AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ, ವಸತಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ, 3 ಮಂದಿ ಸಾವು

ಭಾನುವಾರ ಮುಂಜಾನೆ ಪೂರ್ವ ದೆಹಲಿಯ ಕೃಷ್ಣಾ ನಗರ ಪ್ರದೇಶದ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ, ವಸತಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ, 3 ಮಂದಿ ಸಾವು
ಅಗ್ನಿ ಅವಘಡ
Follow us
ನಯನಾ ರಾಜೀವ್
|

Updated on:May 26, 2024 | 10:11 AM

ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ(Fire Accident) ಸಂಭವಿಸಿದೆ, ಇಂದು ಬೆಳಗ್ಗೆ ದೆಹಲಿಯ ಕೃಷ್ಣನಗರ ಪ್ರದೇಶದಲ್ಲಿರುವ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ 2.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿದ್ದು, ಐದು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಒಟ್ಟು 13 ಜನರನ್ನು ರಕ್ಷಿಸಲಾಯಿತು ಆದರೆ ಮೂವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ವರದಿಗಳ ಪ್ರಕಾರ, ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಮೃತರನ್ನು ಅಂಜು ಶರ್ಮಾ (40) ಮತ್ತು ಕೇಶವ್ ಶರ್ಮಾ (18) ಎಂದು ಗುರುತಿಸಲಾಗಿದೆ. ಆದಾಗ್ಯೂ, ತೀವ್ರವಾಗಿ ಸುಟ್ಟುಹೋಗಿರುವ ಮೂರನೇ ದೇಹವು ಗುರುತು ಪತ್ತೆಯಾಗಿಲ್ಲ.

ಬೇಬಿ ಕೇರ್​ ಸೆಂಟರ್​ನಲ್ಲಿ ಬೆಂಕಿ ಅವಘಡ,  ಏಳು ನವಜಾತ ಶಿಶುಗಳು ಸಾವು ಶನಿವಾರ (ಮೇ 25) ರಾತ್ರಿ ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ್ ಪ್ರದೇಶದಲ್ಲಿನ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯಲ್ಲಿ ಮತ್ತೊಂದು ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ರಕ್ಷಿಸಿದ ನಂತರ ಕನಿಷ್ಠ ಏಳು ನವಜಾತ ಶಿಶುಗಳು ಸಾವನ್ನಪ್ಪಿವೆ.

ಮತ್ತಷ್ಟು ಓದಿ: Delhi Hospital Fire: ದೆಹಲಿಯ ಬೇಬಿ ಕೇರ್​ ಸೆಂಟರ್​ನಲ್ಲಿ ಅಗ್ನಿ ಅವಘಡ, 6 ನವಜಾತ ಶಿಶುಗಳು ಸಾವು

ಮಾಹಿತಿ ಮೇರೆಗೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಅಧಿಕಾರಿಯ ಪ್ರಕಾರ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಮತ್ತು ಒಟ್ಟು 12 ಮಕ್ಕಳನ್ನು ರಕ್ಷಿಸಲಾಗಿದೆ, ಅದರಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಕ್ಷಿಸಲ್ಪಟ್ಟ ನವಜಾತ ಶಿಶುಗಳನ್ನು ಪೂರ್ವ ದೆಹಲಿಯ ಅಡ್ವಾನ್ಸ್ NICU ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:06 am, Sun, 26 May 24

ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ