ವಾರಾಣಸಿ: ಪುಟ್ಟ ಬಾಲಕಿಯ ಕವಿತೆಗೆ ಮಾರುಹೋದ ಪ್ರಧಾನಿ ಮೋದಿ – ಇಲ್ಲಿದೆ ವಿಡಿಯೋ
Varanasi student with PM Modi: ಸಸ್ಯಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯ ಬಗ್ಗೆ ವೈಷ್ಣವಿ ಪಟೇಲ್ ಎಂಬ ಬಾಲಕಿಯ ಕಾವ್ಯಾತ್ಮಕ ವಿವರಣೆಯನ್ನು ತನ್ಮಯರಾಗಿ ಆಲಿಸಿದ ಮೋದಿ, ಆ ಕ್ಷಣದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ನವದೆಹಲಿ, ಡಿಸೆಂಬರ್ 18: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉತ್ತರ ಪ್ರದೇಶದ ವಾರಣಾಸಿಗೆ (Varanasi) ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಲಾ ಬಾಲಕಿಯೊಬ್ಬಳು ವೈಜ್ಞಾನಿಕ ವಿಚಾರಗಳನ್ನು ಕವಿತೆಯ ಮೂಲಕ ಪ್ರದರ್ಶಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲದೆ, ಆ ವಿದ್ಯಾರ್ಥನಿಯು ಪ್ರಧಾನಿಯವರನ್ನು ‘ಮಾಸ್ ಲೀಡರ್’ ಎಂದು ಹೊಗಳುವ ಕವಿತೆಯೊಂದನ್ನು ವಾಚಿಸಿ ಗಮನ ಸೆಳೆದಳು.
ಸಸ್ಯಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯ ಬಗ್ಗೆ ವೈಷ್ಣವಿ ಪಟೇಲ್ ಎಂಬ ಬಾಲಕಿಯ ಕಾವ್ಯಾತ್ಮಕ ವಿವರಣೆಯನ್ನು ತನ್ಮಯರಾಗಿ ಆಲಿಸಿದ ಮೋದಿ, ಆ ಕ್ಷಣದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ವಾರಾಣಸಿಯ ನನ್ನ ಸ್ನೇಹಿತೆ ವಿಜ್ಞಾನದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾಳೆ ಮತ್ತು ಉತ್ತಮ ಕವಯಿತ್ರಿಯೂ ಹೌದು ಎಂದು ವಿಡಿಯೋ ಜತಗೆ ಮೋದಿ ಉಲ್ಲೇಖಿಸಿದ್ದಾರೆ.
View this post on Instagram
ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ‘ವಿಕಸಿತ್ ಭಾರತ್ ಸಂಕಲ್ಪ ಯಾತ್ರಾ’ ಕಾರ್ಯಕ್ರಮದಲ್ಲಿ ಭಾಗವಹಿಸಲು ವಾರಾಣಸಿಗೆ ತೆರಳಿದ್ದ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಜತೆಗೆ, ವಿದ್ಯಾರ್ಥಿಗಳನ್ನೂ ಭೇಟಿ ಮಾಡಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ಭಾಷಣ ಅನುವಾದ ಮಾಡಿದ ಎಐ ಆಧಾರಿತ ‘ಭಾಷಿಣಿ’ ಬಗ್ಗೆ ಇಲ್ಲಿದೆ ಮಾಹಿತಿ
ಈ ವೇಳೆ ಅಲ್ಲಿನ ಸ್ಟಾಲ್‌ನಲ್ಲಿದ್ದ ಪುಟ್ಟ ಹುಡುಗಿಯೊಬ್ಬಳ ಕವನ ಪ್ರಧಾನಿ ಮೋದಿಯವರನ್ನು ಆಕರ್ಷಿಸಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗಿಯ ವೀಡಿಯೊವನ್ನು ಹಂಚಿಕೊಂಡು ಆಕೆಯನ್ನು ಮಹಾನ್ ಕವಿ ಎಂದು ಬಣ್ಣಿಸಿರುವುದೇ ಇದಕ್ಕೆ ಸಾಕ್ಷಿ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ