ವಾರಣಾಸಿ: ಸ್ವರ್ವೇದ್ ಮಹಾಮಂದಿರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

|

Updated on: Dec 18, 2023 | 12:13 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯ ಉಮರಹಾದಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವರ್ವೇದ್ ಮಹಾಮಂದಿರಕ್ಕೆ ಭೇಟಿ ನೀಡಿ ನೂತನವಾಗಿ ನಿರ್ಮಿಸಿರುವ ದೇವಾಲಯದ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಸುಮಾರು 20 ಸಾವಿರ ಕೋಟಿ ರೂಪಾಯಿಗಳ 37 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ವಾರಣಾಸಿ: ಸ್ವರ್ವೇದ್ ಮಹಾಮಂದಿರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಸ್ವರ್ವೇದ್ ಮಹಾಮಂದಿರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
Follow us on

ವಾರಣಾಸಿ, ಡಿ.18: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ವಾರಣಾಸಿಯ ಉಮರಹಾದಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವರ್ವೇದ್ ಮಹಾಮಂದಿರಕ್ಕೆ ಭೇಟಿ ನೀಡಿ ನೂತನವಾಗಿ ನಿರ್ಮಿಸಿರುವ ದೇವಾಲಯದ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಸುಮಾರು 20 ಸಾವಿರ ಕೋಟಿ ರೂಪಾಯಿಗಳ 37 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎರಡು ಪ್ರಮುಖ ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ಬನಾರಸ್ ಮತ್ತು ಕನ್ಯಾಕುಮಾರಿ (ಕಾಶಿ ತಮಿಳು ಸಂಗಮಮ್ ವೀಕ್ಲಿ ಎಕ್ಸ್‌ಪ್ರೆಸ್) ನಡುವೆ ಹೊಸ ರೈಲಿಗೆ ಚಾಲನೆ ನೀಡಲಿದ್ದಾರೆ.

ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಮಂತ್ರಿಯವರು ವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ದೋಹ್ರಿಘಾಟ್-ಮೌ MEMU ರೈಲು ಮತ್ತು ಲಾಂಗ್ ಹಾಲ್ ಗೂಡ್ಸ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಸರಕು ಸಾಗಣೆ ಕಾರಿಡಾರ್‌ಗೂ ಚಾಲನೆ ನೀಡಿದ್ದಾರೆ.

ಪ್ರಧಾನಮಂತ್ರಿಯವರು ಪ್ರಾರಂಭಿಸುವ ಯೋಜನೆಗಳು

1. ಸುಮಾರು ರೂ 10,900 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಪಂಡಿತ್ ದೀನದಯಾಳ್ ಉಪಾಧ್ಯಾಯ ನಗರ-ಹೊಸ ಭೌಪುರ್ ಮೀಸಲಾದ ಸರಕು ಸಾಗಣೆ ಕಾರಿಡಾರ್ ಯೋಜನೆ

2. ಇತರ ರೈಲ್ವೆ ಯೋಜನೆಗಳಿಗೆ ಚಾಲನೆ ಕೂಡ ನೀಡಲಿದ್ದಾರೆ. ಬಲ್ಲಿಯಾ-ಘಾಜಿಪುರ ಸಿಟಿ ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆ; ಇಂದಾರ-ದೋಹ್ರಿಘಾಟ್ ರೈಲು ಮಾರ್ಗದ ಗೇಜ್ ಪರಿವರ್ತನೆ ಯೋಜನೆ

3. ಈ ಕಾರ್ಯಕ್ರಮಗಳ ಜತೆಗೆ ಪ್ರಧಾನಿಯವರು ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

4. ಸಾರ್ವಜನಿಕ ಸಮಾರಂಭದಲ್ಲಿ ಸುಮಾರು 19,150 ಕೋಟಿ ರೂ. ಯೋಜನೆಗಳಿಗೆ ಚಾಲನೆ

5. ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ, ಪ್ರವಾಸಿ ತಾಣಗಳ ಬಗ್ಗೆ ವೆಬ್‌ಸೈಟ್ ಮಾಹಿತಿ ಮತ್ತು ಏಕೀಕೃತ ಪ್ರವಾಸಿ ಪಾಸ್ ವ್ಯವಸ್ಥೆಗೆ ಪ್ರಧಾನ ಮಂತ್ರಿ ಚಾಲನೆ.

6. 6500 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ.

7. ನವೀಕರಿಸಲಾಗದ ಇಂಧನ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ, ಚಿತ್ರಕೂಟ ಜಿಲ್ಲೆಯಲ್ಲಿ ಸುಮಾರು 4000 ಕೋಟಿ ರೂ. ವೆಚ್ಚದಲ್ಲಿ 800 MW ಸೌರ ಪಾರ್ಕ್‌ನ ಅಡಿಪಾಯವನ್ನು ಪ್ರಧಾನಿ ಹಾಕಲಿದ್ದಾರೆ. ಪೆಟ್ರೋಲಿಯಂ ಪೂರೈಕೆ ಹೆಚ್ಚಿಸಲು ಮಿರ್ಜಾಪುರದಲ್ಲಿ 1050 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಿರುವ ಹೊಸ ಪೆಟ್ರೋಲಿಯಂ ತೈಲ ಟರ್ಮಿನಲ್‌ನ ನಿರ್ಮಾಣದ ಅಡಿಪಾಯವನ್ನು ಅವರು ಹಾಕಲಿದ್ದಾರೆ.

 

Published On - 11:41 am, Mon, 18 December 23