ರಾಜ್​ಕೋಟ್​ ಗೇಮ್ ಝೋನ್​ನಲ್ಲಿ ಅಗ್ನಿ ಅವಘಡ, 28 ಮಂದಿ ಸಾವು, ಟೈಂ ಲೈನ್​ ಇಲ್ಲಿದೆ

ರಾಜ್​ಕೋಟ್​ನ ಗೇಮ್​ ಝೋನ್​ನಲ್ಲಿ ಸಂಭವಿಸಿದ ಅಗ್ನಿ ಅವಘಡವು ದೇಶದ ಜನತೆಯ ನಿದ್ದೆಗೆಡಿಸಿದೆ ಕೆಲವೇ ಸೆಕೆಂಡುಗಳಲ್ಲಿ 28 ಮಂದಿ ಸುಟ್ಟು ಕರಕಲಾಗಿದ್ದಾರೆ. ಘಟನೆ ಎಷ್ಟೊತ್ತಿಗೆ ಸಂಭವಿಸಿತರು ಎಷ್ಟು ಮಂದಿ ಮೃತಪಟ್ಟಿದ್ದಾರೆ ಈ ಕುರಿತ ಟೈಂ ಲೈನ್ ಇಲ್ಲಿದೆ.

ರಾಜ್​ಕೋಟ್​ ಗೇಮ್ ಝೋನ್​ನಲ್ಲಿ ಅಗ್ನಿ ಅವಘಡ, 28 ಮಂದಿ ಸಾವು, ಟೈಂ ಲೈನ್​ ಇಲ್ಲಿದೆ
ಅಗ್ನಿ ಅವಘಡImage Credit source: NDTV
Follow us
ನಯನಾ ರಾಜೀವ್
|

Updated on:May 26, 2024 | 9:56 AM

ಗುಜರಾತ್​ನ ರಾಜ್​ಕೋಟ್​ನ ಗೇಮ್​ ಝೋನ್​ನಲ್ಲಿ ಶನಿವಾರ ಭಾರಿ ಅಗ್ನಿ ಅವಘಡ(Fire Accident) ಸಂಭವಿಸಿದ್ದು, 28 ಮಂದಿ ಸುಟ್ಟು ಕರಕಲಾಗಿದ್ದಾರೆ. ರಾಜ್​ಕೋಟ್​ ಕ್ರೈಂ ಬ್ರಾಂಚ್ ಟಿಆರ್​ಪಿ ಗೇಮ್ ಝೋನ್​ನಲ್ಲಿ ಅಳವಡಿಸಲಾಗಿರುವ ಡಿವಿಆರ್​ಅನ್ನು ವಶಪಡಿಸಿಕೊಂಡಿವೆ. ವೆಲ್ಡಿಂಗ್ ವೇಳೆ ಬಿದ್ದ ಕಿಡಿಯಿಂದ ವೆಂಕಿ ಬಹುಬೇಗ ವ್ಯಾಪಿಸಿರುವುದು ಸಿಸಿಟಿವಿಯಲ್ಲಿ ಗೋಚರಿಸಿದೆ.

ಸ್ಥಳದಲ್ಲಿದ್ದ ಯಶ್ ಪಟೋಲಿಯಾ ಮಾತನಾಡಿ, ನಾವು ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದೆವು,ಆಗ ಅಲ್ಲಿ ಬೆಂಕಿ ಹೊತ್ತಿಕೊಂಡಿತು, 30 ಸೆಕೆಂಡ್‌ಗಳಲ್ಲಿ ಬೆಂಕಿ ಆ ಪ್ರದೇಶದಾದ್ಯಂತ ವ್ಯಾಪಿಸಿತು. ಆಟದ ವಲಯದ ಹಲವೆಡೆ ದುರಸ್ತಿ ಮತ್ತು ನವೀಕರಣ ಕಾರ್ಯವೂ ನಡೆಯುತ್ತಿದೆ ಎಂದರು.

ಬೆಂಕಿ ಅವಘಡದ ವೇಳೆ ಆಟದ ವಲಯದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಿಳಿದಿಲ್ಲವಾದ್ದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಮೃತರ ದೇಹಗಳು ಗುರುತು ಸಿಗದಷ್ಟು ಸುಟ್ಟು ಕರಕಲಾಗಿವೆ. ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು. 3 ಗಂಟೆಗಳಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಯಿತು.

ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ. ರಾಜ್‌ಕೋಟ್‌ನ ಎಲ್ಲಾ ಆಟದ ವಲಯಗಳನ್ನು ತಕ್ಷಣವೇ ಮುಚ್ಚಲು ಆದೇಶಿಸಿದೆ ಮತ್ತು ಅದನ್ನು ತನಿಖೆ ಮಾಡುವವರೆಗೆ ಯಾವುದೇ ಆಟದ ವಲಯವನ್ನು ತೆರೆಯುವಂತಿಲ್ಲ.

ಮತ್ತಷ್ಟು ಓದಿ: ರಾಜ್​ಕೋಟ್​ ಅಗ್ನಿ ಅವಘಡ: ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಎಸ್​ಐಟಿ ರಚನೆ

ಟೈಂ ಲೈನ್ ಸಂಜೆ 5.37ಕ್ಕೆ ಗೇಮ್​ ಝೋನ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಸಂಜೆ 5.38ಕ್ಕೆ ಬೆಂಕಿಯಿಂದಾಗಿ ಜನರು ಚೆಲ್ಲಾಪಿಲ್ಲಿಯಾಗಿ ಓಡಲಾರಂಬಿಸಿದರು. ಸಂಜೆ 5.45ಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತು ಸಂಜೆ 5.50ಕ್ಕೆ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಸ್ಥಳಕ್ಕೆ ಆಗಮಿಸಿದರು ಸಂಜೆ 5.55 ಕ್ಕೆ ಬೆಂಕಿ ಕೆನ್ನಾಲಿಗೆ ಚಾಚಿತ್ತು ಸಂಜೆ 6 ಗಂಟೆಗೆ ಅಗ್ನಿ ಶಾಮಕ ಸಿಬ್ಬಮದಿ ಬೆಂಕಿ ನಂದಿಸುವ ಕೆಲಸ ಆರಂಭಿಸಿದ್ದರು. ಸಂಜೆ 6.01ಕ್ಕೆ ಗಾಯಾಳುಗಳು ಹಾಗೂ ಮೃತದೇಹಗಳನ್ನು ಹೊರತೆಗೆಯುವ ಕೆಲಸ ಆರಂಭವಾಯಿತು. ಸಂಜೆ 6.20ಕ್ಕೆ ಕಲೆಕ್ಟರ್ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸಂಜೆ 7.15ಕ್ಕೆ ಬೆಂಕಿಯಿಮದಾಗಿ 4 ಮಂದಿ ಸಜೀವದಹನವಾಗಿರುವ ಮಾಹಿತಿ ಸಿಕ್ಕಿತ್ತು. ಸಂಜೆ 7.20ಕ್ಕೆ ಎರಡು ಶವಗಳನ್ನು ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಯಿತು ಸಂಜೆ 7.22ಕ್ಕೆ ಗೇಮ್ ಝೋನ್​ ಪೂರ್ತಿಯಾಗಿ ಸುಟ್ಟು ಬೂಧಿಯಾಯಿತು. ಸಂಜೆ 7.29ಕ್ಕೆ ಸಿವಿಲ್ ಆಸ್ಪತ್ರೆಗೆ ಮತ್ತೆ 4 ಶವಗಳನ್ನು ರವಾನೆ ಮಾಡಲಾಯಿತು. ಸಂಜೆ 7.32ಕ್ಕೆ ಅಗ್ನಿ ಶಾಮಕ ದಳದ ಮುಖ್ಯ ಅಧಿಕಾರಿ 6 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು. ಸಂಜೆ 7.47ಕ್ಕೆ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಯಿತು. ಸಂಜೆ 7.55ಕ್ಕೆ 8 ಶವಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ರಾತ್ರಿ 8.05ಕ್ಕೆ 17 ಶವಗಳನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ರಾತ್ರಿ 8.15ಕ್ಕೆ ಸಿವಿಲ್ ಆಸ್ಪತ್ರೆಯಲ್ಲಿ ಜನರ ಸಂಖ್ಯೆ ಹೆಚ್ಚಾಯಿತು ರಾತ್ರಿ .25ಕ್ಕೆ ಆಸ್ಪತ್ರೆಗೆ 20 ಶವಗಳನ್ನು ಕಳುಹಿಸಲಾಯಿತು. ರಾತ್ರಿ 10.30ಕ್ಕೆ 25 ಶವಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ರಾತ್ರಿ 11.15ಕ್ಕೆ ಸಿವಿಲ್ ಆಸ್ಪತ್ರೆಗೆ 28 ಶವಗಳನ್ನು ಕಳುಹಸಿಲಾಯಿತು. ಬೆಳಗಿನ ಜಾವ 2.38ಕ್ಕೆ ಗೃಹ ಸಚಿವ ರಾಜಕೋಟ್​ಗೆ ಭೇಟಿ ನೀಡಿದ್ದಾರೆ. ಬೆಳಗಿನ ಜಾವ 3.15ಕ್ಕೆ ಕಲೆಕ್ಟರ್​ ಕಚೇರಿಯಲ್ಲಿ ಸಭೆ ನಡೆಯಿತು. ಬೆಳಗ್ಗೆ 4 ಗಂಟೆಗೆ ಬೇರೆ ಬೇರೆ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಬೆಳಗ್ಗೆ 8 ಗಂಟೆಗೆ ಕ್ರೈಂ ಬ್ರಾಂಚ್ ಗೇಮ್​ ಝೋನ್​ನ ಡಿವಿಆರ್​ ವಶಪಡಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:37 am, Sun, 26 May 24

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್