ವಂದೇ ಮಾತರಂ : ಶತ ಸಂಗೀತ ಸಂಯೋಜಕರ ಅಮೋಘ ಸಿರಿಕಂಠದಲ್ಲಿ!

| Updated By: ಸಾಧು ಶ್ರೀನಾಥ್​

Updated on: Aug 15, 2020 | 11:55 AM

[lazy-load-videos-and-sticky-control id=”XRhdGUe4KyY”] ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಭಾರತದ ಸ್ವಾತಂತ್ರ್ಯಕ್ಕಾಗಿ ಮಣಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನ ನೆನೆಯುವ ಸುವರ್ಣ ದಿನ. ಈ ಸುಸಂದರ್ಭದಂದು, ಟಿವಿ 9 ನೆಟ್​ವರ್ಕ್​ ಹಾಗೂ ದಿ ಮ್ಯೂಸಿಕ್​ ಕಂಪೋಸರ್ಸ್ ಅಸೋಸಿಯೇಷನ್​ ಆಫ್​ ಇಂಡಿಯಾ ಅವರ ಸಹಭಾಗಿತ್ವದಲ್ಲಿ ಒಂದು ಐತಿಹಾಸಿಕ ಮ್ಯೂಸಿಕ್​ ವಿಡಿಯೋವನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ. ಹೌದು, ನಮ್ಮ ನೆಚ್ಚಿನ ವಂದೇ ಮಾತರಂ​ ಗೀತೆಯನ್ನು ಇದೇ ಮೊದಲ ಬಾರಿಗೆ ದೇಶದ 100 ಅತ್ಯುತ್ತಮ ಸಂಗೀತ ಸಂಯೋಜಕರು ಜೊತೆಗೋಡಿ ವಿಭಿನ್ನ ರೀತಿಯಲ್ಲಿ ಅರ್ಪಿಸಿದ್ದಾರೆ. ಇದರ […]

ವಂದೇ ಮಾತರಂ : ಶತ ಸಂಗೀತ ಸಂಯೋಜಕರ ಅಮೋಘ ಸಿರಿಕಂಠದಲ್ಲಿ!
Follow us on

[lazy-load-videos-and-sticky-control id=”XRhdGUe4KyY”]

ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಭಾರತದ ಸ್ವಾತಂತ್ರ್ಯಕ್ಕಾಗಿ ಮಣಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನ ನೆನೆಯುವ ಸುವರ್ಣ ದಿನ.

ಈ ಸುಸಂದರ್ಭದಂದು, ಟಿವಿ 9 ನೆಟ್​ವರ್ಕ್​ ಹಾಗೂ ದಿ ಮ್ಯೂಸಿಕ್​ ಕಂಪೋಸರ್ಸ್ ಅಸೋಸಿಯೇಷನ್​ ಆಫ್​ ಇಂಡಿಯಾ ಅವರ ಸಹಭಾಗಿತ್ವದಲ್ಲಿ ಒಂದು ಐತಿಹಾಸಿಕ ಮ್ಯೂಸಿಕ್​ ವಿಡಿಯೋವನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ.

ಹೌದು, ನಮ್ಮ ನೆಚ್ಚಿನ ವಂದೇ ಮಾತರಂ​ ಗೀತೆಯನ್ನು ಇದೇ ಮೊದಲ ಬಾರಿಗೆ ದೇಶದ 100 ಅತ್ಯುತ್ತಮ ಸಂಗೀತ ಸಂಯೋಜಕರು ಜೊತೆಗೋಡಿ ವಿಭಿನ್ನ ರೀತಿಯಲ್ಲಿ ಅರ್ಪಿಸಿದ್ದಾರೆ. ಇದರ ಮೂಲಕ ಆತ್ಮನಿರ್ಭರ ಭಾರತವನ್ನು ಕಟ್ಟುವ ದೃಢ ವಿಶ್ವಾಸ ಮತ್ತು ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಆನಂದ್​ಜೀ ಬಾಯಿ ಶಾ, ಪ್ಯಾರೇಲಾಲ್​ ಶರ್ಮ, ಹರಿಪ್ರಸಾದ್​ ಚೌರಸಿಯಾ, ಲೂಯಿಸ್​ ಬ್ಯಾಂಕ್ಸ್​ ರಂಥ ಸಂಗೀತ ದಿಗ್ಗಜರು ಸೇರಿದಂತೆ ರಿಕ್ಕಿ ಕೇಜ್​, ಶಂಕರ್​ ಎಹಸಾನ್​ ಲಾಯ್​, ಸಲೀಮ್​ ಸುಲೈಮಾನ, ವಿಶಾಲ್​ ಶೇಖರ್​, ಸಾಜಿದ್​ ಖಾನ್​, ಶ್ರವಣ್​ ರಾಥೋಡ್​, ಕೈಲಾಶ್​ ಖೇರ್​, ಶಾನ್​, ಅದ್ನಾನ್​ ಸಮಿ, ಹರಿಹರನ್​, ಲೆಸ್ಲಿ ಲೂಯಿಸ್, ರಾಮ್​ ಸಂಪತ್​, ಶಾಂತನು ಮೋಯಿತ್ರಾ, ವಿದ್ಯಾಸಾಗರ ಹೀಗೆ ಹಲವು ಖ್ಯಾತ ಪ್ರತಿಭೆಗಳ ಗಾನಸಂಪತ್ತನ್ನು ಸಹ ಈ ಮ್ಯೂಸಿಕ್​ ವಿಡಿಯೋದಲ್ಲಿ ನೋಡಬಹುದು.

Published On - 7:30 am, Sat, 15 August 20