23ರ ಹರೆಯದಲ್ಲಿ ದೇಶವೇ ಹೆಮ್ಮೆ ಪಡುವ “ಉಪಗ್ರಹ” ಸಾಧನೆ! ಕಾಫಿನಾಡಿನ ಯುವಕನ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ

ಕಾಫಿನಾಡಿನ ಈ ಯುವಕ ಮಾತ್ರ ಕೇವಲ 23ರ ವಯಸ್ಸಿನಲ್ಲಿಯೇ ಇಡೀ ದೇಶದ ಗಮನವನ್ನ ತನ್ನತ್ತ ಸೆಳೆದಿದ್ದಾನೆ. BITS (BIRLA INSTITUTE OF TECHNOLOGY AND SCIENCE) ಪಿಲಾನಿ, ಗೋವಾ ಯುನಿವರ್ಸಿಟಿಯಲ್ಲಿ ಓದಿದ ಅವೇಜ್ ಅಹಮದ್, ಇಂದು ಏರೋಸ್ಪೆಸ್ ಪಿಕ್ಸಲ್ ಅನ್ನೋ ಉಪಗ್ರಹಗಳ ತಯಾರಿಕಾ ಕಂಪನಿಯನ್ನ ತೆರೆದಿದ್ದಾರೆ.

23ರ ಹರೆಯದಲ್ಲಿ ದೇಶವೇ ಹೆಮ್ಮೆ ಪಡುವ ಉಪಗ್ರಹ ಸಾಧನೆ! ಕಾಫಿನಾಡಿನ ಯುವಕನ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ
chikkamagaluru twenty three years youth starts his own Aerospace Pixel in bengaluru
Follow us
TV9 Web
| Updated By: ಆಯೇಷಾ ಬಾನು

Updated on: Oct 20, 2021 | 2:19 PM

ಚಿಕ್ಕಮಗಳೂರು: ಮಲೆನಾಡಿನ ಯುವಕನೊಬ್ಬ ಅತಿಚಿಕ್ಕ ವಯಸ್ಸಿನಲ್ಲಿಯೇ ಏರೋಸ್ಪೇಸ್ ಸಂಸ್ಥೆ ಕಟ್ಟಿ ದೇಶವೇ ಹುಬ್ಬೇರಿಸುವ ಸಾಧನೆ ಮಾಡಿದ್ದಾರೆ. ಅಷ್ಟಕ್ಕೂ ಇಂತಹ ಅಸಾಮಾನ್ಯ ಕೆಲಸಕ್ಕೆ ಕೈ ಹಾಕಿರುವ ಯುವಕನ ಹೆಸರು ಅವೇಜ್ ಅಹಮದ್. ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ನದೀಮ್ ಅಹಮದ್ ಅವರ ಪುತ್ರ. ಉಪಗ್ರಹ ತಯಾರು ಮಾಡುವ ಪಿಕ್ಸೆಲ್ ಎಂಬ ಕಂಪನಿಯನ್ನ ಹುಟ್ಟುಹಾಕಿರುವ ಯುವಕನ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಎರಡು ಬಾರಿ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್ 14ರಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಯುವ ಸಾಧಕರ ಜೊತೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇದೇ ತಿಂಗಳ 11ರಂದು ಅವೇಜ್ ಅಹಮದ್ ಜೊತೆ ಮಾತುಕತೆ ನಡೆಸಿ ಯುವಕನ ಸಾಧನೆಯನ್ನ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಬೇರೆ ಎಲ್ಲಾ ಉಪಗ್ರಹಗಳು ಯಾವ ರೀತಿ ಡೇಟಾವನ್ನ ಬಿಡುಗಡೆ ಮಾಡುತ್ತವೆಯೋ ಅವೆಜ್ ಅಹಮದ್‍ರವರ ಸಂಶೋಧನೆಯ ಉಪಗ್ರಹ ಬೇರೆಲ್ಲಕ್ಕಿಂತ 50ಪಟ್ಟು ಹೆಚ್ಚು ಡೇಟಾವನ್ನ ಬಿಡುಗಡೆಗೊಳಿಸುತ್ತೆ. ಅವೇಜ್ ತಯಾರಿಸಿರೋ ಉಪಗ್ರಹ ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತೆ.

23ರ ಹರೆಯದಲ್ಲೇ ಉಪಗ್ರಹ ಸಂಸ್ಥೆಯನ್ನ ಕಟ್ಟಿಹಾಕಿದ ಸಾಧಕ ಹದಿನಾರು, ಇಪ್ಪತ್ತು.. ಈ ವಯಸ್ಸಿನಲ್ಲೆಲ್ಲಾ ಸಾಮಾನ್ಯವಾಗಿ ವಿದ್ಯಾರ್ಥಿಗಳು ಓದಿನ ಕಡೆ ಗಮನವಹಿಸಿರುತ್ತಾರೆ. ಕೆಲವರು ತಮ್ಮ ಬದುಕು ರೂಪಿಸಿಕೊಳ್ಳಲು ಯಾವುದಾದ್ರೂ ಕೆಲಸ ಮಾಡ್ಬೇಕು ಅಂತಾ ಯೋಚನೆ ಮಾಡ್ತಾ ಇರುತ್ತಾರೆ. ಇನ್ನೂ ಕೆಲವರು ಪ್ರೀತಿ-ಪ್ರೇಮ ಅಂತಾ ಭ್ರಮಲೋಕದಲ್ಲಿ ಸುಂದರ ಕನಸುಗಳನ್ನ ಕಟ್ಟಿಕೊಂಡು ವಿಹರಿಸುತ್ತಿರುತ್ತಾರೆ. ಆದ್ರೆ ಕಾಫಿನಾಡಿನ ಈ ಯುವಕ ಮಾತ್ರ ಕೇವಲ 23ರ ವಯಸ್ಸಿನಲ್ಲಿಯೇ ಇಡೀ ದೇಶದ ಗಮನವನ್ನ ತನ್ನತ್ತ ಸೆಳೆದಿದ್ದಾನೆ. ತಂದೆ ನದೀಮ್ ಅಹಮದ್, ಆಲ್ದೂರಿನಲ್ಲೇ ಮೆಡಿಕಲ್ ಸ್ಟೋರ್ ಇಟ್ಟುಕೊಂಡು, ಮಗನ ಕನಸುಗಳಿಗೆ ನೀರೆರೆಯುತ್ತಾ ಬರುತ್ತಿದ್ದಾರೆ. ಬಾಲ್ಯದಿಂದಲೂ ಓದಿನಲ್ಲಿ ವಿಶೇಷ ಆಸಕ್ತಿ ಹೊಂದಿದನ್ನ ಗಮನಿಸಿದ ಅವೇಜ್ ಅಹಮದ್ ಪೋಷಕರು, ತಮ್ಮ ನಿರ್ಧಾರಗಳನ್ನ ಮಗನ ಮೇಲೆ ಹೇರದೇ ಆತನ ನಿರ್ಧಾರಗಳಿಗೆ ಒತ್ತು ಕೊಟ್ಟು ಗೌರವಿಸುತ್ತಲೇ ಬಂದಿದ್ದಾರೆ. ಆಲ್ದೂರಿನ ಗಲ್ಲಿ-ಗಲ್ಲಿಯಲ್ಲಿ ಓಡಾಡ್ಕೊಂಡು ಬೆಳೆದ ಈ ಯುವಕ ಇಂದು ದೇಶವೇ ತನ್ನತ್ತ ತಿರುಗುವಂತೆ ಮಾಡಿದ್ದಾನೆ. BITS (BIRLA INSTITUTE OF TECHNOLOGY AND SCIENCE) ಪಿಲಾನಿ, ಗೋವಾ ಯುನಿವರ್ಸಿಟಿಯಲ್ಲಿ ಓದಿದ ಅವೇಜ್ ಅಹಮದ್, ಇಂದು ಏರೋಸ್ಪೆಸ್ ಪಿಕ್ಸಲ್ ಅನ್ನೋ ಉಪಗ್ರಹಗಳ ತಯಾರಿಕಾ ಕಂಪನಿಯನ್ನ ತೆರೆದಿದ್ದಾರೆ.

avej ahmed

ಅವೇಜ್ ಅಹಮದ್

ರಷ್ಯಾದಲ್ಲಿ ಉಡಾವಣೆಯಾಗಬೇಕಿದ್ದ ಉಪಗ್ರಹ ನಮ್ಮ ದೇಶದಿಂದಲೇ ಹಾರಲಿದೆ ಅವೇಜ್ ತಯಾರಿಸಿರುವ ಆ ಉಪಗ್ರಹಗಳನ್ನ ಇಸ್ರೋದಿಂದಲೇ ಉಡಾವಣೆ ಮಾಡಬೇಕೆಂಬ ಹಠ, ಆಸೆ ಅವನದ್ದಾಗಿತ್ತು. ಆದರೆ ಮೊದಮೊದಲು ಸ್ಥಳೀಯವಾಗಿ ಅಷ್ಟೊಂದು ಪ್ರೋತ್ಸಾಹ ಸಿಗದ ಹಿನ್ನೆಲೆಯಲ್ಲಿ ರಷ್ಯಾದಿಂದ ಉಡಾವಣೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಅದು ಕೇಂದ್ರ ಸರ್ಕಾರಕ್ಕೆ ಗೊತ್ತಾಗಿ ಕೇಂದ್ರ ಸರ್ಕಾರವೇ ಮುಂದೆ ನಿಂತು ಇಂದು ಉಪಗ್ರಹ ಉಡಾವಣೆಗೆ ಸಾಥ್ ನೀಡಿದೆ. ಈ ಖಾಸಗಿ ಉಪಗ್ರಹ ಕಳೆದ ವರ್ಷವೇ ಉಡಾವಣೆ ಆಗಬೇಕಿತ್ತು. ಆದ್ರೆ, ಕೊರೊನಾ ಎಲ್ಲದಕ್ಕೂ ಬ್ರೇಕ್ ಹಾಕಿದ್ದರಿಂದ ಡಿಸೆಂಬರ್ ಒಳಗೆ ದೇಶದ ಮೊದಲ ಖಾಸಗಿ ಉಪಗ್ರಹ ಮುಗಿಲಿನತ್ತ ಮುಖ ಮಾಡಲಿದೆ. ಇನ್ನೂ 2020ರ ಡಿಸೆಂಬರ್ 14 ರಂದೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಹಾಗೂ ಖಾಸಗಿ ಕಂಪೆನಿಗಳ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಆಗಲೂ ಅವೇಜ್ ಅಹಮದ್ ಮೋದಿ ಜೊತೆ ಮಾತುಕತೆ ನಡೆಸಿದ್ರು. ಮತ್ತೆ ಎರಡನೇ ಬಾರಿಗೆ ಅವೇಜ್ ಅಹಮದ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ ವೇಳೆ ಕಾಫಿನಾಡಿನ ಯುವಕನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಜೊತೆ ನನ್ನ ಮಗ ಮಾತನಾಡಿದ್ದು ಖುಷಿ ತಂದಿದೆ ಬಾಲ್ಯದಿಂದಲೂ ಅವೇಜ್ ಅಹಮದ್ ವಿಶೇಷವಾದ ಆಸಕ್ತಿಯನ್ನ ಓದಿನಲ್ಲಿ ತೋರಿಸುತ್ತಿದ್ದ. ಏನೋ ಒಂದು ಕೆಲಸ ಮಾಡಬೇಕು. ಹೇಗೋ ಒಂದು ಜೀವನ ಮಾಡಬೇಕು ಅನ್ನೋ ಯೋಚನೆ ಅವನದ್ದಾಗಿರಲಿಲ್ಲ. ಏನಾದ್ರೂ ವಿಶೇಷವಾದ ಕೆಲಸವನ್ನ ಮಾಡಬೇಕು, ದೇಶಕ್ಕಾಗಿ ಏನನಾದ್ರೂ ಸಾಧನೆ ಮಾಡಬೇಕು ಅನ್ನೋ ಯೋಚನೆ ಅವನದ್ದಾಗಿತ್ತು, ಸದ್ಯ ದೇಶದ ಪ್ರಧಾನಿ ಜೊತೆಯೇ ತನ್ನ ಕನಸಿನ ಯೋಜನೆಯನ್ನ ಬಿಚ್ಚಿಟ್ಟಿರೋದು ನಮಗೆಲ್ಲಾ ಸಂತಸ ಆಗಿದೆ ಅಂತಾ ಅವೇಜ್ ಅಹಮದ್ ತಂದೆ ನದೀಂ ಅಹಮದ್ ಹೆಮ್ಮೆ ಪಟ್ಟಿದ್ದಾರೆ. ಬಿಟ್ಸ್ ಸೇರಿದ ಮೊದಲ ವರ್ಷದಲ್ಲೇ ಸ್ಪೆಸೆಕ್ಸ್ ಕಂಪೆನಿಯ ಹೈಪರ್ ಲೂಪ್ ಸ್ಪರ್ಧೆಗೆ ಅಮೆರಿಕಾಗೆ ತೆರಳಿದಾಗ, ಅವೇಜ್ ಅಹಮದ್ ಸಾಧನೆ ನೋಡಿ ನಾಸಾ ಕೈ ಬೀಸಿ ಕರೆದ್ರೂ ತನ್ನ ದೇಶದಲ್ಲೇ ಸಾಧನೆ ಮಾಡಬೇಕು ಅಂತಾ ಬಂದಿದ್ದನ್ನ ತಂದೆ ನದೀಂ ನೆನಪಿಸಿಕೊಳ್ಳುತ್ತಾರೆ. ಆ ಬಳಿಕ 2019ರಲ್ಲಿ ಅಮೆರಿಕಾದ ಲಾಸ್ ಎಂಜಲೀಸ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಏಷ್ಯಾದಿಂದ ಇವರ ಪಿಕ್ಸೆಲ್ ಕಂಪೆನಿ ಆಯ್ಕೆಯಾಗಿತ್ತು. ನಾಸಾ, ಯುಎಸ್ ಏರ್ಫೋರ್ಸ್, ಲೊಕ್ ಹಿಡ್ ಮಾರ್ಟಿನಂತಹ ಪ್ರಸಿದ್ಧ ಕಂಪೆನಿಗಳ ವಿಜ್ಞಾನಿಗಳ ಜೊತೆ ಕೆಲಸ ಮಾಡಿದ ಹೆಮ್ಮೆ ಅವೇಜ್ ಅಹಮದ್ ಅವರದ್ದು.. ಇನ್ನೂ ತಮ್ಮ ಕಣ್ಣ ಮುಂದೆ ಆಡಿ ಬೆಳೆದ ಹುಡುಗನ ಸಾಧನೆ ಕಂಡು ಆಲ್ದೂರಿನ ಜನ ಸಂತೋಷಗೊಂಡಿದ್ದು ತಮ್ಮ ಮಕ್ಕಳೇ ಸಾಧಿಸಿದಷ್ಟು ಸಂತೋಷ ಆಗಿದೆ ಅಂತಾ ನದೀಂ ಅಹ್ಮದ್ ಸ್ನೇಹಿತ ರವಿ ಖುಷಿ ಪಟ್ಟಿದ್ದಾರೆ. avej ahmed 1

ಆಲ್ದೂರಿನಿಂದ ಅಮೆರಿಕಾದವರೆಗೆ ಪಯಣವೇ ರೋಚಕ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ನದೀಂ ಅಹ್ಮದ್, ರಾಯಲ್ಸ್ ಮೆಡಿಕಲ್ ಶಾಪ್ ಇಟ್ಕೊಂಡು ಜೀವನ ನಡೆಸುತ್ತಿದ್ದಾರೆ. ಇವರ ಪುತ್ರ ಆವೇಜ್ ಅಹಮದ್ ಎಸ್ಎಸ್ಎಲ್ಸಿ ವರೆಗೂ ಆಲ್ದೂರಿನಲ್ಲಿ ಶಿಕ್ಷಣ ಪಡೆದರು. ಆ ಬಳಿಕ ಮಂಗಳೂರಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿ ಸಿಇಟಿಯಲ್ಲಿ 477ನೇ ರ್ಯಾಂಕ್ ಪಡೆದು, ಜೆಇಇ ಪರೀಕ್ಷೆಯಲ್ಲಿ 2000 ರ್ಯಾಂಕ್ ಗಳಿಸಿದ್ರು. ಆ ಬಳಿಕ ಬಿಟ್ಸ್ ನಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿ ಎಂಎಸ್ಸಿ ಮಾಥಮೆಟಿಕ್ಸ್ ಪದವಿ ಪಡೆದು ಬೆಂಗಳೂರಿನಲ್ಲಿ ಪಿಕ್ಸೆಲ್ ಎಂಬ ತನ್ನದೇ ಆದ ಏರೋಸ್ಪೇಸ್ ಕಂಪನಿ ಪ್ರಾರಂಭಿಸಿ ಎಲ್ಲರೂ ತಿರುಗಿನೋಡುವಂತಹ ಸಾಧನೆ ಮಾಡಿದ್ದಾರೆ. ಅದೇನೆ ಇರಲಿ ಇಲ್ಲೇ ಹುಟ್ಟಿ ಇಲ್ಲೇ ಬೆಳೆದಿದ್ದೇವೆ. ಏನೇ ಮಾಡಿದರೂ ಇಲ್ಲಿಂದಲೇ ಮಾಡಬೇಕೆಂಬುದು ಅವೇಜ್ ಅಹಮದ್ ಅಂತರಾಳವಾಗಿತ್ತು. ಹಾಗಾಗಿ, ವಿದೇಶದಲ್ಲಿ ಸಿಕ್ಕ ಕೆಲಸವನ್ನೂ ತ್ಯಜಿಸಿ ಬೆಂಗಳೂರಲ್ಲಿ ಕಂಪನಿ ತೆರದು ತನ್ನ ಎಳೆಯ ವಯಸ್ಸಿನಲ್ಲಿಯೇ ಸಾಧನೆ ಮಾಡಿದ್ದಾನೆ. ಎರಡರಿಂದ ಮೂರು ವರ್ಷದಲ್ಲಿ ಸುಮಾರು 30ಕ್ಕೂ ಹೆಚ್ಚು ಖಾಸಗಿ ಉಪಗ್ರಹಗಳು ಉಡಾವಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅವುಗಳ ಹಿಂದೆ ಕನ್ನಡಿನ ಸಾರಥ್ಯವಿರಲಿದೆ ಅನ್ನೋದು ಕನ್ನಡಿಗರ ಗರ್ವ ಅಂದ್ರು ತಪ್ಪಿಲ್ಲ. ಅದೇನೆ ಇದ್ರು, ಅವೇಜ್ ಅವರ ಉಪಗ್ರಹಗಳು ಯಶಸ್ವಿಯಾಗಿ ಭಾರತದ ಕೀರ್ತಿ ಪತಾಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಿ ಅನ್ನೋದು ಪ್ರತಿಯೊಬ್ಬ ಕನ್ನಡಿಗನ ಬಯಕೆ.

ವರದಿ: ಪ್ರಶಾಂತ್

ಇದನ್ನೂ ಓದಿ: ಆತ್ಮಹತ್ಯಾ ಬಾಂಬರ್​ಗಳ ಸಂಬಂಧಿಗಳಿಗೆ ಸೈಟು, ನಗದು ಬಹುಮಾನ ಘೋಷಣೆ ಮಾಡಿದ ತಾಲಿಬಾನ್​ಗಳು

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ