ಗುಜರಾತ್ನ ರಾಜ್ಕೋಟ್ನಲ್ಲಿರುವ ಗೇಮ್ ಝೋನ್ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 28 ಮಂದಿ ಪ್ರಾಣ ಕಳೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಬಹಿರಂಗಗೊಂಡಿದೆ. ರಾಜ್ಕೋಟ್ನ ಗೇಮ್ ಝೋನ್ನಲ್ಲಿ ಮರದ ಹಲಗೆಗಳ ರಾಶಿ ಮೇಲೆ ವೆಲ್ಡಿಂಗ್ ಕೆಲಸ ಮಾಡಲಾಗುತ್ತಿತ್ತು. ಅದರಿಂದ ಕಿಡಿಗಳು ಬೀಳುತ್ತಿರುವ ಹೊಸ ವಿಡಿಯೋ ಇದೀಗ ವೈರಲ್ ಆಗಿದೆ. ಈ ಅಗ್ನಿ ಅನಾಹುತದಲ್ಲಿ 9 ಮಕ್ಕಳು ಸೇರಿ ಒಟ್ಟು 28 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ವೆಲ್ಡಿಂಗ್ ಕೆಲಸದಿಂದಾಗಿ ಬೆಂಕಿಯ ಕಿಡಿಗಳು ಮರದ ಹಲಗೆಗಳ ಮೇಲೆ ಬಿದ್ದಿವೆ, ಕೆಲವೇ ನಿಮಿಷದಲ್ಲಿ ಹೊಗೆಯು ಒಂದು ಮೂಲೆಯಿಂದ ಹೊರಬರುತ್ತಿರುವುದನ್ನು ಕಾಣಬಹುದು. ಆರ್‌ಪಿ’ – ಅಮ್ಯೂಸ್‌ಮೆಂಟ್ ಮತ್ತು ಥೀಮ್ ಪಾರ್ಕ್ ಅನ್ನು ಧ್ವಂಸಗೊಳಿಸಿತು.
ಮತ್ತಷ್ಟು ಓದಿ: ರಾಜ್‌ಕೋಟ್ ಗೇಮ್ ಝೋನ್ನಲ್ಲಿ ಅಗ್ನಿ ಅವಘಡ, 28 ಮಂದಿ ಸಾವು, ಟೈಂ ಲೈನ್ ಇಲ್ಲಿದೆ
ಗಾಬರಿಗೊಂಡ ಕಾರ್ಮಿಕರು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಸ್ವಲ್ಪ ಸಮಯದೊಳಗೆ, ಬೆಂಕಿಯು ಅಲ್ಲಿ ಸಂಗ್ರಹಿಸಲಾದ ಇತರ ದಹನಕಾರಿ ವಸ್ತುಗಳಿಗೆ ಹರಡಿತು.
ನವೆಂಬರ್ 2023 ರಲ್ಲಿ ಸ್ಥಳೀಯ ಪೊಲೀಸರು ಗೇಮಿಂಗ್ ವಲಯಕ್ಕೆ ಬುಕಿಂಗ್ ಪರವಾನಗಿಯನ್ನು ನೀಡಿದ್ದು, ಇದನ್ನು ಜನವರಿ 1 ರಿಂದ ಡಿಸೆಂಬರ್ 31, 2024 ರ ಅವಧಿಗೆ ನವೀಕರಿಸಲಾಗಿದೆ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ ತಿಳಿಸಿದ್ದಾರೆ.
ವಿಡಿಯೋ:
ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಬಂಧಿಸಲು ಅಪರಾಧ ವಿಭಾಗದ ನಾಲ್ಕು ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ಭಾರ್ಗವ ತಿಳಿಸಿದ್ದಾರೆ.
ಗುಜರಾತ್ ಸರ್ಕಾರವು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಐದು ಸದಸ್ಯರ ಎಸ್‌ಐಟಿಯನ್ನು ರಚಿಸಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಗ್ನಿ ದುರಂತದ ಸ್ಥಳವನ್ನು ಪರಿಶೀಲಿಸಿದರು ಮತ್ತು ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.
VIDEO | CCTV footage of fire that broke out at game zone in Rajkot yesterday, leading to the death of 27 people.#Rajkotfire pic.twitter.com/bvmi1YQ36I
— Press Trust of India (@PTI_News) May 26, 2024
ಘಟನೆಯಲ್ಲಿ ಟಿಆರ್‌ಪಿ ಗೇಮ್ ಝೋನ್‌ನ ಮಾಲೀಕ ಮತ್ತು ಮ್ಯಾನೇಜರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ರಾಜ್‌ಕೋಟ್ ಪೊಲೀಸರು ಐಪಿಸಿ ಸೆಕ್ಷನ್ 304, 308, 337, 338, ಮತ್ತು 114 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾವಿರಾರು ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಆಟದ ವಲಯದ ವಿವಿಧ ಪಾಕೆಟ್‌ಗಳಲ್ಲಿ ಸಂಗ್ರಹಿಸಲಾಗಿತ್ತು ಅದು ಬೆಂಕಿ ವೇಗವಾಗಿ ಹರಡಲು ಕಾರಣವಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ