ಕರ್ನಾಟಕದ ಮಾದರಿಯಲ್ಲೇ ಆಂಧ್ರದಲ್ಲೂ ಶಕ್ತಿ ಯೋಜನೆ ಜಾರಿಗೆ ಚಿಂತನೆ, ಬೆಂಗಳೂರಿನಲ್ಲಿ ಅಧ್ಯಯನ
ಕರ್ನಾಟಕದಲ್ಲಿ ಬಸ್ ಟಿಕೆಟ್ ದರ ಏರಿಕೆ ಬಿಸಿ ನಡುವೆ, ಶಕ್ತಿ ಯೋಜನೆಗೆ ಪ್ರಶಂಸೆ ವ್ಯಕ್ತವಾಗಿದೆ. ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗೆ ನೆರೆ ರಾಜ್ಯ ಆಂಧ್ರ ಪ್ರದೇಶದ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ರಾಜ್ಯದಲ್ಲೂ ಸಹ ಈ ಯೋಜನೆ ಜಾರಿಗೆ ತರಲು ಮುಂದಾಗಿದೆ. ಇದರಿಂದ ಇಂದು ಆಂಧ್ರದ ಸಚಿವರ ನಿಯೋಗ ಕರ್ನಾಟಕದಲ್ಲಿ ಅಧ್ಯಯನ ನಡೆಸಿದ್ದು, ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದೆ.
ಬೆಂಗಳೂರು, (ಜನವರಿ 03): ಐದು ಕಾಂಗ್ರೆಸ್ ಸರ್ಕಾರ ಮಹತ್ವಪೂರ್ಣ ಕಾಂಗ್ರೆಸ್ ಗ್ಯಾರೆಂಟಿಗಳ ಪೈಕಿ ಶಕ್ತಿ ಯೋಜನೆಯೂ ಒಂದಾಗಿದ್ದು, ರಾಜ್ಯದ ಮಹಿಳೆಯರನ್ನಷ್ಟೇ ಅಲ್ಲದೇ ಪಕ್ಕದ ರಾಜ್ಯ ಆಂಧ್ರ ಪ್ರದೇಶದ ಗಮನವನ್ನೂ ಸೆಳೆದಿದೆ. ಚುನಾವಣೆ ಪೂರ್ವದಲ್ಲಿ ಚಂದ್ರಬಾಬು ನಾಯ್ಡು ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದರು. ಹೀಗಾಗಿ ಇಂದು (ಜನವರಿ 03) ಕರ್ನಾಟಕದಲ್ಲಿ ಜಾರಿಯಲ್ಲಿರುವ ಶಕ್ತಿ ಯೋಜನೆ ಕುರಿತು ಅಧಿಕಾರಿಗಳು ಹಾಗೂ ಸಾರಿಗೆ ಸಚಿವರಿಂದ ಆಂಧ್ರಪ್ರದೇಶದ ಸಚಿವರುಗಳು ಮಾಹಿತಿ ಪಡೆದಿದ್ದಾರೆ.
ಆಂಧ್ರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಗುಮ್ಮಿದಿ ಸಂಧ್ಯಾ ರಾಣಿ, ಗೃಹ ಸಚಿವೆ ವಂಗಲಪುಡಿ ಅನಿತಾ ಹಾಗೂ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ ನೇತೃತ್ವದ 3 ಸಚಿವರ ತಂಡ ಅಧ್ಯಯನ ನಡೆಸಿ ತೆರಳಿದೆ. ಶಾಂತಿನಗರದ KSRTC ಡಿಪೋಗೆ ತೆರಳಿ ವಿಶೇಷ ಬಸ್ ಗಳ ವೀಕ್ಷಣೆ ಮಾಡಿದರು. ಇದರ ಜೊತೆಗೆ ಉಚಿತ ಬಸ್ ಪ್ರಯಾಣದ ಮಾನದಂಡಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: ಜ.5ರಿಂದಲೇ KSRTC, BMTC ಟಿಕೆಟ್ ದರ ಹೆಚ್ಚಳ ಜಾರಿ: ನಿಮ್ಮ ಊರಿಗೆ ಎಷ್ಟು ರೇಟ್ ?
ಆಂಧ್ರ ಪ್ರದೇಶದ ಸಚಿವರ ನಿಯೋಗ ರಾಜ್ಯದ ಶಕ್ತಿ ಯೋಜನೆಯ ಸಾಧಕ ಬಾಧಕಗಳನ್ನ ಬಗ್ಗೆ ಚರ್ಚೆ ನಡೆಸಿದೆ. ಆರ್ಥಿಕ ಇಲಾಖೆಯ ಆಗುಹೋಗುಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ. ಕರ್ನಾಟಕ ಮಾದರಿಯಲ್ಲೇ ಆಂಧ್ರಪ್ರದೇಶದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಚಿಂತನೆಯಲ್ಲಿದೆ. ಕರ್ನಾಟಕದ ಮಾಹಿತಿಗಳನ್ನ ಕ್ರೋಢೀಕರಿಸಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಮಾಹಿತಿ ನೀಡಲಿದ್ದಾರೆ. ಸದ್ಯ ಕರ್ನಾಟಕದಲ್ಲಿ ಮಹಿಳಾ ಪ್ರಯಾಣಿಕರ ಪ್ರಶಂಸೆ ಬೆನ್ನಲ್ಲೇ ಆಂಧ್ರಪ್ರದೇಶ ಸಚಿವರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರಧಾನಿ ಮೋದಿ ಸೇರಿದಂತೆ ಬಹುತೇಕ NDA ನಾಯಕರು ಕಾಂಗ್ರೆಸ್ ನ ಗ್ಯಾರೆಂಟಿ ಯೋಜನೆಗಳನ್ನ ಟೀಕೆ ಮಾಡಿದ್ರು. ಇದೀಗ ಕಾಂಗ್ರೆಸ್ ನ ಶಕ್ತಿ ಯೋಜನೆಗೆ ಬಗ್ಗೆ ಪ್ರಶಂಸೆ ವ್ಯಕ್ತಿಪಡಿಸಿದ್ದು, ತಮ್ಮ ರಾಜ್ಯಗಳಲ್ಲೂ ಜಾರಿಗೆ ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 pm, Fri, 3 January 25