ನಮ್ಮೊಂದಿಗೆ ಗೆಳೆತನ ಇಟ್ಟುಕೊಂಡರೆ ಪಾಕಿಸ್ತಾನದ ಪ್ರಗತಿ, ಹಗೆತನವಿದ್ದರೆ ಇದೇ ದುಸ್ಥಿತಿ: ಫಾರೂಕ್ ಅಬ್ದುಲ್ಲಾ

ಪಾಕಿಸ್ತಾನವು ಭಾರತದೊಂದಿಗೆ ಗೆಳೆತನ ಸಾಧಿಸಿದರೆ ಆ ದೇಶದ ಪ್ರಗತಿಯಾಗುತ್ತದೆ ಒಂದೊಮ್ಮೆ ಹಗೆತನ ಮುಂದುವರೆಸಿದರೆ ಈಗಿರುವ ಸ್ಥಿತಿಯೇ ಮುಂದುವರೆಯುತ್ತೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ನಮ್ಮೊಂದಿಗೆ ಗೆಳೆತನ ಇಟ್ಟುಕೊಂಡರೆ ಪಾಕಿಸ್ತಾನದ ಪ್ರಗತಿ, ಹಗೆತನವಿದ್ದರೆ ಇದೇ ದುಸ್ಥಿತಿ: ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ
Follow us
ನಯನಾ ರಾಜೀವ್
|

Updated on: Jul 08, 2024 | 10:07 AM

ಭಾರತ(India) ಹಾಗೂ ಪಾಕಿಸ್ತಾನ(Pakistan) ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನವು ಪ್ರತಿನಿತ್ಯ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದೆ, ಇದಕ್ಕೆ ಭಾರತವು ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಇದೇ ವೇಳೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲಿಸ್ಟ್​ ಕಾನ್ಫರೆನ್ಸ್​ ನಾಯಕ ಫಾರೂಕ್​ ಅಬ್ದುಲ್ಲಾ ಹೇಳಿಕೆಯು ಕೂಡ ಮುನ್ನೆಲೆಗೆ ಬಂದಿದೆ. ಪಾಕಿಸ್ತಾನದ ಬಗ್ಗೆ ಮಾತನಾಡಿದ ಅಬ್ದುಲ್ಲಾ ಸ್ನೇಹವನ್ನು ಉಳಿಸಿಕೊಂಡರೆ ಇಬ್ಬರೂ ಮುನ್ನಡೆಯುತ್ತಾರೆ ಎಂಬುದನ್ನು ನೆರೆಯ ದೇಶ ಅರ್ಥ ಮಾಡಿಕೊಳ್ಳಬೇಕು.

ಹಗೆತನವಿದ್ದರೆ ಈಗಿರುವ ಹೀನಾಯ ಸ್ಥಿತಿಯೇ ಮುಂದುವರೆಯಲಿದೆ ಎಂದರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಸಿಖ್ ಸಮುದಾಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಸಹೋದರತ್ವವನ್ನು ಕಾಪಾಡುವ ಕುರಿತು ಮಾತನಾಡಿದರು. ಸಹೋದರತ್ವದಿಂದ ಮುನ್ನಡೆಯುತ್ತೇವೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಮಾತನಾಡಿದ ಅವರು, ಭಾರತದೊಂದಿಗೆ ಸ್ನೇಹವನ್ನು ಉಳಿಸಿಕೊಂಡರೆ ಎರಡೂ ದೇಶಗಳು ಪ್ರಗತಿ ಹೊಂದುತ್ತವೆ ಎಂಬುದನ್ನು ನೆರೆಯ ದೇಶ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ಅವರು ದ್ವೇಷದಲ್ಲಿಯೇ ಉಳಿದರೆ ಪ್ರಗತಿ ದುರ್ಬಲವಾಗುತ್ತದೆ ಮತ್ತು ಇದು ಅವರ ದೌರ್ಬಲ್ಯ ಮತ್ತು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಸ್ಥಿತಿ ಏನೆಂದು ನೋಡಬಹುದು. ದೇಶ ಯಾವ ದಾರಿಯಲ್ಲಿ ಸಾಗುತ್ತಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ.

ಮತ್ತಷ್ಟು ಓದಿ: ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ, ಅಣು ಬಾಂಬ್ ಇಟ್ಕೊಂಡಿದೆ: ರಾಜನಾಥ್ ಸಿಂಗ್​ಗೆ ಟಾಂಟ್ ಕೊಟ್ಟ ಫಾರೂಕ್ ಅಬ್ದುಲ್ಲಾ

ಭಯೋತ್ಪಾದನೆ ತಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ ಎಂದು ಪಾಕಿಸ್ತಾನ ಯೋಚಿಸುವುದು ಬಹಳ ಮುಖ್ಯ ಎಂದು ಅಬ್ದುಲ್ಲಾ ಹೇಳಿದರು. ಭಯೋತ್ಪಾದನೆಯನ್ನು ಕೊನೆಗೊಳಿಸುವುದು ಬಹಳ ಮುಖ್ಯ. ನಾವು ಪ್ರೀತಿ ಮತ್ತು ವಾತ್ಸಲ್ಯದಿಂದ ಒಟ್ಟಿಗೆ ಬದುಕಲು ಬಯಸಿದರೆ ಪ್ರಗತಿ ನಮ್ಮದಾಗುತ್ತದೆ.

ಫಾರೂಕ್ ಅಬ್ದುಲ್ಲಾ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧದ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಹಲವು ಬಾರಿ ಭಾರತ-ಪಾಕಿಸ್ತಾನ ಸಂಬಂಧದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ