ಬಂಕರ್​ನಲ್ಲಿ ಅಡಗಿ ಕುಳಿತಿದ್ದ 4 ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ

| Updated By: Digi Tech Desk

Updated on: Jul 08, 2024 | 9:13 AM

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ ನಂತರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ಭದ್ರತಾ ಅಧಿಕಾರಿಗಳು ಕಬೋರ್ಡ್‌ನಲ್ಲಿ ಸಣ್ಣ, ಸುಸಜ್ಜಿತ, ಕಾಂಕ್ರೀಟ್ ಬಂಕರ್ ಅನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು. ಉಗ್ರರು ಅದೇ ಬಂಕರ್​ನಲ್ಲಿ ಅಡಗಿದ್ದರು.

ಬಂಕರ್​ನಲ್ಲಿ ಅಡಗಿ ಕುಳಿತಿದ್ದ 4 ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ
ಬಂಕರ್
Follow us on

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳಿಂದ ಹತರಾದ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಕಬೋರ್ಡ್‌ನೊಳಗೆ ನಿರ್ಮಿಸಲಾದ ಬಂಕರ್‌ನಲ್ಲಿ ಅಡಗಿಕುಳಿತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಎನ್‌ಕೌಂಟರ್‌ನ ನಂತರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ಭದ್ರತಾ ಅಧಿಕಾರಿಗಳು ಮನೆಯೊಂದರ ಬೀರುವಿನಲ್ಲಿ ಮರೆಮಾಚಲ್ಪಟ್ಟಿರುವ ಸಣ್ಣ, ಸುಸಜ್ಜಿತ, ಕಾಂಕ್ರೀಟ್ ಬಂಕರ್ ಅನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು.

ಅಡಗುತಾಣ ಪತ್ತೆಯಾದ ನಂತರ, ಅಧಿಕಾರಿಗಳು ಈ ಪ್ರದೇಶದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ಆರಂಭವಾದ ಅವಳಿ ಎನ್‌ಕೌಂಟರ್‌ನಲ್ಲಿ ಒಟ್ಟು ಆರು ಭಯೋತ್ಪಾದಕರು ಹತರಾಗಿದ್ದಾರೆ.

ಮತ್ತಷ್ಟು ಓದಿ: ಜಮ್ಮು ಕಾಶ್ಮೀರದಲ್ಲಿ ಸೇನಾ ನೆಲೆ ಮೇಲೆ ಭಯೋತ್ಪಾದಕ ದಾಳಿ, ಓರ್ವ ಯೋಧನಿಗೆ ಗಾಯ

ಮೊದರ್ಗಾಮ್ ಎನ್‌ಕೌಂಟರ್ ಸ್ಥಳದಲ್ಲಿ ಇಬ್ಬರು ಭಯೋತ್ಪಾದಕರ ಶವಗಳನ್ನು ವಶಪಡಿಸಿಕೊಂಡರೆ, ಭಾನುವಾರ ಚಿನ್ನಿಗಮ್ ಸ್ಥಳದಲ್ಲಿ ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಡಿಐಜಿ ಸ್ವೈನ್ ಮಾತನಾಡಿ, ಇಷ್ಟೊಂದು ಸಂಖ್ಯೆಯಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಿರುವುದು ದೊಡ್ಡ ವಿಷಯ ಎಂದಿದ್ದಾರೆ.

ಕುಲ್ಗಾಂನಲ್ಲಿ ಹುತಾತ್ಮರಾದ ಲ್ಯಾನ್ಸ್​ ನಾಯಕ್ ಪ್ರದೀಪ್ ಕುಮಾರ್ ಮತ್ತು ಕಾನ್​ಸ್ಟೆಬಲ್ ಪ್ರವೀಣ್​ ಜಂಜಾಲ್​ ಪ್ರಭಾಕರ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇತ್ತೀಚೆಗಷ್ಟೇ ರಿಯಾಸಿಯಲ್ಲಿ ಭಕ್ತರ ಬಸ್​ ಮೇಲೆ ಉಗ್ರರು ದಾಳಿ ನಡೆಸಿದ್ದರು. ಹಾಗೆಯೇ ಭಾನುವಾರ ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು, ಪ್ರತೀಕಾರದ ಗುಂಡಿನ ದಾಳಿ ಬಳಿಕ ಅವರು ಓಡಿ ಹೋಗಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ 

 

Published On - 9:03 am, Mon, 8 July 24