ಟ್ರಕ್ ಡ್ರೈವರ್ಗಳು ದೇಶದಾದ್ಯಂತ ಕೊರೊನಾ ಸೋಂಕು ಸಂಕಟ ಕಾಲದಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ನಿವಾರಣೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ದೈನಂದಿನ ಬದುಕು ಸುಗಮವಾಗಿ ನಡೆಯುವಂತಾಗಿದೆ. ಈ ಟ್ರಕ್ ಡ್ರೈವರ್ಗಳು (truck drivers) ನಿಜಕ್ಕೂ ದೇಶದ ಆರ್ಥಿಕತೆಯ ಬೆನ್ನೆಲುಬಾಗಿ ಬಲಿಷ್ಠರಾಗಿದ್ದಾರೆ.
ಲಾಕ್ಡೌನ್ ಸಮಯದಲ್ಲಿ (lockdown) ಅತ್ಯವಶ್ಯಕ ಸರಕುಗಳನ್ನು ಸಾಗಾಟ ಮಾಡುವಲ್ಲಿ ಟ್ರಕ್ ಡ್ರೈವರ್ಗಳ ಸೇವೆ ಅನನ್ಯವಾಗಿದೆ. ಅದರಲ್ಲೂ ಮೆಡಿಕಲ್ ಆಕ್ಸಿಜನ್ (medical oxygen) ಅಂತಹ ಅತ್ಯವಶ್ಯಕ ವಸ್ತುಗಳನ್ನು ಸಾಗಿಸುವಲ್ಲಿ ಇವರ ಶ್ರಮ ಅದ್ವಿತೀಯವಾಗಿದೆ.
ಈ ಟ್ರಕ್ ಡ್ರೈವರ್ಗಳು ಅಮೂಲ್ಯ ಸೇವೆಯನ್ನು ಪರಿಗಣಿಸಿ ಗಲ್ಫ್ ಆಯಿಲ್ ಲ್ಯೂಬ್ರಿಕೆಂಟ್ಸ್ (Gulf Oil Lubricants India Limited) ಕಂಪನಿಯು ಟಿವಿ9 ನೆಟ್ವರ್ಕ್ (TV9 Network) ಮತ್ತು ಬಿಗ್ ಎಫ್ಎಂ (Big FM) ಸಹಯೋಗದೊಂದಿಗೆ ಒಂದು ಉದಾತ್ತ ಯೋಜನೆ ಹಮ್ಮಿಕೊಂಡಿದೆ. ಸುರಕ್ಷಾ ಬಂಧನ್ (Suraksha Bandhan campaign) ಎಂಬ ಕಾರ್ಯಯೋಜನೆಯಂತೆ ಪ್ರಮುಖ ಸಾರಿಗೆ ಮಾರ್ಗಗಳಲ್ಲಿ (transport hubs) ಸಂಚರಿಸುವ ನಿಸ್ವಾರ್ಥ ಸೇವಕ ಟ್ರಕ್ ಡ್ರೈವರ್ಗಳಿಗೆ ಕೊರೊನಾ ಲಸಿಕೆ ಹಾಕಿಸುವ (vaccination drive) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Suraksha Bandhan Season 3 ಉದ್ದೇಶದ ಅನ್ವಯ 10,000 ಕ್ಕೂ ಹೆಚ್ಚು ಟ್ರಕ್ ಡ್ರೈವರ್ಗಳಿಗೆ ಲಸಿಕೆ ಹಾಕಿಸಲಾಗುವುದು. ಈ ಕಾರ್ಯವು ಆಗಸ್ಟ್ 6ರಿಂದ 22 ರವರೆಗೂ 11 ನಗರಗಳಲ್ಲಿ 12 ಟ್ರಾನ್ಸ್ಪೋರ್ಟ್ ಹಬ್ಗಳಲ್ಲಿ ಹಮ್ಮಿಕೊಳ್ಳಲಾಗುವುದು. ಇಂದೋರ್, ಅಹಮದಾಬಾದ್ ಮತ್ತು ನವಿ ಮುಂಬೈ ಮಹಾನಗರಗಳಲ್ಲಿ ಇಂದು ಲಸಿಕೆ ಹಾಕಿಸುವ ಕಾರ್ಯಕ್ರಮ ಉದ್ಘಾಟನೆ ನೆರವೇರಿತು.
(vaccination drive to truck drivers Gulf Super fleet Suraksha Bandhan Season 3 in partnership with tv9 and Big FM)
Published On - 2:20 pm, Fri, 6 August 21