ಕೇರಳ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಮಾಂಕೂಟ್ಟತ್ತಿಲ್ ಆಯ್ಕೆ

| Updated By: ರಶ್ಮಿ ಕಲ್ಲಕಟ್ಟ

Updated on: Nov 14, 2023 | 9:20 PM

Rahul Mamkootathil: ಕಾಂಗ್ರೆಸ್‌ನ ಸಂಕೀರ್ಣ ಆಂತರಿಕ ರಾಜಕೀಯದಲ್ಲಿ, ರಾಹುಲ್ ಅವರು ದಿವಂಗತ ಉಮ್ಮನ್ ಚಾಂಡಿಯವರ ನಿಷ್ಠಾವಂತರಾದ 'ಎ' ಗುಂಪನ್ನು ಪ್ರತಿನಿಧಿಸಿದರೆ, ಅಬಿನ್ ಅವರನ್ನು ರಮೇಶ್ ಚೆನ್ನಿತ್ತಲ ನೇತೃತ್ವದ 'ಐ' ಗುಂಪಿನಿಂದ ಕಣಕ್ಕಿಳಿಸಿದರು. ಮತದಾನ ನಡೆದ ಎರಡು ತಿಂಗಳ ನಂತರ ಮಂಗಳವಾರ ಫಲಿತಾಂಶ ಪ್ರಕಟಿಸಲಾಗಿದೆ.

ಕೇರಳ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಮಾಂಕೂಟ್ಟತ್ತಿಲ್ ಆಯ್ಕೆ
ರಾಹುಲ್ ಮಾಂಕೂಟ್ಟತ್ತಿಲ್
Follow us on

ಕೊಚ್ಚಿ ನವೆಂಬರ್ 14: ಕೇರಳದ (Kerala) ಮಲಯಾಳಂ ಸುದ್ದಿವಾಹಿನಿಗಳ ಚರ್ಚೆಗಳಲ್ಲಿ ಸದಾ ಕಾಣಿಸಿಕೊಳ್ಳುವ, ಅರಳುಹುರಿದಂತೆ ಮಾತನಾಡುವ ಕಾಂಗ್ರೆಸ್ (Congress) ನಾಯಕ ರಾಹುಲ್ ಮಾಂಕೂಟ್ಟತ್ತಿಲ್ (Rahul Mamkoottathil) ಅವರನ್ನು ಇಂಡಿಯನ್ ಯೂತ್ ಕಾಂಗ್ರೆಸ್‌ನ (Indian Youth Congress) ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪತ್ತನಂತಿಟ್ಟದ ರಾಹುಲ್ ಅವರು ಪಕ್ಷದ ಆಂತರಿಕ ಚುನಾವಣೆಯಲ್ಲಿ ಒಟ್ಟು 2,21,986 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಅಬಿನ್ ವರ್ಕಿ 1,68,588 ಮತಗಳಿಸಿದ್ದಾರೆ.

ಅಬಿನ್, ಅರಿತಾ ಬಾಬು ಸೇರಿದಂತೆ ಹತ್ತು ಮಂದಿ ಸ್ಪರ್ಧಿಗಳನ್ನು ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಲಾಗುವುದು.
ಶಾಫಿ ಪರಂಬಿಲ್ ನೇತೃತ್ವದ ಹಿಂದಿನ ರಾಜ್ಯ ಸಮಿತಿಯಲ್ಲಿ ರಾಹುಲ್ ಮತ್ತು ಅಬಿನ್ ಇಬ್ಬರೂ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಫಿಗೆ ರಾಹುಲ್ ಆಪ್ತರಾಗಿದ್ದಾರೆ.

ಕಾಂಗ್ರೆಸ್‌ನ ಸಂಕೀರ್ಣ ಆಂತರಿಕ ರಾಜಕೀಯದಲ್ಲಿ, ರಾಹುಲ್ ಅವರು ದಿವಂಗತ ಉಮ್ಮನ್ ಚಾಂಡಿಯವರ ನಿಷ್ಠಾವಂತರಾದ ‘ಎ’ ಗುಂಪನ್ನು ಪ್ರತಿನಿಧಿಸಿದರೆ, ಅಬಿನ್ ಅವರನ್ನು ರಮೇಶ್ ಚೆನ್ನಿತ್ತಲ ನೇತೃತ್ವದ ‘ಐ’ ಗುಂಪಿನಿಂದ ಕಣಕ್ಕಿಳಿಸಿದರು. ಮತದಾನ ನಡೆದ ಎರಡು ತಿಂಗಳ ನಂತರ ಮಂಗಳವಾರ ಫಲಿತಾಂಶ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಮೂರ್ಖರ ಸರದಾರ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಚುನಾವಣಾ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, ಈ ಕ್ಷಣಕ್ಕೆ ಸಾಕ್ಷಿಯಾಗಲು ಉಮ್ಮನ್ ಚಾಂಡಿ ಇಲ್ಲದಿರುವುದು ಬೇಸರ ತಂದಿದೆ. ಉಮ್ಮನ್ ಚಾಂಡಿ ಸರ್ ನನ್ನ ಗೆಲುವನ್ನು ನೋಡಿ ತುಂಬಾ ಖುಷಿ ಪಡುತ್ತಿದ್ದರು ಎಂದರು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ಕೇರಳದಲ್ಲಿ ಪಿಣರಾಯಿ ವಿಜಯನ್ ಆಡಳಿತದ ವಿರುದ್ಧದ ಪ್ರತಿಭಟನೆಗಳಲ್ಲಿ ವಿಜಯದ ಉತ್ಸಾಹವು ಪ್ರತಿಫಲಿಸುತ್ತದೆ. ಈ ಎರಡು ಸರ್ಕಾರಗಳು ಅತ್ಯಂತ ಜನವಿರೋಧಿ ಆಡಳಿತವಾಗಲು ಪರಸ್ಪರ ಪೈಪೋಟಿ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:55 pm, Tue, 14 November 23