AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ.5ರಿಂದಲೇ KSRTC, BMTC ಟಿಕೆಟ್ ದರ ಹೆಚ್ಚಳ ಜಾರಿ: ನಿಮ್ಮ ಊರಿಗೆ ಎಷ್ಟು ರೇಟ್ ?

ನಾಳೆ ಶನಿವಾರ ಒಂದು ದಿನ ಕಳೆದರೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಗಂಡಸರ ಜೇಬಿಗೆ ಕತ್ತರಿ ಬೀಳಲಿದೆ. ಭಾನುವಾರ ಬೆಳಗ್ಗೆಯಿಂದಲೇ ಅಂದರೆ ಜನವರಿ 5ರಿಂದ KSRTC ಟಿಕೆಟ್ ದರ ಹೆಚ್ಚಳ ರಾಜ್ಯಾದ್ಯಂತ ಜಾರಿಗೆ ಬರುತ್ತಿದೆ. ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಹಾಗಾದ್ರೆ, ನಿಮ್ಮ ಊರಿನ ಟಿಕೆಟ್ ರೇಟ್‌ ಎಷ್ಟು? ಎನ್ನುವ ವಿವರ ಇಲ್ಲಿದೆ.

ಜ.5ರಿಂದಲೇ KSRTC, BMTC ಟಿಕೆಟ್ ದರ ಹೆಚ್ಚಳ ಜಾರಿ: ನಿಮ್ಮ ಊರಿಗೆ ಎಷ್ಟು ರೇಟ್ ?
KSRTC And BMTC
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Jan 03, 2025 | 6:51 PM

Share

ಬೆಂಗಳೂರು, (ಜನವರಿ 03): ಕರ್ನಾಟಕ ನಾಲ್ಕು ನಿಗಮಗಳ ಬಸ್​​ ಪ್ರಯಾಣ ದರದಲ್ಲಿ ಶೇ.15ರಷ್ಟು ಏರಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾಲು ಸಾಲು ಬೆಲೆ ಏರಿಕೆಯಿಂದ ತತ್ತರಿಸಿರೋ ಜನರಿಗೆ ಇದೀಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆನೋ ಫ್ರೀ ಇದೆ. ಒಂದು ಕೊಟ್ಟು ಮತ್ತೊಂದು ಕಸಿದುಕೊಂಡಿದ್ದಾರೆ ಎನ್ನುವುದು ಜನರ ಮಾತು. ಇದನ್ನೇ ಅಸ್ತ್ರ ಮಾಡ್ಕೊಂಡ ಬಿಜೆಪಿ, ಇವತ್ತು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡಿದೆ. ಇನ್ನು ಈ ಬಗ್ಗೆ ಖುದ್ದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ಸಮಜಾಯಿಷಿ ನೀಡಿದರು.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಲಿಂಗರೆಡ್ಡಿ ನಾಲ್ಕೂ ಸಾರಿಗೆ ನಿಗಮಗಳು ದರ ಪರಿಷ್ಕರಣೆ ಕೇಳುತ್ತಿದ್ದರು. ಆದ್ರೆ, ಸಮಯ ಕೂಡಿ ಬಂದಿರಲಿಲ್ಲ. ಬಿ ಎಂಟಿಸಿಯಲ್ಲಿ 2014 ರಲ್ಲಿ ದರ ಪರಿಷ್ಕರಣೆ ಮಾಡಿದ್ವಿ. ಡೀಸೆಲ್ ದರ ಕಡಿಮೆಯಾದಾಗ ಟಿಕೇಟ್ ದರ ಕಡಿಮೆ ಮಾಡಿದ್ಚಿ 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ದರ ಪರಿಷ್ಕರಣೆ ಆಗಿರಲಿಲ್ಲ. ಇಂಧನ‌ದರ ಉಪಕರಣ ದರ ಈಗಿನಷ್ಟು ಇರಲಿಲ್ಲ, ಶೇ‌ 12ರಷ್ಟು ದರ ಕೆಎಸ್ಆರ್ಟಿಸಿಯವರು 2020 ರಲ್ಲಿ ಹೆಚ್ಚಳ ಮಾಡಿದ್ರು, ಡೀಲ್​ಗೆ ಆಗ 9.16 ಕೋಟಿ ರೂ. ಖರ್ಚಾಗುತ್ತಿತ್ತು. ಈಗ ಪ್ರತಿದಿನ 13.21 ಕೋಟಿ ಡೀಸೆಲ್ ದರ ವೆಚ್ಚವಿದೆ. ಡೀಸೆಲ್ ಗೆ ಪ್ರತಿದಿನ 4.05 ಕೋಟಿ ರೂ. ಖರ್ಚು ಹೆಚ್ಚಾಗಿದೆ. ಸಿಬ್ಬಂದಿ ವೆಚ್ಚ ಪ್ರತಿದಿನ 5.51 ಕೋಟಿ ಹೆಚ್ಚಳವಾಗಿದೆ. ಪ್ರತಿದಿನ ಒಟ್ಟು 9.56 ಕೋಟಿ ರೂ. ವೆಚ್ಚ ಹೆಚ್ಚಾಗಿದೆ. ಸರ್ಕಾರ ನಮಗೆ 8800 ಕೋಟಿ ರೂ. ನಮಗೆ ಶಕ್ತಿ ಯೋಜನೆಯಡಿ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಟಿಕೆಟ್​ ದರ ಏರಿಕೆ ನಿರ್ಧಾರ ಬೆನ್ನಲ್ಲೇ ಸಾರಿಗೆ ನೌಕರರಿಗೆ ಸರ್ಕಾರದಿಂದ ಗುಡ್​ ನ್ಯೂಸ್​

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಲಿಂಗರೆಡ್ಡಿ, ರಾಜ್ಯ ಸರ್ಕಾರಕ್ಕೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡುವುದಕ್ಕೆ ಇಷ್ಟ ಇರಲಿಲ್ಲ. ಪ್ರತಿನಿತ್ಯ ವೆಚ್ಚ ಜಾಸ್ತಿ ಆಗುತ್ತಾ ಇತ್ತು. ಇಷ್ಟ ಕಷ್ಟದಲ್ಲಿ ಹೊಸ ಬಸ್ ಕೊಟ್ಟಿದ್ದೀವಿ. 1000 ನೇಮಕಾತಿ ಮಾಡಿದ್ದೀವಿ. ಹೊಸ ನಿಯಮಗಳನ್ನು ಆರೋಗ್ಯ ವಿಮೆ ಮಾಡುತ್ತಾ ಇದ್ದೀವಿ. ಬಿಜೆಪಿಯವರು ಸಾಲ ಮಾಡಿ ಬಿಟ್ಟು ಹೋಗಿದ್ದರು. ಬಿಜೆಪಿ ಮಹಿಳಾ ವಿರೋಧಿಗಳು. ಶಕ್ತಿ ಯೋಜನೆ ನಿಲ್ಲಿಸಬೇಕು ಎಂದು ಅಪಪ್ರಚಾರ ಮಾಡುತ್ತಾ ಇದ್ದಾರೆ. ನಾವು 2028ರಲ್ಲಿ ಮತ್ತೆ ನಮ್ಮ ಸರ್ಕಾರ ಬರುತ್ತೆ. 2030ರವರೆಗೆ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತೆ ಎಂದು ಹೇಳಿದರು.

ನಾಳೆ ಸಾರಿಗೆ ಇಲಾಖೆ ಅಧಿಕೃತವಾಗಿ ದರ ಏರಿಕೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ ನ ಸದ್ಯದ ಟಿಕೆಟ್ ದರ ಮತ್ತು 15% ರಷ್ಟು ಹೆಚ್ಚಳ ನಂತರದ ದರ ಎಷ್ಟಾಗಬಹುದು ಎನ್ನುವ ಅಂದಾಜು ಪಟ್ಟಿ ಈ ಕೆಳಗಿನಂತಿದೆ.

ಬಸ್ ಪ್ರಯಾಣ ದರ ಎಲ್ಲಿಗೆ ಎಷ್ಟು ಹೆಚ್ಚಳ?

ಬೆಂಗಳೂರು ಟು ಹುಬ್ಬಳ್ಳಿ ಸದ್ಯದ ದರ 501 ರೂ. ಇದೆ. ಹೆಚ್ಚಳದ ನಂತರ 576 ರೂಪಾಯಿ ಆಗಲಿದೆ. ಹಾಗೇ ಬೆಂಗಳೂರು ಟು ಬೆಳಗಾವಿ ಸದ್ಯದ ದರ 631 ರೂ. ಇದೆ. ಏರಿಕೆ ಬಳಿಕ 725 ರೂಪಾಯಿ ಆಗಲಿದೆ. ಬೆಂಗಳೂರು ಟು ಕಲಬುರಗಿ 706 ರೂಪಾಯಿ ಇದ್ದು, ಹೈಕ್​ ಬಳಿಕ 811 ರೂ. ಆಗಲಿದೆ. ಬೆಂಗಳೂರು ಟು ಮೈಸೂರು ಸದ್ಯದ ಬಸ್​​ ಚಾರ್ಜ್​ 185 ರೂ. ಇದೆ. ಏರಿಕೆ ಬಳಿಕ 213 ರೂಪಾಯಿ ಆಗಲಿದೆ. ಬೆಂಗಳೂರು ಟು ಮಡಿಕೇರಿ 358 ರೂಪಾಯಿ ಇದ್ದು, ಹೆಚ್ಚಳದ ನಂತ್ರ 411 ರೂಪಾಯಿ ಆಗಲಿದೆ. ಇನ್ನು ಬೆಂಗಳೂರು ಟು ಚಿಕ್ಕಮಗಳೂರು ಸದ್ಯದ ಬಸ್​ ಪ್ರಯಾಣ ದರ 285 ರೂಪಾಯಿ ಇದ್ದು, ಏರಿಕೆ ಬಳಿಕ 328 ರೂಪಾಯಿ ಆಗಲಿದೆ. ಬೆಂಗಳೂರು ಟು ಹಾಸನ ಸದ್ಯದ ಪ್ರಯಾಣ ದರ 246 ರೂಪಾಯಿ ಇದೆ. ಹೆಚ್ಚಳದ ನಂತರ 282 ರೂಪಾಯಿ ಆಗಲಿದೆ. ಬೆಂಗಳೂರು ಟು ಮಂಗಳೂರು ಬಸ್​ ಪ್ರಯಾಣ ದರ 424 ಇದ್ದು, ಹೈಕ್​ ಆದ್ರೆ 477 ರೂ. ಆಗಲಿದೆ. ಬೆಂಗಳೂರು ಟು ರಾಯಚೂರು ಬಸ್​ ಪ್ರಯಾಣ ದರ ಸದ್ಯಕ್ಕೆ 556 ರೂ. ಇದೆ. ಹೆಚ್ಚಳದ ನಂತರ 639 ರೂಪಾಯಿ ಆಗಲಿದೆ. ಇನ್ನು ಬೆಂಗಳೂರು ಟು ಬಳ್ಳಾರಿ ಸದ್ಯದ ದರ 376 ರೂಪಾಯಿ ಇದೆ. ಹೆಚ್ಚಳದ ನಂತ್ರ 432 ರೂಪಾಯಿ ಆಗಲಿದೆ.

KSRTC ಮಾತ್ರವಲ್ಲ BMTC ಪ್ರಯಾಣಿಕರಿಗೆ ಬಿಗ್ ಶಾಕ್

ಕೆಎಸ್​ಆರ್​ಟಿಸಿ ಮಾತ್ರವಲ್ಲ ಬಿಎಂಟಿಸಿ ಕೂಡ ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟಿದೆ. ಹಾಗಾದ್ರೆ ಮೆಜೆಸ್ಟಿಕ್​ನಿಂದ ಯಾವ್ಯಾವ ಕಡೆ ಎಷ್ಟೆಷ್ಟು ಬಸ್​​ ಚಾರ್ಜ್ ಇತ್ತು.. ದರ ಏರಿಕೆ ಬಳಿಕ ಎಷ್ಟಾಗಲಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಮೆಜೆಸ್ಟಿಕ್​ನಿಂದ ಜಯನಗರಕ್ಕೆ ಸದ್ಯ 20 ರೂಪಾಯಿ ಇದೆ.. ಆದ್ರೆ ದರ ಏರಿಕೆ ಬಳಿಕ 23 ರೂಪಾಯಿ ಆಗಲಿದೆ. ಮೆಜೆಸ್ಟಿಕ್​ನಿಂದ ಸರ್ಜಾಪುರಕ್ಕೂ 25 ರೂಪಾಯಿ ಇದೆ.. ಪ್ರಯಾಣ ದರ ಏರಿಕೆ ಬಳಿಕ 28 ರೂ. ಆಗಲಿದೆ. ಮೆಜೆಸ್ಟಿಕ್​ ಟು ಅತ್ತಿಬೆಲೆಗೆ ಸದ್ಯದ ಪ್ರಯಾಣ ದರ 25 ರೂಪಾಯಿ ಇದೆ.. ಚಾರ್ಜ್ ಹೈಕ್​ ಬಳಿಕ 28 ರೂಪಾಯಿ ಆಗಲಿದೆ. ಮೆಜೆಸ್ಟಿಕ್​ನಿಂದ ಹಾರೋಹಳ್ಳಿಗೆ 25 ರೂಪಾಯಿ ದರ ಇದೆ. ಹೆಚ್ಚಳದ ನಂತರ 28.75 ರೂ. ಆಗಲಿದೆ. ಹಾಗೇ ಮೆಜೆಸ್ಟಿಕ್​ನಿಂದ ಬನಶಂಕರಿಗೆ 20 ರೂಪಾಯಿ ಇದೆ.. ಪ್ರಯಾಣ ದರ ಜಾಸ್ತಿ ಆದ್ರೆ 23 ರೂಪಾಯಿ ಆಗಲಿದೆ.. ಇನ್ನು ಮೆಜೆಸ್ಟಿಕ್​ನಿಂದ ಏರ್​​ಪೋರ್ಟ್​ಗೆ ಈಗ 235 ರೂಪಾಯಿ ಇದೆ.. ದರ ಏರಿಕೆ ಆದ್ರೆ 270 ರೂಪಾಯಿ ಆಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ