AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಗುಜರಾತ್​ನ ವೃದ್ಧೆ!

Viral News: ಗುಜರಾತ್ ರಾಜ್ಯದ ಕಚ್‌ನ 70 ವರ್ಷದ ಜಿವನ್‌ಬೆನ್ ರಬಾರಿ ಮತ್ತು ಆಕೆಯ ಪತಿ 75 ವರ್ಷದ ವಾಲ್ಜಿಭಾಯಿ ರಬಾರಿಗೆ ಮಗು ಜನಿಸಿದೆ. ಆ ಮಗುವಿಗೆ ಲಾಲೋ ಎಂದು ಹೆಸರಿಡಲಾಗಿದೆ.

Shocking News: 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಗುಜರಾತ್​ನ ವೃದ್ಧೆ!
70ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ಧೆ
TV9 Web
| Updated By: ಸುಷ್ಮಾ ಚಕ್ರೆ|

Updated on: Oct 20, 2021 | 4:23 PM

Share

ರಾಜ್​ಕೋಟ್: ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಅದ್ಭುತಗಳನ್ನು ನಮಗೇ ನಂಬಲಾಗುವುದಿಲ್ಲ. ವಯಸ್ಸು 35 ದಾಟಿದರೆ ಮಹಿಳೆಯರಿಗೆ ಮಕ್ಕಳಾಗುವ ಸಾಧ್ಯತೆಗಳು ಕಡಿಮೆ ಎಂಬಂತಹ ಪರಿಸ್ಥಿತಿ ಈಗಿನ ಕಾಲದಲ್ಲಿ ನಿರ್ಮಾಣವಾಗಿದೆ. ಇಂದಿನ ಒತ್ತಡದ ಜೀವನಶೈಲಿಯೂ ಅದಕ್ಕೆ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಗುಜರಾತ್​ನ 70 ವರ್ಷದ ಅಜ್ಜಿಯೊಬ್ಬರು ಇದೀಗ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇಡೀ ವಿಶ್ವದಲ್ಲೇ ಮಗುವಿಗೆ ಜನ್ಮ ನೀಡಿದ ಅತ್ಯಂತ ಹಿರಿಯ ಮಹಿಳೆಯೆಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಮೊಮ್ಮಕ್ಕಳು, ಮರಿಮಕ್ಕಳನ್ನು ಆಟವಾಡಿಸಿಕೊಂಡಿರಬೇಕಾದ ವಯಸ್ಸಿನಲ್ಲಿ ಇವರು ಮೊದಲ ಮಗುವಿಗೆ ತಾಯಿಯಾಗಿದ್ದಾರೆ.

ಗುಜರಾತ್ ರಾಜ್ಯದ ಕಚ್‌ನ 70 ವರ್ಷದ ಜಿವನ್‌ಬೆನ್ ರಬಾರಿ ಮತ್ತು ಆಕೆಯ ಪತಿ 75 ವರ್ಷದ ವಾಲ್ಜಿಭಾಯಿ ರಬಾರಿಗೆ ಮಗು ಜನಿಸಿದೆ. ಆ ಮಗುವಿಗೆ ಲಾಲೋ ಎಂದು ಹೆಸರಿಡಲಾಗಿದೆ. ಸಿಸೇರಿಯನ್ ಮೂಲಕ ಮಗುವನ್ನು ಡೆಲಿವರಿ ಮಾಡಲಾಗಿದೆ. ಮದುವೆಯಾಗಿ 45 ವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಬುಜ್​ನ ಐವಿಎಫ್ ಸೆಂಟರ್ ಮೂಲಕ ಗರ್ಭ ಧರಿಸಿರುವ ಇವರು ಇದಕ್ಕೂ ಮೊದಲು ಕೆಲವು ದಶಕಗಳಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರು.

70 year old Gujarat Woman give birth to her first child

70ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ಧೆ

ಸಂಬಂಧಿಕರ ಮೂಲಕ ಐವಿಎಫ್ ಬಗ್ಗೆ ತಿಳಿದ ನಂತರ ಅವರು ಬುಜ್‌ನಲ್ಲಿ ಹರ್ಶ್ ಐವಿಎಫ್ ಕೇಂದ್ರವನ್ನು ನಡೆಸುತ್ತಿರುವ ಡಾ ನರೇಶ್ ಭಾನುಶಾಲಿಯನ್ನು ಸಂಪರ್ಕಿಸಿದರು. ಆಗ ಆಕೆಯ ರಕ್ತದೊತ್ತಡ ಹೆಚ್ಚಾಗಿತ್ತು ಮತ್ತು ಗರ್ಭಾವಸ್ಥೆಯ ಎಂಟನೇ ತಿಂಗಳಲ್ಲಿ ನಾವು ಮಗುವನ್ನು ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಬೇಕಾಯಿತು ಎಂದು ಡಾ. ಭಾನುಶಾಲಿ ಹೇಳಿದ್ದಾರೆ.

ಅತ್ಯಂತ ಹಿರಿಯ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಸ್ಪೇನ್​ನ 66 ವರ್ಷದ ಕೀರ್ತಿ ಮರಿಯಾ ಡೆಲ್ ಕಾರ್ಮೆನ್ ಬೌಸಾಡಾ ಲಾರಾ ವಿಶ್ವ ದಾಖಲೆ ಮಾಡಿದ್ದರು. ಅವರಿಗೆ ಅವಳಿ ಗಂಡು ಮಕ್ಕಳಾಗಿತ್ತು. ಇದೀಗ ಆ ದಾಖಲೆ 70 ವರ್ಷದ ಜಿವನ್​ಬೆನ್ ರಬರಿ ಅವರದ್ದಾಗಿದೆ.

70 year old Gujarat Woman give birth to her first child

70ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ಧೆ

ಒಂದೂವರೆ ವರ್ಷದ ಹಿಂದೆ ಜಿವನ್​ಬೆನ್ ರಬರಿ ತಮ್ಮ ಗಂಡನೊಂದಿಗೆ ನನ್ನ ಚಿಕಿತ್ಸಾಲಯಕ್ಕೆ ಬಂದರು. ಅವರು ಈ ವಯಸ್ಸಿನಲ್ಲಿ ಮಗುವನ್ನು ಹೊಂದಲು ಬಯಸಿದ್ದಾರೆ ಎಂದು ಅವರು ಹೇಳಿದಾಗ ನನಗೆ ಆಘಾತವಾಯಿತು. ಆಕೆಯ ವಯಸ್ಸಿನಿಂದಾಗಿ ಇದು ಅಪಾಯಕಾರಿ ಎಂದು ನಾವು ಅವಳಿಗೆ ಹೇಳುತ್ತಲೇ ಇದ್ದೆವು. ಋತುಬಂಧದಿಂದಾಗಿ ಆಕೆಯ ಗರ್ಭಕೋಶ ಕುಗ್ಗಿತ್ತು. ಆದರೆ, ಅವರು ಸಾಯುವ ಮೊದಲು ಮಗುವನ್ನು ಹೊಂದಬೇಕೆಂದು ಹಠಕ್ಕೆ ಬಿದ್ದಿದ್ದರು. ಹೀಗಾಗಿ ಆಕೆಯ ಕೋರಿಕೆಯನ್ನು ಈಡೇರಿಸಲು ನಾವು ನಿರ್ಧರಿಸಿದೆವು ಎಂದು ಐವಿಎಫ್ ಕೇಂದ್ರದ ವೈದ್ಯರು ಹೇಳಿದ್ದಾರೆ. ಈ ವಯಸ್ಸಿನಲ್ಲಿಯೂ ನಿಯಮಿತ ತಪಾಸಣೆಗಾಗಿ ತಿಂಗಳಿಗೆ ಎರಡು ಬಾರಿ ಸರ್ಕಾರಿ ಬಸ್‌ನಲ್ಲಿ 150 ಕಿಲೋಮೀಟರ್ ಪ್ರಯಾಣಿಸಿ ಆಸ್ಪತ್ರೆಗೆ ಬರುತ್ತಿದ್ದರು. ನಾವು ಹೇಳಿದ ಎಲ್ಲ ಸೂಚನೆಗಳನ್ನೂ ಅನುಸರಿಸುತ್ತಿದ್ದರು. ಅದೃಷ್ಟವಶಾತ್ ಮೊದಲ ಪ್ರಯತ್ನದಲ್ಲೇ ಅವರಿಗೆ ಮಗು ಜನಿಸಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Viral News: ಹೆಂಡತಿ ಸ್ನಾನ ಮಾಡಲ್ಲ ಅಂತ ವಿಚ್ಛೇದನ ನೀಡಿದ ಗಂಡ!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ