ಮೋದಿಯನ್ನು ಎದುರಿಸುವುದು ಇಷ್ಟು ಕಷ್ಟವೆಂದು ಉಗ್ರರು ಕನಸಿನಲ್ಲಿಯೂ ಊಹಿಸಿರುವುದಿಲ್ಲ: ಮೋದಿ

ನಮ್ಮ ನೆಲದಲ್ಲೇ ನಿಂತು ಹೆಣ್ಣುಮಕ್ಕಳ ಕುಂಕುಮ ಅಳಿಸಿದ್ದ ಉಗ್ರರಿಗೆ ಅವರ ನೆಲದಲ್ಲೇ ತಕ್ಕ ಪಾಠ ಕಲಿಸಿದ್ದೇವೆ. ಮೋದಿಯನ್ನು ಎದುರು ಹಾಕಿಕೊಂಡರೆ ಎಂಥಾ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದು ಇದೀಗ ಅವರಿಗೆ ಅರ್ಥವಾಗಿರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಬಳಿಕ ಮೊದಲ ಬಾರಿಗೆ ಪ್ರಧಾನಿ ಗುಜರಾತ್​ಗೆ ಭೇಟಿ ನೀಡಿದ್ದಾರೆ. ಮೊದಲು ರೋಡ್​ ಶೋ ನಡೆಸಿದರು.

ಮೋದಿಯನ್ನು ಎದುರಿಸುವುದು ಇಷ್ಟು ಕಷ್ಟವೆಂದು ಉಗ್ರರು ಕನಸಿನಲ್ಲಿಯೂ ಊಹಿಸಿರುವುದಿಲ್ಲ: ಮೋದಿ
ನರೇಂದ್ರ ಮೋದಿ
Image Credit source: PTI

Updated on: May 26, 2025 | 2:27 PM

ವಡೋದರಾ, ಮೇ 26: ಮೋದಿಯನ್ನು ಎದುರಿಸುವುದು ಇಷ್ಟವೆಂದು ಉಗ್ರರು ಕನಸಿನಲ್ಲಿಯೂ ನೆನೆಸಿರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಗುಜರಾತ್​ನ ವಡೋದರಾದಲ್ಲಿ ರೋಶ್​ ಶೋ ನಡೆಸಿ ಬಳಿಕ ಮಾತನಾಡಿದ ಅವರು, ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರನ್ನು ಸುಮ್ಮನೆ ಬಿಡಲಾದೀತೆ ಹೊಸಕಿ ಹಾಕಿದ್ದೇವೆ ಎಂದರು. ಆಪರೇಷನ್ ಸಿಂಧೂರ್ ನಂತರ ಪ್ರಧಾನಿ ಮೋದಿ ಗುಜರಾತ್‌ಗೆ ನೀಡುತ್ತಿರುವ ಮೊದಲ ಭೇಟಿ ಇದು.

ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ರೋಡ್​ ಶೋ ಬಳಿಕ ದಾಹೋದ್‌ನಲ್ಲಿ 9000 HP ಪವರ್ ಇಂಜಿನ್ ಸ್ಥಾವರವನ್ನು ಉದ್ಘಾಟಿಸಿದರು.ಆಪರೇಷನ್ ಸಿಂಧೂರ್ ಕೇವಲ ಒಂದು ಕಾರ್ಯಾಚರಣೆಯಲ್ಲ. ಮೋದಿಯನ್ನು ಎದುರಿಸುವುದು ಇಷ್ಟು ಕಷ್ಟ ಎಂದು ಭಯೋತ್ಪಾದಕರು ಕನಸಿನಲ್ಲಿಯೂ ಊಹಿಸಿರಲಿಲ್ಲ.

ಒಮ್ಮೆ ಆಲೋಚಿಸಿ ನೋಡಿ, ಒಬ್ಬ ತಂದೆಗೆ ತನ್ನ ಮಕ್ಕಳ ಮುಂದೆಯೇ ಗುಂಡು ಹಾರಿಸಲಾಗಿದೆ. ಇಂದಿಗೂ ಆ ಚಿತ್ರವನ್ನು ನೋಡಿದಾಗ ನನ್ನ ರಕ್ತ ಕುದಿಯುತ್ತದೆ. ಹಾಗಾಗಿ ದೇಶದ ಜನರು ಅವರನ್ನು ಯಾವುದಕ್ಕಾಗಿ ಆಯ್ಕೆ ಮಾಡಿದ್ದರೋ ಅದನ್ನು ಮೋದಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಮತ್ತಷ್ಟು ಓದಿ: ವಡೋದರಾ: ಪ್ರಧಾನಿ ಮೋದಿ ರೋಡ್​ ಶೋ, ಭಯೋತ್ಪಾದನೆ ವಿರುದ್ಧದ ಬ್ಯಾನರ್​ ಹಿಡಿದು ಸಾಥ್​ ನೀಡಿದ ಆಫ್ರಿಕಾ ವಿದ್ಯಾರ್ಥಿಗಳು

ನಾವು ಅವರನ್ನು 22 ನಿಮಿಷಗಳಲ್ಲಿ ಮಣ್ಣಿನಲ್ಲಿ ಹೂತುಹಾಕಿದ್ದೇವೆ. ವಿಭಜನೆಯ ನಂತರ ಹುಟ್ಟಿದ ದೇಶಕ್ಕೆ ಒಂದೇ ಒಂದು ಗುರಿ ಇತ್ತು, ಭಾರತಕ್ಕೆ ಹಾನಿ ಮಾಡುವುದು. ಆದರೆ ನಮ್ಮ ಗುರಿ ಅಭಿವೃದ್ಧಿ ಹೊಂದಿದ ಭಾರತವಾಗುವುದು, ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2014ರ ಈ ದಿನದಂದು ನಾನು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ ಎಂದು ಹೇಳಿದರು. ನಾನು ದೇಶ ಸೇವೆಯಲ್ಲಿ ನಿರತನಾಗಿದ್ದೇನೆ. ಈ ವರ್ಷಗಳಲ್ಲಿ, ದೇಶವು ಊಹಿಸಲೂ ಅಸಾಧ್ಯವಾದ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿದೆ.

ಈ ವರ್ಷಗಳಲ್ಲಿ, ನಾವು ದಶಕಗಳಷ್ಟು ಹಳೆಯದಾದ ಸರಪಳಿಗಳನ್ನು ಮುರಿದಿದ್ದೇವೆ. ದೇಶವು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸುತ್ತಿದೆ. ಇಂದು ದೇಶವು ಹತಾಶೆಯ ಕತ್ತಲೆಯಿಂದ ಹೊರಬಂದಿದೆ ಮತ್ತು ಆತ್ಮವಿಶ್ವಾಸದ ಬೆಳಕಿನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದೆ. ಇಂದು ನಾವು 140 ಕೋಟಿ ಭಾರತೀಯರು ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲು ನಮ್ಮೆಲ್ಲರ ಶಕ್ತಿಯಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.

ದೇಶದ ಪ್ರಗತಿಗೆ ಏನು ಬೇಕೋ ಅದನ್ನು ನಾವು ಭಾರತದಲ್ಲಿಯೇ ಮಾಡಬೇಕು, ಇದು ಇಂದಿನ ಬೇಡಿಕೆಯಾಗಿದೆ ಎಂದು ಅವರು ಹೇಳಿದರು. ಇಂದು ಭಾರತವು ಉತ್ಪಾದನಾ ಜಗತ್ತಿನಲ್ಲಿ ವೇಗವಾಗಿ ಮುನ್ನಡೆಯುತ್ತಿದೆ.

ಭಾರತವು ಜಗತ್ತಿಗೆ ಸರಕುಗಳನ್ನು ರಫ್ತು ಮಾಡುತ್ತಿದೆ
ಇಂದು ನಾವು ಸ್ಮಾರ್ಟ್ ಫೋನ್‌ಗಳಿಂದ ಹಿಡಿದು ವಾಹನಗಳು, ಆಟಿಕೆಗಳು, ಮಿಲಿಟರಿ ಶಸ್ತ್ರಾಸ್ತ್ರಗಳು ಮತ್ತು ಔಷಧಿಗಳವರೆಗೆ ಪ್ರಪಂಚದಾದ್ಯಂತದ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಇಂದು ಭಾರತವು ರೈಲ್ವೆ, ಮೆಟ್ರೋ ಮತ್ತು ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ತಯಾರಿಸುವುದಲ್ಲದೆ, ಅದನ್ನು ಜಗತ್ತಿಗೆ ರಫ್ತು ಮಾಡುತ್ತದೆ. ನಮ್ಮ ದಾಹೋದ್ ಇದಕ್ಕೆ ಜೀವಂತ ಉದಾಹರಣೆ.

ನಾನು 3 ವರ್ಷಗಳ ಹಿಂದೆ ಅದರ ಅಡಿಪಾಯ ಹಾಕಲು ಬಂದಿದ್ದೆ. ಈಗ ಈ ಕಾರ್ಖಾನೆಯಲ್ಲಿ ಮೊದಲ ವಿದ್ಯುತ್ ಲೋಕೋಮೋಟಿವ್ ಸಿದ್ಧವಾಗಿದೆ. ಇಂದು ಗುಜರಾತ್ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಗುಜರಾತ್‌ನ ಶೇ.100 ರೈಲ್ವೆ ಜಾಲದ ವಿದ್ಯುದೀಕರಣ ಪೂರ್ಣಗೊಂಡಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ