ನೀವೇನು ಕೆಲಸ ಮಾಡಿದ್ದೀರಿ ಎಂದು ಕೇಳಿದ ವ್ಯಕ್ತಿಯ ಕಪಾಳಕ್ಕೆ ಹೊಡೆದ ಪಂಜಾಬ್ ಕಾಂಗ್ರೆಸ್ ಶಾಸಕ

| Updated By: ರಶ್ಮಿ ಕಲ್ಲಕಟ್ಟ

Updated on: Oct 20, 2021 | 4:42 PM

ಮೊದಲಿಗೆ ಶಾಂತವಾಗಿ ಪಾಲ್ ಆ ವ್ಯಕ್ತಿಯನ್ನು ಮುಂದೆ ಕರೆದು ಮೈಕ್ರೊಫೋನ್ ಕೊಡುತ್ತಾರೆ. ಅದರ ನಂತರ ಶಾಸಕರು ಆ ವ್ಯಕ್ತಿಯ ಕೆನ್ನೆಗೆ ಹೊಡೆದು ಮತ್ತಷ್ಟು ಥಳಿಸುತ್ತಾರೆ. ಅಷ್ಟೇ ಅಲ್ಲದೆ ಅಲ್ಲಿ ಆ ವ್ಯಕ್ತಿಯನ್ನು ದೂರ ಹೋಗುವಂತೆ ಹೇಳುತ್ತಿದ್ದ ಪೊಲೀಸ್ ಕೂಡಾ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿರುವುದು ಕಾಣುತ್ತದೆ.

ನೀವೇನು ಕೆಲಸ ಮಾಡಿದ್ದೀರಿ ಎಂದು ಕೇಳಿದ ವ್ಯಕ್ತಿಯ ಕಪಾಳಕ್ಕೆ ಹೊಡೆದ ಪಂಜಾಬ್ ಕಾಂಗ್ರೆಸ್ ಶಾಸಕ
ಜೋಗಿಂದರ್ ಪಾಲ್ ಹಲ್ಲೆ ನಡೆಸುತ್ತಿರುವ ದೃಶ್ಯ
Follow us on

ಚಂಢೀಗಡ: ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ (MLA Joginder Pal) ನಿಮ್ಮ ಕ್ಷೇತ್ರದಲ್ಲಿ ನೀವೇನು ಕೆಲಸ ಮಾಡಿದ್ದೀರಿ ಎಂದು ಕೇಳಿದ ವ್ಯಕ್ತಿಯ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಪಠಾಣ್‌ಕೋಟ್ ಜಿಲ್ಲೆಯ ಭೋವಾದಲ್ಲಿನ ಡೇರೆಯೊಳಗೆ ಬಿಳಿ ಕುರ್ತಾ ಧರಿಸಿದ್ದ ಪಾಲ್ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ವಿಡಿಯೊದಲ್ಲಿದೆ.ಅದರಲ್ಲಿ ಅವರು ಆ ಹಳ್ಳಿಯಲ್ಲಿ ತಾವು ಮಾಡಿದ ಕಾರ್ಯಗಳನ್ನು ಹೇಳುತ್ತಿರುವಂತೆ ಕಾಣುತ್ತದೆ. ಅವನು ಮಾತನಾಡುತ್ತಿದ್ದಂತೆ ಜನಸಂದಣಿಯ ಮೂಲೆಯಲ್ಲಿ ಕಡು ಕಂದು ಬಣ್ಣದ ಶರ್ಟ್ ಧರಿಸಿರುವ ಯುವಕನೊಬ್ಬನಿಗೆ ಗೊಣಗುತ್ತಿರುವುದು ಕೇಳಿಸುತ್ತದೆ. ಪಾಲ್ ಮೊದಲು ಅತ್ತ ಕಣ್ಣು ಹಾಯಿಸಿ, ಆ ಗೊಣಗಾಟವನ್ನು ಕಡೆಗಣಿಸಿ ಮಾತು ಮುಂದುವರಿಸುತ್ತಾರೆ. ವ್ಯಕ್ತಿಯ ಪಕ್ಕದಲ್ಲಿ ನಿಂತಿದ್ದ ಪೋಲಿಸ್ ಅಧಿಕಾರಿಯೊಬ್ಬರು ಆತನ ಕೈ ಹಿಡಿದು ಆತನನ್ನು ಸದ್ದಿಲ್ಲದೆ ಕರೆದೊಯ್ಯಲು ಪ್ರಯತ್ನಿಸುತ್ತಿರುವುದು ಕೂಡಾ ವಿಡಿಯೊದಲ್ಲಿ ಕಾಣಿಸುತ್ತದೆ.

ಆದಾಗ್ಯೂ, ಆ ವ್ಯಕ್ತಿ ಪಾಲ್ ಅನ್ನು ಪ್ರಶ್ನಿಸುವುದನ್ನು ಮುಂದುವರೆಸುತ್ತಾನೆ. ಪ್ರಶ್ನೆಯನ್ನು ಕೂಗಿದ ನಂತರ ಶಾಸಕರ ಪ್ರತಿಕ್ರಿಯೆಗೆ ಒತ್ತಾಯಿಸಿದ ವ್ಯಕ್ತಿ “ನೀನು ನಿಜವಾಗಿಯೂ ಏನು ಮಾಡಿದೆ?” ಎಂದು ಶಾಸಕರಲ್ಲಿ ಕೇಳಿದ್ದಾನೆ.

ಮೊದಲಿಗೆ ಶಾಂತವಾಗಿ ಪಾಲ್ ಆ ವ್ಯಕ್ತಿಯನ್ನು ಮುಂದೆ ಕರೆದು ಮೈಕ್ರೊಫೋನ್ ಕೊಡುತ್ತಾರೆ. ಅದರ ನಂತರ ಶಾಸಕರು ಆ ವ್ಯಕ್ತಿಯ ಕೆನ್ನೆಗೆ ಹೊಡೆದು ಮತ್ತಷ್ಟು ಥಳಿಸುತ್ತಾರೆ. ಅಷ್ಟೇ ಅಲ್ಲದೆ ಅಲ್ಲಿ ಆ ವ್ಯಕ್ತಿಯನ್ನು ದೂರ ಹೋಗುವಂತೆ ಹೇಳುತ್ತಿದ್ದ ಪೊಲೀಸ್ ಕೂಡಾ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿರುವುದು ಕಾಣುತ್ತದೆ. ಅಲ್ಲಿಂದ ಐದಾರು ಜನಗಳು ವ್ಯಕ್ತಿಯ ಮೇಲೆ ಮುಗಿಬಿದ್ದು ಹೊಡೆಯುತ್ತಿದ್ದಾಗ ಬೇರೊಬ್ಬ ಪೊಲೀಸ್ ಬಂದು ಆತನನ್ನು ಕಾಪಾಡಿದ್ದಾರೆ.


“ಶಾಸಕರು ಈ ರೀತಿ ವರ್ತಿಸಬಾರದಿತ್ತು. ನಾವು ಜನಪ್ರತಿನಿಧಿಗಳು ಮತ್ತು ಅವರ ಸೇವೆಗಾಗಿ ಇಲ್ಲಿಗೆ ಬಂದಿದ್ದೇವೆ.” ಎಂದು ರಾಜ್ಯ ಗೃಹ ಸಚಿವ ಸುಖಜಿಂದರ್ ಸಿಂಗ್ ರಾಂಧವ ಹೇಳಿದ್ದಾರೆ.
ಪಂಜಾಬ್ ನಲ್ಲಿ ಚುನಾವಣೆ ಸನ್ನಿಹಿತವಾಗಿದ್ದು ,ಕಾಂಗ್ರೆಸ್ ಇನ್ನೂ ನಿಯಂತ್ರಿಸುತ್ತಿರುವ ಕೆಲವು ರಾಜ್ಯಗಳಲ್ಲಿ ಒಂದು ಸರ್ಕಾರವನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹರಸಾಹಸ ಪಡುತ್ತಿದೆ.
ಹಿರಿಯ ನಾಯಕ ಅಮರೀಂದರ್ ಸಿಂಗ್ ಮತ್ತು ಶಾಸಕ ನವಜೋತ್ ಸಿಧು ನಡುವಿನ ಕಹಿ ವೈಷಮ್ಯದ ನಡುವೆಯೇ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಲಿದೆ.

ಇದನ್ನೂ ಓದಿ: 23ರ ಹರೆಯದಲ್ಲಿ ದೇಶವೇ ಹೆಮ್ಮೆ ಪಡುವ ಉಪಗ್ರಹ ಸಾಧನೆ! ಕಾಫಿನಾಡಿನ ಯುವಕನ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ