- Kannada News Photo gallery Vadodara: Members of the African community welcomed PM Modi, holding placards with quotes as India’s courage is the light that ends the evil of terrorism
ವಡೋದರಾ: ಪ್ರಧಾನಿ ಮೋದಿ ರೋಡ್ ಶೋ, ಭಯೋತ್ಪಾದನೆ ವಿರುದ್ಧದ ಬ್ಯಾನರ್ ಹಿಡಿದು ಸಾಥ್ ನೀಡಿದ ಆಫ್ರಿಕಾ ವಿದ್ಯಾರ್ಥಿಗಳು
ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ವಡೋದರಾದಲ್ಲಿ ರೋಡ್ ಶೋ ನಡೆಸಿದರು. ಒಂದೆಡೆ ಕರ್ನಲ್ ಖುರೇಷಿ ಕುಟುಂಬದವರು ಪಾಲ್ಗೊಂಡಿದ್ದರೆ. ಮತ್ತೊಂದೆಡೆ ಭಯೋದತ್ಪಾದನೆ ವಿರುದ್ಧದ ಬ್ಯಾನರ್ ಹಿಡಿದು ಆಫ್ರಿಕಾದ ವಿದ್ಯಾರ್ಥಿಗಳು ಕೂಡ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗುಜರಾತ್‌ನ ವಡೋದರಾದಲ್ಲಿ ರೋಡ್ ಶೋ ನಡೆಸಿದರು, ಅಲ್ಲಿ ಜನರು ತಮ್ಮ ನೆಚ್ಚಿನ ನಾಯಕನನ್ನು ನೋಡಲು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು.
Updated on:May 26, 2025 | 12:26 PM

ಪ್ರಧಾನಿ ನರೇಂದ್ರ ಮೋದಿ ಇಂದು ವಡೋದರಾದಲ್ಲಿ ನಡೆಸಿದ ರೋಡ್ ಶೋನಲ್ಲಿ ಆಫ್ರಿಕಾದ ವಿದ್ಯಾರ್ಥಿಗಳು ಕೂಡ ಪಾಲ್ಗೊಂಡಿದ್ದರು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿ ಎನ್ನುವ ಬ್ಯಾನರ್ಗಳನ್ನು ಹಿಡಿದಿದ್ದರು. ಭಾರತ ನ್ಯಾಯಯುತವಾಗಿ ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸಿತು. ಭಾರತದ ಧೈರ್ಯವು ಭಯೋತ್ಪಾದನೆಯ ದುಷ್ಟತನವನ್ನು ಕೊನೆಗೊಳಿಸುವ ಬೆಳಕು ಮುಂತಾದ ಉಲ್ಲೇಖಗಳನ್ನು ಹೊಂದಿರುವ ಫಲಕಗಳನ್ನು ಹಿಡಿದು ಆಫ್ರಿಕನ್ ಸಮುದಾಯದ ಸದಸ್ಯರು ಪ್ರಧಾನಿಯನ್ನು ಸ್ವಾಗತಿಸಿದರು.

ಭಾರತ್ ಮಾತಾ ಕಿ ಜೈ, ಮೋದಿ-ಮೋದಿ ಮತ್ತು ವಂದೇ ಮಾತರಂ ಘೋಷಣೆಗಳು ಬೀದಿಗಳಲ್ಲಿ ಪ್ರತಿಧ್ವನಿಸಿದವು, ಜನರು ವಿಶೇಷ ಸಿಂಧೂರ್ ಸಮ್ಮಾನ್ ಯಾತ್ರೆಯಲ್ಲಿ ಭಾಗವಹಿಸಿ, ರಾಷ್ಟ್ರಧ್ವಜವನ್ನು ಬೀಸುತ್ತಾ ಮತ್ತು ಪ್ರಧಾನಿಯವರ ಮೇಲೆ ಹೂವುಗಳ ಸುರಿಮಳೆಗೈದಿದ್ದಾರೆ.

ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂದೂರ್‌ನ ಯಶಸ್ಸನ್ನು ಶ್ಲಾಘಿಸುವ ಜನರಿಂದ ರಸ್ತೆಗಳ ಉದ್ದಕ್ಕೂ ಭಾರತೀಯ ಸಶಸ್ತ್ರ ಪಡೆಗಳ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಭಾರತ ಇತ್ತೀಚೆಗೆ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ನಂತರ ಪ್ರಧಾನಿ ಮೋದಿ ತಮ್ಮ ತವರು ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿ ಇದು.

ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ವಡೋದರಾದಲ್ಲಿ ರೋಡ್ ಶೋ ನಡೆಸಿದ್ದು, ಕರ್ನಲ್ ಖುರೇಷಿ ಕುಟುಂಬವೂ ಕೂಡ ಭಾಗಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮೇಲೆ ಹೂವಿನ ಸುರಿಮಳೆಗೈದಿರುವ ವಿಡಿಯೋ ಇಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರಲಿದ್ದಾರೆ.

ಮಹಿಸಾಗರ್ ಮತ್ತು ದಾಹೋದ್ ಜಿಲ್ಲೆಗಳ 193 ಹಳ್ಳಿಗಳು ಮತ್ತು ಒಂದು ಪಟ್ಟಣದ 4.62 ಲಕ್ಷ ಜನರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ 181 ಕೋಟಿ ರೂ. ವೆಚ್ಚದ ನಾಲ್ಕು ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಡೋದರಾದಲ್ಲಿ ಇಂದು ರೋಡ್ ಶೋ ನಡೆಸಿದರು. ಜನರು ತಮ್ಮ ನೆಚ್ಚಿನ ನಾಯಕನನ್ನು ನೋಡಲು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ರೋಡ್ ಶೋಗೆ ಮುಂಚಿತವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಪ್ರಧಾನಿ ಮೋದಿ ಈ ಪ್ರದೇಶದಲ್ಲಿ ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಅಡಿಪಾಯ ಹಾಕಲಿದ್ದಾರೆ
Published On - 12:25 pm, Mon, 26 May 25




