ಪೈಸಾ ಟು ಪೈಸಾ ಲೆಕ್ಕಾಚಾರ: ಈತ ಪಂಜಾಬ್‌ನ ಧೀರೂಭಾಯಿ ಅಂಬಾನಿ! ದಿನಕ್ಕೆ 130 ರೂ ಗಳಿಸುತ್ತಿದ್ದ ರಾಜೀಂದರ್ ಗುಪ್ತಾ ಇಂದು 17,000 ಕೋಟಿ ರೂ ಸಾಮ್ರಾಜ್ಯ ಕಟ್ಟಿದ್ದಾರೆ!

Sucess story of Punjab Rajinder Gupta: ಆರಂಭದಲ್ಲಿ ದಿನಕ್ಕೆ 130 ರೂ. ಗಳಿಸುತ್ತಿದ್ದು, ಕಾಲಾಂತರದಲ್ಲಿ 17,000 ಕೋಟಿ ರೂಪಾಯಿ ವ್ಯಾಪಾರದ ಸಾಮ್ರಾಜ್ಯ ನಿರ್ಮಿಸಿರುವ ಪಂಜಾಬ್‌ನ ಧೀರೂಭಾಯಿ ಅಂಬಾನಿ ಎಂದೇ ಹೆಸರಾದ ರಾಜಿಂದರ್ ಗುಪ್ತಾ ಅವರ ಪೈಸಾ ಟು ಪೈಸಾ ಲೆಕ್ಕಾಚಾರ ಹೀಗಿದೆ:

ಪೈಸಾ ಟು ಪೈಸಾ ಲೆಕ್ಕಾಚಾರ: ಈತ ಪಂಜಾಬ್‌ನ ಧೀರೂಭಾಯಿ ಅಂಬಾನಿ! ದಿನಕ್ಕೆ 130 ರೂ ಗಳಿಸುತ್ತಿದ್ದ ರಾಜೀಂದರ್ ಗುಪ್ತಾ ಇಂದು 17,000 ಕೋಟಿ ರೂ ಸಾಮ್ರಾಜ್ಯ ಕಟ್ಟಿದ್ದಾರೆ!
ಪೈಸಾ ಟು ಪೈಸಾ ಲೆಕ್ಕಾಚಾರ: ಈತ ಪಂಜಾಬ್‌ನ ಧೀರೂಭಾಯಿ ಅಂಬಾನಿ!
Follow us
ಸಾಧು ಶ್ರೀನಾಥ್​
|

Updated on: Jun 20, 2023 | 12:23 PM

Success story: ಆರಂಭದಲ್ಲಿ ದಿನಕ್ಕೆ 130 ಗಳಿಸುತ್ತಿದ್ದು, ಕಾಲಾಂತರದಲ್ಲಿ 17,000 ಕೋಟಿ ರೂಪಾಯಿ ವ್ಯಾಪಾರದ ಸಾಮ್ರಾಜ್ಯ ನಿರ್ಮಿಸಿರುವ ಪಂಜಾಬ್‌ನ ಧೀರೂಭಾಯಿ ಅಂಬಾನಿ ಎಂದೇ ಹೆಸರಾದ ರಾಜೀಂದರ್ ಗುಪ್ತಾ ಅವರ (Punjab Rajinder Gupta) ಪೈಸಾ ಟು ಪೈಸಾ ಲೆಕ್ಕಾಚಾರ ಇದು. 2007 ರಲ್ಲಿ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ರಾಜೀಂದರ್ ಅವರ ಅಸಾಧಾರಣ ಕೆಲಸಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಪದ್ಮಶ್ರೀ ನೀಡಲಾಯಿತು. ಇದಲ್ಲದೆ, ಗುಪ್ತಾ ಅವರು ಟ್ರೈಡೆಂಟ್ ಲಿಮಿಟೆಡ್‌ (Trident Limited) ಕಾರ್ಪೊರೇಟ್ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಮತ್ತು ಟ್ರೈಡೆಂಟ್ ಗ್ರೂಪ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇದರ ಜೊತೆಗೆ, ಅವರು ಚಂಡೀಗಢದ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಐಸಿಸಿಐ) ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಹಿಮಾಚಲ ಪ್ರದೇಶದ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇದು ಅಂತ್ಯವಲ್ಲ, ಗುಪ್ತಾ ಅವರು ಪಂಜಾಬ್ ಬ್ಯೂರೋ ಆಫ್ ಇನ್ವೆಸ್ಟ್‌ಮೆಂಟ್ ಪ್ರಮೋಷನ್‌ನ ಆಡಳಿತ ಮಂಡಳಿಯಲ್ಲಿ ವ್ಯಾಪಾರ, ಉದ್ಯಮ ಮತ್ತು ವಾಣಿಜ್ಯದ ಪ್ರತಿನಿಧಿಯೂ ಆಗಿದ್ದರು.

ರಾಜೀಂದರ್ ಆರಂಭಿಕ ಪ್ರಯಾಣ ಹೀಗಿತ್ತು: 1980 ರ ದಶಕದಲ್ಲಿ ಗುಪ್ತಾ ಅವರು ಸಿಮೆಂಟ್ ಪೈಪ್‌ಗಳು ಮತ್ತು ಕ್ಯಾಂಡಲ್‌ಗಳನ್ನು ಉತ್ಪಾದಿಸುವ ಸಣ್ಣಪುಟ್ಟ ಕೆಲಸ ಪ್ರಾರಂಭಿಸಿದರು. ಮುಂದೆ ಮತ್ತಷ್ಟು ಹೆಚ್ಚಿನ ಅವಕಾಶಗಳನ್ನು ಪಡೆಯಲು ನಿರ್ಧರಿಸಿದರು. 1985 ರಲ್ಲಿ ಅಭಿಷೇಕ್ ಇಂಡಸ್ಟ್ರೀಸ್ ಅನ್ನು ಸ್ಥಾಪಿಸಿದರು. ಇದರ ನಂತರ ಅವರು ಜಂಟಿಯಾಗಿ ನೂಲು ಗಿರಣಿ ಸ್ಥಾಪಿಸಿದರು. 1991 ರಲ್ಲಿ ಅದು ಭಾರೀ ಫಲ ನೀಡಲು ಆರಂಭಿಸಿತು.

ಇದರ ನಂತರ, ಗುಪ್ತಾ ಅವರು ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲಿಯ ತಮ್ಮ ಸಂಸ್ಥೆಯ ವಿಭಾಗಗಳಿಂದ ತಮ್ಮ ವ್ಯವಹಾರವನ್ನು ಜವಳಿ, ಕಾಗದ ಮತ್ತು ರಾಸಾಯನಿಕ ಕ್ಷೇತ್ರಗಳತ್ತ ಹೊರಳಿ, ಜಾಗತಿಕ ನಾಯಕರಾಗಿ ಪರಿವರ್ತನೆಗೊಂಡರು. ಈಗ ಗುಪ್ತಾ ಅವರ ಟ್ರೈಡೆಂಟ್ ಗ್ರೂಪ್‌ನ ಪ್ರತಿಷ್ಠಿತ ಗ್ರಾಹಕರು ಯಾ್ರೆಂದರೆ ವಾಲ್‌ಮಾರ್ಟ್, JCPenney, ಮತ್ತು ಐಷಾರಾಮಿ ಮತ್ತು ಲಿನಿನ್!

ಆದಾಗ್ಯೂ, ಕುಟುಂಬ ಕಾಳಜಿ ಮತ್ತು ಆರೋಗ್ಯ ಕಾಳಜಿಗಳನ್ನು ಮುಂದಿಟ್ಟುಕೊಂಡು 64 ವರ್ಷದ ಗುಪ್ತಾ ಅವರು 2022 ರಲ್ಲಿ ಟ್ರೈಡೆಂಟ್‌ನ ನಿರ್ದೇಶಕರ ಮಂಡಳಿಯನ್ನು ತೊರೆದರು. ಆದರೂ ಲುಧಿಯಾನದಲ್ಲಿ ಅವರು ತಮ್ಮ ಪ್ರಧಾನ ಕಚೇರಿಯಲ್ಲಿ ‘ಗೌರವಾನ್ವಿತ ಅಧ್ಯಕ್ಷ’ ಸ್ಥಾನವನ್ನು ಅಲಂಕರಿಸಿದ್ದಾರೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ