ಭೋಪಾಲ್: ಮಧ್ಯಪ್ರದೇಶದ (Madhya Pradesh) ಬುಲ್ ಫಾರ್ಮ್‌ನಲ್ಲಿರುವ ಸಿಸಿಟಿವಿ ಕ್ಯಾಮೆರದಲ್ಲಿ ಎಲ್ಲರನ್ನೂ ಬೆರಗುಗೊಳಿಸುವ ದೃಶ್ಯವೊಂದು ಕಂಡು ಬಂದಿದೆ, ಹಸುಗಳ ಹಿಂಡೊಂದು ಹುಲಿಯನ್ನು ಹೆದರಿಸುತ್ತಿರುವ ದೃಶ್ಯ ಎಲ್ಲರನ್ನೂ ಒಂದು ಬಾರಿ ಅಚ್ಚರಿಗೊಳಿಸಿದೆ. ಭೋಪಾಲ್‌ನ ಕೆರ್ವಾದಲ್ಲಿನ ಜಮೀನಿನಲ್ಲಿ ಭಾನುವಾರ ತಡರಾತ್ರಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಹಸುವಿನ ಮೇಲೆ ಹುಲಿ ದಾಳಿ ಮಾಡುತ್ತಿರುವುದು ಕಂಡು ಅಲ್ಲಯೇ ಇದ್ದ ಹಸುಗಳ ಹಿಂಡು ಹುಲಿಯ ಬಳಿ ಬಂದಿದೆ. ಇದನ್ನೂ ಕಂಡು ತಾನು ಹಿಡಿದಿರುವ ಹಸುವನ್ನು ಬಿಟ್ಟು ಓಡಿ ಹೋಗಲು ಮುಂದಾಗಿದೆ. ನಂತರ ಹುಲಿ ಸುಮಾರು ಮೂರು ಗಂಟೆಗಳ ಕಾಲ ಅಲ್ಲಿ ಕಾದು ಕುಳಿತಿತ್ತು. ಆದರೆ ಹಸುವಿನ ಹಿಂಡು ಗಾಯಗೊಂಡ ಹಸುವಿನ ಸುತ್ತಲೂ ಕಾವಲು ನಿಂತ ಕಾರಣ ಹುಲಿಗೆ ಮತ್ತೆ ದಾಳಿ ಮಾಡಲು ಸಾಧ್ಯವಾಗಿಲ್ಲ.
ಗಾಯಗೊಂಡಿರುವ ಹಸು ಚಿಕಿತ್ಸೆ ಪಡೆಯುತ್ತಿದ್ದು, ಅದರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. 76 ಎಕರೆ ಜಮೀನಿನಲ್ಲಿ 50 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಕಳೆದ ಆರು ತಿಂಗಳ ಅವಧಿಯಲ್ಲಿ ಬುಲ್ ಫಾರ್ಮ್‌ಗೆ ಹುಲಿ ನುಗ್ಗಿದ ಐದನೇ ಘಟನೆ ಇದಾಗಿದೆ. ಜಮೀನಿನ ಹಿಂದೆ ಇರುವ 14 ಅಡಿ ಎತ್ತರದ ಬೇಲಿ ಹಾಳಾಗಿರುವುದರಿಂದ ಈ ಪ್ರದೇಶದಲ್ಲಿ ಹುಲಿಗಳ ಓಡಾಟ ಹೆಚ್ಚಾಗಿದೆ ಮತ್ತು ತುರ್ತು ದುರಸ್ತಿ ಅಗತ್ಯವಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ