ಟಿವಿ9 -ಬಿಗ್​ ಎಫ್​ಎಂ ಸಹಯೋಗದಲ್ಲಿ ಗಲ್ಫ್​ ಸುರಕ್ಷಾ ಬಂಧನ್​! 10,000 ಕ್ಕೂ ಹೆಚ್ಚು ಟ್ರಕ್​ ಡ್ರೈವರ್​​ಗಳಿಗೆ ಕೊರೊನಾ ಲಸಿಕೆ

Suraksha Bandhan Season 3 ಉದ್ದೇಶದ ಅನ್ವಯ 10,000 ಕ್ಕೂ ಹೆಚ್ಚು ಟ್ರಕ್​ ಡ್ರೈವರ್​​ಗಳಿಗೆ ಲಸಿಕೆ ಹಾಕಿಸಲಾಗುವುದು. ಈ ಕಾರ್ಯವು ಆಗಸ್ಟ್​ 6ರಿಂದ 22 ರವರೆಗೂ 11 ನಗರಗಳಲ್ಲಿ 12 ಟ್ರಾನ್ಸ್​​​ಪೋರ್ಟ್​​ ಹಬ್​​ಗಳಲ್ಲಿ ಹಮ್ಮಿಕೊಳ್ಳಲಾಗುವುದು. ಇಂದೋರ್, ಅಹಮದಾಬಾದ್ ಮತ್ತು ನವಿ ಮುಂಬೈ ಮಹಾನಗರಗಳಲ್ಲಿ ಇಂದು ಲಸಿಕೆ ಹಾಕಿಸುವ ಕಾರ್ಯಕ್ರಮ ಉದ್ಘಾಟನೆ ನೆರವೇರಿತು.

TV9kannada Web Team

| Edited By: sadhu srinath

Aug 06, 2021 | 2:33 PM

ಟ್ರಕ್​ ಡ್ರೈವರ್​​ಗಳು ದೇಶದಾದ್ಯಂತ ಕೊರೊನಾ ಸೋಂಕು ಸಂಕಟ ಕಾಲದಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ನಿವಾರಣೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ದೈನಂದಿನ ಬದುಕು ಸುಗಮವಾಗಿ ನಡೆಯುವಂತಾಗಿದೆ. ಈ ಟ್ರಕ್​ ಡ್ರೈವರ್​​ಗಳು (truck drivers) ನಿಜಕ್ಕೂ ದೇಶದ ಆರ್ಥಿಕತೆಯ ಬೆನ್ನೆಲುಬಾಗಿ ಬಲಿಷ್ಠರಾಗಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ (lockdown) ಅತ್ಯವಶ್ಯಕ ಸರಕುಗಳನ್ನು ಸಾಗಾಟ ಮಾಡುವಲ್ಲಿ ಟ್ರಕ್​ ಡ್ರೈವರ್​​ಗಳ ಸೇವೆ ಅನನ್ಯವಾಗಿದೆ. ಅದರಲ್ಲೂ ಮೆಡಿಕಲ್ ಆಕ್ಸಿಜನ್​ (medical oxygen)​ ಅಂತಹ ಅತ್ಯವಶ್ಯಕ ವಸ್ತುಗಳನ್ನು ಸಾಗಿಸುವಲ್ಲಿ ಇವರ ಶ್ರಮ ಅದ್ವಿತೀಯವಾಗಿದೆ.

ಈ ಟ್ರಕ್​ ಡ್ರೈವರ್​​ಗಳು ಅಮೂಲ್ಯ ಸೇವೆಯನ್ನು ಪರಿಗಣಿಸಿ ಗಲ್ಫ್​ ಆಯಿಲ್ ಲ್ಯೂಬ್ರಿಕೆಂಟ್ಸ್ (Gulf Oil Lubricants India Limited)​ ಕಂಪನಿಯು​ ಟಿವಿ9 ನೆಟ್​ವರ್ಕ್​​ (TV9 Network) ಮತ್ತು ಬಿಗ್​ ಎಫ್​ಎಂ (Big FM) ಸಹಯೋಗದೊಂದಿಗೆ ಒಂದು ಉದಾತ್ತ ಯೋಜನೆ ಹಮ್ಮಿಕೊಂಡಿದೆ. ಸುರಕ್ಷಾ ಬಂಧನ್​ (Suraksha Bandhan campaign) ಎಂಬ ಕಾರ್ಯಯೋಜನೆಯಂತೆ ಪ್ರಮುಖ ಸಾರಿಗೆ ಮಾರ್ಗಗಳಲ್ಲಿ (transport hubs) ಸಂಚರಿಸುವ ನಿಸ್ವಾರ್ಥ ಸೇವಕ ಟ್ರಕ್​ ಡ್ರೈವರ್​​ಗಳಿಗೆ ಕೊರೊನಾ ಲಸಿಕೆ ಹಾಕಿಸುವ (vaccination drive) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Suraksha Bandhan Season 3 ಉದ್ದೇಶದ ಅನ್ವಯ 10,000 ಕ್ಕೂ ಹೆಚ್ಚು ಟ್ರಕ್​ ಡ್ರೈವರ್​​ಗಳಿಗೆ ಲಸಿಕೆ ಹಾಕಿಸಲಾಗುವುದು. ಈ ಕಾರ್ಯವು ಆಗಸ್ಟ್​ 6ರಿಂದ 22 ರವರೆಗೂ 11 ನಗರಗಳಲ್ಲಿ 12 ಟ್ರಾನ್ಸ್​​​ಪೋರ್ಟ್​​ ಹಬ್​​ಗಳಲ್ಲಿ ಹಮ್ಮಿಕೊಳ್ಳಲಾಗುವುದು. ಇಂದೋರ್, ಅಹಮದಾಬಾದ್ ಮತ್ತು ನವಿ ಮುಂಬೈ ಮಹಾನಗರಗಳಲ್ಲಿ ಇಂದು ಲಸಿಕೆ ಹಾಕಿಸುವ ಕಾರ್ಯಕ್ರಮ ಉದ್ಘಾಟನೆ ನೆರವೇರಿತು.

vaccination drive to truck drivers Gulf Super fleet Suraksha Bandhan Season 3 in partnership with tv9 and Big FM

ಟ್ರಕ್​ ಡ್ರೈವರ್​​ಗಳ ಅಮೂಲ್ಯ ಸೇವೆಯನ್ನು ಪರಿಗಣಿಸಿ ಗಲ್ಫ್​ ಆಯಿಲ್ ಲ್ಯೂಬ್ರಿಕೆಂಟ್ಸ್ ಕಂಪನಿಯು​ ಟಿವಿ9 ನೆಟ್​ವರ್ಕ್​​ ಮತ್ತು ಬಿಗ್​ ಎಫ್​ಎಂ ಸಹಯೋಗದೊಂದಿಗೆ ಸುರಕ್ಷಾ ಬಂಧನ್​ ಎಂಬ ಉದಾತ್ತ ಯೋಜನೆ ಹಮ್ಮಿಕೊಂಡಿದೆ.

(vaccination drive to truck drivers Gulf Super fleet Suraksha Bandhan Season 3 in partnership with tv9 and Big FM)

Follow us on

Related Stories

Most Read Stories

Click on your DTH Provider to Add TV9 Kannada