ಶಶಿಕಲಾ ಬೆಂಬಲಿಗರ ಕಾರು ಸಂಪೂರ್ಣ ಭಸ್ಮ; ಕೃಷ್ಣಗಿರಿ ಟೋಲ್ ಬಳಿ ಪಟಾಕಿ ಸಿಡಿದು ಅನಾಹುತ

| Updated By: ganapathi bhat

Updated on: Apr 06, 2022 | 8:10 PM

ಶಶಿಕಲಾ ಅದ್ಧೂರಿ ಸ್ವಾಗತಕ್ಕೆ ಕಾರಿನಲ್ಲಿ ಪಟಾಕಿ ತರಲಾಗಿತ್ತು. ಪಟಾಕಿ ಇಟ್ಟಿದ್ದ ಕಾರು ಸಂಪೂರ್ಣ ಸುಟ್ಟುಭಸ್ಮವಾಗಿದೆ. ಕೃಷ್ಣಗಿರಿಯ ಟೋಲ್‌ಗೇಟ್ ಬಳಿ ಘಟನೆ ಸಂಭವಿಸಿದೆ.

ಶಶಿಕಲಾ ಬೆಂಬಲಿಗರ ಕಾರು ಸಂಪೂರ್ಣ ಭಸ್ಮ; ಕೃಷ್ಣಗಿರಿ ಟೋಲ್ ಬಳಿ ಪಟಾಕಿ ಸಿಡಿದು ಅನಾಹುತ
ವಿ.ಕೆ. ಶಶಿಕಲಾ ಅಭಿಮಾನಿಗಳ ಕಾರು ಭಸ್ಮ
Follow us on

ಕೃಷ್ಣಗಿರಿ: ಶಶಿಕಲಾ ನಟರಾಜನ್ ಚೆನ್ನೈಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಸ್ವಾಗತಕ್ಕೆ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದರು. ಸ್ವಾಗತದ ಸಂಭ್ರಮದ ಮಧ್ಯೆ ಅವಘಡವೊಂದು ಸಂಭವಿಸಿದೆ. ಶಶಿಕಲಾ ಸ್ವಾಗತಕ್ಕೆಂದು ಪಟಾಕಿಯನ್ನು ಹೊತ್ತು ತರುತ್ತಿದ್ದ ಕಾರ್, ಕೃಷ್ಣಗಿರಿ ಟೋಲ್ ಬಳಿ ಬೆಂಕಿಗಾಹುತಿಯಾಗಿದೆ. ಪಟಾಕಿ ಸಿಡಿದು ಘಟನೆ ನಡೆದಿದೆ.

ಶಶಿಕಲಾ ನಟರಾಜನ್ ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಸ್ವಾಗತಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿತ್ತು. ಶಶಿಕಲಾ ಸ್ವಾಗತಕ್ಕಾಗಿ ಅಭಿಮಾನಿಗಳು ಸಂತಸದಿಂದ ಪಾಲ್ಗೊಂಡಿದ್ದರು. ಸಂಭ್ರಮದ ಸ್ವಾಗತಕ್ಕೆ ಪಟಾಕಿಯನ್ನು ತರಲಾಗಿತ್ತು. ಇದೀಗ, ಪಟಾಕಿ ತಂದಿದ್ದ ಅಭಿಮಾನಿಯ ಕಾರುಗಳು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿವೆ.

ಶಶಿಕಲಾ ಅದ್ಧೂರಿ ಸ್ವಾಗತಕ್ಕೆ ಕಾರಿನಲ್ಲಿ ಪಟಾಕಿ ತರಲಾಗಿತ್ತು. ಪಟಾಕಿ ಇಟ್ಟಿದ್ದ ಕಾರು ಸಂಪೂರ್ಣವಾಗಿ ಸುಟ್ಟುಭಸ್ಮವಾಗಿದೆ. ಕೃಷ್ಣಗಿರಿಯ ಟೋಲ್‌ಗೇಟ್ ಬಳಿ ಪಟಾಕಿ ಸಿಡಿದು ಘಟನೆ ಸಂಭವಿಸಿದೆ.

ತವರಿಗೆ ತೆರಳುತ್ತಿರುವ ಶಶಿಕಲಾ ನಟರಾಜನ್; ಅಭಿಮಾನಿಗಳನ್ನು ಕಂಡು ಭಾವುಕ

Published On - 1:08 pm, Mon, 8 February 21