Nandan Nilekani: ತಾನು ಓದಿದ ಶಿಕ್ಷಣ ಸಂಸ್ಥೆಗೆ 400 ಕೋಟಿ ರೂ ದೇಣಿಗೆ ಕೊಟ್ಟ ನಂದನ್ ನಿಲೇಕಣಿ

IIT Bombay Receives Rs 315 Cr Donation From Nilekani: ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ತಾವು ಎಂಜಿನಿಯರಿಂಗ್ ಓದಿದ ಐಐಟಿ ಬಾಂಬೆಗೆ 315 ಕೋಟಿ ರೂ ದೇಣಿಗೆ ಕೊಟ್ಟಿದ್ದಾರೆ. ಈ ಹಿಂದೆ ಕೊಟ್ಟಿದ್ದ 85 ಕೋಟಿ ರೂ ಸೇರಿದಂತೆ ಒಟ್ಟು ಅವರು 400 ಕೋಟಿ ರೂ ಕೊಟ್ಟಂತಾಗಿದೆ.

Nandan Nilekani: ತಾನು ಓದಿದ ಶಿಕ್ಷಣ ಸಂಸ್ಥೆಗೆ 400 ಕೋಟಿ ರೂ ದೇಣಿಗೆ ಕೊಟ್ಟ ನಂದನ್ ನಿಲೇಕಣಿ
ನಂದನ್ ನಿಲೇಕಣಿ
Follow us
|

Updated on: Jun 20, 2023 | 2:58 PM

ಬೆಂಗಳೂರು: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಹಲವು ಜನರು ತಾವು ಓದಿದ ಶಾಲೆ ಅಥವಾ ಕಾಲೇಜುಗಳಿಗೆ ಉದಾರವಾಗಿ ಧನಸಹಾಯ ಮಾಡುವುದುಂಟು. ಆಧಾರ್ ಯೋಜನೆಯ ರೂವಾರಿ ಹಾಗೂ ಇನ್ಫೋಸಿಸ್ ಮಾಜಿ ಸಿಇಒ ನಂದನ್ ನಿಲೇಕಣಿ (Nandan Nilekani) ತಾವು ಓದಿದ ಶಿಕ್ಷಣ ಸಂಸ್ಥೆಗೆ ಬಹಳ ಉದಾರವಾಗಿ ದಾನ ಮಾಡಿದ್ದಾರೆ. ನಂದನ್ ನಿಲೇಕಣಿ ಅವರು ಐಐಟಿ ಬಾಂಬೆ ಸಂಸ್ಥೆಗೆ (IIT Bombay) 315 ಕೋಟಿ ರೂ ದೇಣಿಗೆ ಕೊಟ್ಟಿದ್ದಾರೆ. ಇದರೊಂದಿಗೆ ಆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ನಿಲೇಕಣಿ ಕೊಟ್ಟಿರುವ ದೇಣಿಗೆ 400 ಕೋಟಿ ಆದಂತಾಗುತ್ತದೆ. ಈ ಹಿಂದೆ ಅವರು ಐಐಟಿ ಬಾಂಬೆಗೆ ವಿವಿಧ ದೇಣಿಗೆಗಳ ಮೂಲಕ 85 ಕೋಟಿ ರೂ ನೀಡಿದ್ದರು.

‘ಐಐಟಿ ಬಾಂಬೆ ನನ್ನ ಜೀವನದಲ್ಲಿ ಮುಖ್ಯಭಾಗವಾಗಿದೆ. ನನ್ನ ಬೆಳವಣಿಗೆಯ ದಿನಗಳು ಅಲ್ಲಿಯೇ ರೂಪುಗೊಂಡಿದ್ದು. ನನ್ನ ವೃತ್ತಿಜೀವನದ ಪ್ರಯಾಣಕ್ಕೆ ಅಡಿಗಲ್ಲು ಅಲ್ಲಿಯೇ ಹಾಕಿದ್ದು. ಈ ದೇಣಿಗೆ ಹಣಕಾಸು ಕೊಡುಗೆಗಿಂತಲೂ ಮಿಗಿಲಾದುದು. ನನಗೆ ಇಷ್ಟೊಂದು ಕೊಟ್ಟಿರುವ ಈ ಸ್ಥಳಕ್ಕೆ ನನ್ನೊಂದು ಕೃತಜ್ಞತೆಯ ಅರ್ಪಣೆ. ನಾಳೆಯ ದಿನಗಳನ್ನು ರೂಪಿಸುವ ಇವತ್ತಿನ ವಿದ್ಯಾರ್ಥಿಗಳಿಗೆ ನನ್ನ ಬದ್ಧತೆ ಇದು’ ಎಂದು ನಂದನ್ ನಿಲೇಕಣಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಐಐಟಿ ಬಾಂಬೆ ಸಂಸ್ಥೆಯ ಡೈರೆಕ್ಟರ್ ಶುಭಾಷಿಷ್ ಚೌಧುರಿ ಮತ್ತು ನಂದನ್ ನಿಲೇಕಣಿ ಮಧ್ಯೆ ಈ ಸಂಬಂಧ ಎಂಒಯು ಒಪ್ಪಂದವಾಗಿದೆ.

ಇದನ್ನೂ ಓದಿTax Evasion: ಪ್ಯಾನ್, ಆಧಾರ್ ಕದ್ದು ಶೆಲ್ ಕಂಪನಿ ಮೂಲಕ ತೆರಿಗೆ ವಂಚಿಸುತ್ತಿದ್ದ ಜಾಲಗಳು ಬೆಳಕಿಗೆ; 30,000 ಕೋಟಿ ರೂ ಕರ್ಮಕಾಂಡ ಬಯಲು

ನಂದನ್ ನಿಲೇಕಣಿ ನೀಡಿದ ಈ ದೇಣಿಗೆಯು ಐಐಟಿ ಬಾಂಬೆಯಲ್ಲಿ ವಿಶ್ವದರ್ಜೆ ಸೌಕರ್ಯ ತಯಾರಿಕೆಯಿಂದ ಹಿಡಿದು ಸಂಶೋಧನೆವರೆಗೂ ಸಾಕಷ್ಟು ಕಾರ್ಯಗಳಿಗೆ ಅನುಕೂಲವಾಗಲಿದೆ. ಐಐಟಿ ಬಾಂಬೆ ಜಾಗತಿಕವಾಗಿ ಶ್ರೇಷ್ಠ ಶಿಕ್ಷಣ ಸಂಸ್ಥೆಯಾಗಿ ಬೆಳವಣಿಗೆ ಹೊಂದಲು ಮತ್ತು ಭಾರತದ ಅಗ್ರಮಾನ್ಯ ಐಐಟಿ ಸಂಸ್ಥೆಯಾಗಿ ಬೆಳೆಯಲು ಇದು ಪುಷ್ಟಿ ಕೊಡುವ ನಿರೀಕ್ಷೆ ಇದೆ.

ಧಾರವಾಡದ ಹುಡುಗ ನಿಲೇಕಣಿ

ಕರ್ನಾಟಕದ ಶಿರಸಿಯಲ್ಲಿ ಹುಟ್ಟಿದ ನಂದನ್ ನಿಲೇಕಣಿ ಧಾರವಾಡದಲ್ಲಿ ಓದಿದ್ದರು. ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಮಾಡಿದ್ದರು. ಅದಾದ ಬಳಿಕ ಮುಂಬೈನಲ್ಲಿ ಪತ್ನಿ ಕಂಪ್ಯೂಟರ್ ಸಿಸ್ಟಮ್ಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡುವಾಗ ಎನ್ ಆರ್ ನಾರಾಯಣಮೂರ್ತಿ ಮೊದಲಾದವರ ಪರಿಚಯ ಆಗುತ್ತದೆ. ಆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಂದನ್ ನಿಲೇಕಣಿ, ನಾರಾಯಣಮೂರ್ತಿ ಹಾಗೂ ನಾಲ್ವರು ಇತರರು ಕೆಲಸ ಬಿಟ್ಟು 1981ರಲ್ಲಿ ಇನ್ಫೋಸಿಸ್ ಸಂಸ್ಥೆ ಸ್ಥಾಪಿಸುತ್ತಾರೆ.

ಇದನ್ನೂ ಓದಿಪೈಸಾ ಟು ಪೈಸಾ ಲೆಕ್ಕಾಚಾರ: ಈತ ಪಂಜಾಬ್‌ನ ಧೀರೂಭಾಯಿ ಅಂಬಾನಿ! ದಿನಕ್ಕೆ 130 ರೂ ಗಳಿಸುತ್ತಿದ್ದ ರಾಜೀಂದರ್ ಗುಪ್ತಾ ಇಂದು 17,000 ಕೋಟಿ ರೂ ಸಾಮ್ರಾಜ್ಯ ಕಟ್ಟಿದ್ದಾರೆ!

ನಂದನ್ ನಿಲೇಕಣಿ 2002ರಿಂದ 2007ರವರೆಗೆ ಇನ್ಫೋಸಿಸ್ ಸಿಇಒ ಆದರು. ಆ ಬಳಿಕ ಅವರು 2009ರಲ್ಲಿ ಆಧಾರ್ ಯೋಜನೆ ರೂಪಿಸಲು ಸ್ಥಾಪನೆಯಾದ ಯುಡಿಎಐ ಸಂಸ್ಥೆಯ ಛೇರ್ಮನ್ ಆದರು. 2014ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್​ನಲ್ಲಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಅನಂತಕುಮಾರ್ ಎದುರು ಸೋತರು.

ಅದಾದ ಬಳಿಕ ನಂದನ್ ನಿಲೇಕಣಿ ರಾಜಕೀಯದಿಂದ ದೂರ ಉಳಿದಿದ್ದಾರೆ. ಇದೀಗ ಅವರು ಏಕ್​ಸ್ಟೆಪ್ ಎಂಬ ಸಾಕ್ಷರತಾ ಸೇವೆಯ ಕಂಪನಿಯ ಛೇರ್ಮನ್ ಆಗಿದ್ದಾರೆ. ವಿವಿಧ ಆಟಗಳ ಮೂಲಕ ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು ಇವರ ಪ್ಲಾಟ್​ಫಾರ್ಮ್​ನ ಗುರಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್