ಬಿಜೆಪಿ ಟಿಕೆಟ್ ಕೈತಪ್ಪಿದರೆ ವರುಣ್​ ಗಾಂಧಿ ಸ್ವತಂತ್ರ ಸ್ಪರ್ಧೆ ಸಾಧ್ಯತೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ವರುಣ್​ ಗಾಂಧಿ ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ವರುಣ್ ಗಾಂಧಿ ಪಿಲಿಭಿತ್‌ನಿಂದ ಸ್ಪರ್ಧಿಸಿ ಮೂರನೇ ಅವಧಿಗೆ ಗೆಲುವು ಸಾಧಿಸಿದ್ದರು.

ಬಿಜೆಪಿ ಟಿಕೆಟ್ ಕೈತಪ್ಪಿದರೆ ವರುಣ್​ ಗಾಂಧಿ ಸ್ವತಂತ್ರ ಸ್ಪರ್ಧೆ ಸಾಧ್ಯತೆ
ವರುಣ್​ ಗಾಂಧಿ

Updated on: Mar 20, 2024 | 2:01 PM

ಬಿಜೆಪಿ(BJP)ಯು ಟಿಕೆಟ್ ನಿರಾಕರಿಸಿದರೆ ವರುಣ್​ ಗಾಂಧಿ(Varun Gandhi) ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪಿಲಿಭಿತ್ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯು ಟಿಕೆಟ್ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ.

2019 ರ ಲೋಕಸಭಾ ಚುನಾವಣೆಯಲ್ಲಿ, ವರುಣ್ ಗಾಂಧಿ ಪಿಲಿಭಿತ್‌ನಿಂದ ಸ್ಪರ್ಧಿಸಿ ಮೂರನೇ ಅವಧಿಗೆ ಗೆಲುವು ಸಾಧಿಸಿದ್ದರು.
ಲೋಕಸಭೆ ಚುನಾವಣೆಗೆ, ಬಿಜೆಪಿ ಇದುವರೆಗೆ ಅಂಬೇಡ್ಕರ್ ನಗರದಿಂದ ಬಿಎಸ್‌ಪಿ ಮಾಜಿ ಸಂಸದ ರಿತೇಶ್ ಪಾಂಡೆ ಅವರನ್ನು ಕಣಕ್ಕಿಳಿಸಿದ್ದರೆ, ಹೇಮಾ ಮಾಲಿನಿ, ರವಿ ಕಿಶನ್, ಅಜಯ್ ಮಿಶ್ರಾ ತೇನಿ, ಮಹೇಶ್ ಶರ್ಮಾ, ಎಸ್‌ಪಿಎಸ್ ಬಾಘೆಲ್ ಮತ್ತು ಸಾಕ್ಷಿ ಮಹಾರಾಜ್ ಅವರ ಸ್ಥಾನಗಳಿಂದ ಪುನರಾವರ್ತನೆಯಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಿಂದ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಕ್ನೋದಿಂದ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ.
ಏತನ್ಮಧ್ಯೆ, ಕೋರ್ ಕಮಿಟಿ ಸಭೆಯಲ್ಲಿ ವರುಣ್ ಗಾಂಧಿಗೆ ಟಿಕೆಟ್ ನೀಡುವುದನ್ನು ರಾಜ್ಯ ಮಟ್ಟದ ಎಲ್ಲಾ ಬಿಜೆಪಿ ನಾಯಕರು ವಿರೋಧಿಸಿದ್ದಾರೆ.

ಮತ್ತಷ್ಟು ಓದಿ: ಲೋಕಸಭಾ ಚುನಾವಣೆ: ಗೃಹ ಸಚಿವ ಅಮಿತ್​ ಶಾರನ್ನು ಭೇಟಿಯಾದ ರಾಜ್​ ಠಾಕ್ರೆ

ಉತ್ತರ ಪ್ರದೇಶದ ಪಿಲಿಭಿತ್​ನಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಅಖಿಲೇಶ್​ ಯಾದವ್ ಪಿಲಿಭಿತ್​ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಸ್​ಪಿ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಅಖಿಲೇಶ್ ಯಾದವ್ ವರುಣ್ ಗಾಂಧಿಗೂ ಟಿಕೆಟ್ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ.

ಸತತ ಹತ್ತನೇ ಬಾರಿಗೆ ಬರೇಲಿ ಸಂಸದ ಸಂತೋಷ್ ಗಂಗ್ವಾರ್ ಅವರ ಉಮೇದುವಾರಿಕೆಗೆ ವಯಸ್ಸು ಅಡ್ಡಿಯಾಗುತ್ತಿದೆ. ಲೋಕಸಭಾ ಚುನಾವಣೆಯು ಏಪ್ರಿಲ್ 19ರಿಂದ ಆರಂಭವಾಗಿ ಜೂನ್​ 1ರವರೆಗೆ 7 ಹಂತಗಳಲ್ಲಿ ನಡೆಯಲಿದೆ, ಜೂನ್ 4ಕ್ಕೆ ಫಲಿತಾಂಶ ಹೊರಬರಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ