‘‘ಮೇಲ್ವರ್ಗದವರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದರಿಂದಾಗಿಯೇ ದಲಿತ(Dalit) ಮಕ್ಕಳು ಫೇಲ್ ಆಗುತ್ತಿದ್ದಾರೆ’’ ಎನ್ನುವ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ನೀಡಿ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಂಚಿತ ವರ್ಗಗಳು, ಪರಿಶಿಷ್ಟ ವರ್ಗಗಳು ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದಲಿತರು ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದರೆ ಅವರು ಉತ್ತೀರ್ಣರಾಗುತ್ತಾರೆ, ಮೇಲ್ವರ್ಗದವರು ಪ್ರಶ್ನೆ ಪತ್ರಿಕೆ ರಚಿಸುತ್ತಿರುವುದೇ ಅವರು ಅನುತ್ತೀರ್ಣರಾಗಲು ಕಾರಣ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಕೆಲವು ನಾಗರಿಕರೊಂದಿಗೆ ಸಂವಾದ ನಡೆಸುವಾಗ ಇಡೀ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುತ್ತಿರುವುದನ್ನು ಕಾಣಬಹುದು.
ಇದಕ್ಕೆ ರಾಹುಲ್ ಗಾಂಧಿ ಅಮೆರಿಕದಲ್ಲಿ ಕರಿಯರ ವಿರುದ್ಧ ಬಿಳಿಯರ ತಾರತಮ್ಯದ ಉದಾಹರಣೆ ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವಿವಾದ ಹುಟ್ಟು ಹಾಕಿದೆ. ಕೆಲವು ಬಳಕೆದಾರರು ರಾಹುಲ್ ಗಾಂಧಿ ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ಅಮೆರಿಕದಲ್ಲಿ ಒಂದು ದೊಡ್ಡ ಪ್ರಯೋಗ ನಡೆದಿದೆ. ನಮ್ಮಲ್ಲಿ ಐಐಟಿಗಳಿರುವಂತೆ, ಅಮೆರಿಕದಲ್ಲಿ ಉನ್ನತ ಪರೀಕ್ಷೆಯನ್ನು ಎಸ್ಎಟಿ ಎಂದು ಕರೆಯಲಾಗುತ್ತದೆ. ಅಮೆರಿಕದ ಎಲ್ಲಾ ಬಿಳಿ ನಾಗರಿಕರು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಕರಿಯರು ವಿಫಲರಾಗುತ್ತಾರೆ. ಸ್ಪ್ಯಾನಿಷ್ ಮಾತನಾಡುವವರು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲಿಲ್ಲ.
ವಿಡಿಯೋ
Who told him the story that in USA, all the whites failed the SAT because exam was set by blacks?
In fact, there is no official passing or failing grade on the SAT. And, how can one compare SAT with JEE or IIT? Such false stories & dreams will destroy the Education System. pic.twitter.com/AgoF46Fvzc
— Anshul Saxena (@AskAnshul) May 6, 2024
ಬಳಿಕ ಕರಿಯರು ಪ್ರಶ್ನೆಪತ್ರಿಕೆಯೊಂದನ್ನು ರಚಿಸಿದರು ಅದರಲ್ಲಿ ಕರಿಯರು ಸಫಲರಾದರು, ಬಿಳಿಯರು ಪರೀಕ್ಷೆಯಲ್ಲಿ ಫೇಲ್ ಆದರು. ವ್ಯವಸ್ಥೆಯನ್ನು ನಿಯಂತ್ರಿಸುವವನು ಅರ್ಹತೆಯನ್ನು ಸಹ ನಿರ್ಧರಿಸುತ್ತಾನೆ ಎಂದರ್ಥ. ನೀವು ರೈತನ ಮಗನಾಗಿದ್ದರೆ ಮತ್ತು ನಾನು ಅಧಿಕಾರಿಯ ಮಗನಾಗಿದ್ದರೆ. ನೀವು ಪರೀಕ್ಷೆಗೆ ತಯಾರಿ ನಡೆಸಿದರೆ ನಾನು ಫೇಲ್ ಆಗುವುದು ನಿಶ್ಚಿತ ಎಂದರು.
ಹೀಗೆಯೇ ಭಾರತದಲ್ಲಿ ಕೂಡ ಮೇಲುಜಾತಿಯವರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದರಿಂದಲೇ ದಲಿತರು ಅನುತ್ತೀರ್ಣರಾಗುತ್ತಿದ್ದಾರೆ ಎಂದು ಹೋಲಿಸಿ ಮಾತನಾಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ