವ್ಲಾ ಸೋಮವಾರ ಬೆಳಿಗ್ಗೆ ನಿಧನರಾದರು ಎಂದು ನಾವು ಬಹಳ ದುಃಖದಿಂದ ತಿಳಿಸಬೇಕಾಗಿದೆ. ಅವರು ಕೋವಿಡ್ ಪಾಸಿಟಿವ್ ಆಗಿದ್ದರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ದುಃಖ ವ್ಯಕ್ತಪಡಿಸಿದೆ ಪಿಯೂಷ್ ಚಾವ್ಲಾ ಅವರು ಮುಂಬೈ ಇಂಡಿಯನ್ಸ್ ಜೊತೆ ಕೋಚಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬೈ ಟ್ವೀಟ್ ಮಾಡಿ, ಪಿಯೂಷ್ ಚಾವ್ಲಾ ತನ್ನ ತಂದೆಯನ್ನು ಕಳೆದುಕೊಂಡಿದ್ದಾರೆ ಈ ನೋವಿನ ಸಮಯದಲ್ಲಿ ನಾವು ಪಿಯೂಷ್ ಮತ್ತು ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಬರೆದುಕೊಂಡಿದೆ.
Our thoughts go out to Piyush Chawla who lost his father, Mr. Pramod Kumar Chawla this morning.
We are with you and your family in this difficult time. Stay strong. pic.twitter.com/81BJBfkzyv
— Mumbai Indians (@mipaltan) May 10, 2021
Published On - 3:35 pm, Mon, 10 May 21