ಅಗರ್ತಲ: ತ್ರಿಪುರಾ ವಿಧಾನಸಭೆಯ ಅಧಿವೇಶನದ ವೇಳೆ ಭಾರತೀಯ ಜನತಾ ಪಕ್ಷದ (BJP) ಶಾಸಕ ಜದಬ್ ಲಾಲ್ ನಾಥ್ ಅವರು ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಸಿಕ್ಕಿಬಿದ್ದಿದ್ದಾರೆ. ಬಾಗ್‌ಬಾಸಾ ಕ್ಷೇತ್ರದ ಬಿಜೆಪಿ ಶಾಸಕ ಅಧಿವೇಶನ ನಡೆಯುತ್ತಿರುವಾಗ ಅವರ ಮೋಬೈಲ್ನಲ್ಲಿ ಪೋರ್ನ್ ವೀಡಿಯೊ ನೋಡುತ್ತಿರುವ ದೃಶ್ಯ ಪತ್ತೆಯಾಗಿದೆ. ಇದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಪ್ರತ್ಯೇಕವಲ್ಲ, ಇದರಲ್ಲಿ ನನ್ನ ತಪ್ಪು ಇಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2012 ರಲ್ಲಿ, ಕರ್ನಾಟಕದಲ್ಲೂ ಇಂತಹ ಘಟನೆ ನಡೆದಿತ್ತು, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಇಬ್ಬರು ವ್ಯಕ್ತಿಗಳು ಸದನ ನಡೆಯಬೇಕಾದರೆ ಮೊಬೈಲ್ನಲ್ಲಿ ಪೋರ್ನ್ ಕ್ಲಿಪ್ನ ವೀಕ್ಷಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ, ಸಚಿವರೊಬ್ಬರು ಶೈಕ್ಷಣಿಕ ಉದ್ದೇಶಗಳಿಗಾಗಿ ಮತ್ತು ರೇವ್ ಪಾರ್ಟಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವೀಡಿಯೊವನ್ನು ವೀಕ್ಷಿಸುತ್ತಿದ್ದೇವು ಎಂದು ಹೇಳಿದರು. 2012ರ ಘಟನೆಯ ಕ್ಲಿಪ್‌ಗಳನ್ನು ವೀಕ್ಷಿಸುತ್ತಿದ್ದ ಸಹಕಾರ ಸಚಿವ ಲಕ್ಷ್ಮಣ ಸವದಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿಸಿ ಪಾಟೀಲ್ ಅವರೊಂದಿಗೆ ಹಂಚಿಕೊಂಡಿದ್ದರು.
So, BJP MLAs keep the legacy of watching porn during the Assembly sessions!
Now, BJP MLA from Bagbassa, north tripura Jadab Lal Nath was caught watching porn during the Tripura Assembly session.
Shame!#ModiHaiTohMumkinHai#SanskariRSS #BJPFailsIndia pic.twitter.com/iVyoF6fNj5— Mayukh Biswas (@MayukhDuke) March 30, 2023
ಇದನ್ನೂ ಓದಿ:Viral News: 10 ವರ್ಷದ ಬಾಲಕನಿಗೆ ದಂತ ಶಸ್ತ್ರಚಿಕಿತ್ಸೆ ಮಾಡಿದ ತ್ರಿಪುರಾ ಸಿಎಂ
ಈ ವಿಚಾರವಾಗಿ ಇಬ್ಬರು ಕೂಡ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು. 2019 ರಲ್ಲಿ, ಆಗಿನ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಲಕ್ಷ್ಮಣ್ ಸವದಿ ಅವರನ್ನು ತಮ್ಮ ಮೂವರು ಉಪ ಮುಖ್ಯಮಂತ್ರಿಗಳಲ್ಲಿ ಒಬ್ಬರನ್ನಾಗಿ ನೇಮಿಸಿದರು. ಲಕ್ಷ್ಮಣ್ ಸವದಿ ಅವರ ನೇಮಕವನ್ನು ವಿರೋಧಿಸಿ ಕರ್ನಾಟಕ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.
ಇತ್ತೀಚಿಗೆ, ಬಿಹಾರದ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣವು ಸುಮಾರು ಮೂರು ನಿಮಿಷಗಳ ಕಾಲ ಪ್ಲಾಟ್‌ಫಾರ್ಮ್‌ನ ಟಿವಿ ಪರದೆಯ ಮೇಲೆ ಪ್ರದರ್ಶಿಸಲಾದ ಅಶ್ಲೀಲ ವಿಡಿಯೋ ಭಾರಿ ಸದ್ದು ಮಾಡಿತ್ತು.
Published On - 5:28 pm, Thu, 30 March 23