ಗಾರೆ ಮೇಸ್ತ್ರಿಯ ಬಾಳಿಗೆ ಕಂಟಕವಾದ ಬೆಂಗಳೂರಿನ ಮೋರಿ..!
ಆತನ ಟೈಮ್ ಸರಿಯಿತ್ತೊ ಇಲ್ವೊ..ನೂರಾರು ಜನರಿಗೆ ಮನೆ ಕಟ್ಟಿ ಗೃಹ ಪ್ರವೇಶಕ್ಕೆ ಕಾರಣನಾಗಿದ್ದ.. ಇತ್ತ ಕಾಮಗಾರಿ ನಡೆಯುತ್ತಿದ್ದ ಜಾಗದ ಮೋರಿಯೇ ಇತನ ಬಾಳಿಗೆ ಕಂಟಕವಾಗಿದೆ. ಕುಡಿದು ಮತ್ತಿನಲ್ಲಿದ್ದವನ ಪ್ರಾಣ ಪಕ್ಷಿ ಹಾರಿಹೋಗಿದೆ. ಕೈಯಲ್ಲಿ ಊಟದ ಪಾಕೇಟ್ ಹಿಡಿದು ಕುಡಿದು ತೇಲಾಡುತ್ತಾ ನಿಂತಿರುವ ವಾಹನದ ಪಕ್ಕ ಮೂರ್ತ ವಿಸರ್ಜನೆಗೆ ಹೋದ ಅಷ್ಟೇ ಮುಂದೆ ಸಿಕ್ಕಿದ್ದು ಹೆಣವಾಗಿ.
ಬೆಂಗಳೂರು, (ಜನವರಿ 03): ಬೆಂಗಳೂರಿನ ಹೆಸರಘಟ್ಟ ರಸ್ತೆಯ ಲಕ್ಷ್ಮಿಪುರದ ನಿವಾಸಿ ಹರೀಶ್ ನಿನ್ನೆ ರಾತ್ರಿ 9.5ರ ಸುಮಾರು ತನ್ನ ಚಿಕ್ಕಮ್ಮನ ಮನೆಗೆ ತೆರಳಬೇಕಿತ್ತು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹರೀಶ್, ರಾತ್ರಿ ಊಟ ತೆಗೆದುಕೊಂಡು ತನ್ನ ಮನೆಗೆ ಹೊರಟಿದ್ದ. ಈ ವೇಳೆ ರಸ್ತೆಯ ಪಕ್ಕದಲ್ಲಿನ ತಡೆಗೋಡೆ ಇಲ್ಲದ ಜಾಗಕ್ಕೆ ಹೋಗಿ ಮೂರ್ತ ವಿಸರ್ಜನೆಗೆ ಹೋಗಿದ್ದಾನೆ ಅಷ್ಟೇ ಆಯತಪ್ಪಿ ಚರಂಡಿಯಲ್ಲಿ ಬಿದ್ದಿದ್ದಾನೆ.
ಕಳೆದ ಆರು ತಿಂಗಳ ಹಿಂದೆ ಹರೀಶ್ ಮನೆ ಬಿಟ್ಟು ಗಾರೆ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಬಿಡಿಸಲು ರಿಯಾಬ್ ಸೆಂಟರ್ ಗೆ ಸೇರಿಸಲಾಗಿತ್ತು, ಅಲ್ಲಿಂದ ಬಂದು ಸ್ವಲ್ಪ ದಿನ ಮನೆಯಲ್ಲಿದ್ದ. ಬಳಿಕ ವಾರದ ಹಿಂದೆ ಗಾರೆ ಮೇಸ್ತ್ರಿ ಕೆಲಸಕ್ಕೆ ಸೇರಿದ್ದ, ಹರೀಶ್ ಮೃತಪಡುವುದಕ್ಕೂ ಮೊದಲು ತೇಲಾಡಿಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..ಆ ದೃಶ್ಯದಲ್ಲಿ ಕಾಣುವ ಹಾಗೆ ಓರ್ವ ವ್ಯಕ್ತಿ ಈತ ಬೀಳುವುದನ್ನ ಕಂಡರೂ ಕಾಣದಂತೆ ಹೋಗಿದ್ದು ಶೋಚನೀಯ.
ಸದ್ಯಕ್ಕೆ ಮೃತ ಹರೀಶ್ ನ ಮೃತದೇಹವನ್ನ MS ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ
ರಾಮನಗರ: ಡಿಸೆಂಬರ್ 31ರ ರಾತ್ರಿ ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಡಿ.31ರ ರಾತ್ರಿ ತನ್ನ ಕಾರಿಗೆ ಬೈಕ್ ಟಚ್ ಆಗಿದೆ ಎಂದು ಮಧುಕುಮಾರ್(30) ಕರೆ ಮಾಡಿದ್ದ. ಕರೆ ಮಾಡಿದ ಬಳಿಕ ಮಧುಕುಮಾರ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಜ.1ರಂದು ಮಧುಕುಮಾರ್ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿತ್ತು. ಆದ್ರೆ, ಕೂಡ್ಲೂರು ಬಳಿ ಬಾವಿಯಲ್ಲಿ ಇಂದು ಮಧುಕುಮಾರ್ ಶವ ಪತ್ತೆಯಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಧುಕುಮಾರ್ ಸಾವಿನ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ