AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pixel In India: ಆ್ಯಪಲ್ ಆಯ್ತು, ಈಗ ಗೂಗಲ್ ಸರದಿ; ಚೀನಾ ಬಿಟ್ಟು ಭಾರತದಲ್ಲಿ ಪಿಕ್ಸೆಲ್ ತಯಾರಿಕೆಗೆ ಆಲೋಚನೆ?

Google Looking For Pixel Manufacturers In India: ಐಫೋನ್​ನಂತೆ ಗೂಗಲ್ ಪಿಕ್ಸೆಲ್ ಫೋನ್​ಗಳನ್ನೂ ಭಾರತದಲ್ಲಿ ತಯಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಲಾವಾ ಇತ್ಯಾದಿ ಮೂರು ಸಂಸ್ಥೆಗಳ ಜೊತೆ ಗೂಗಲ್ ಮಾತುಕತೆ ನಡೆಸುತ್ತಿರುವುದು ತಿಳಿದುಬಂದಿದೆ.

Pixel In India: ಆ್ಯಪಲ್ ಆಯ್ತು, ಈಗ ಗೂಗಲ್ ಸರದಿ; ಚೀನಾ ಬಿಟ್ಟು ಭಾರತದಲ್ಲಿ ಪಿಕ್ಸೆಲ್ ತಯಾರಿಕೆಗೆ ಆಲೋಚನೆ?
ಗೂಗಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 20, 2023 | 4:39 PM

Share

ನವದೆಹಲಿ: ಆ್ಯಪಲ್ ಕಂಪನಿ ತನ್ನ ಐಫೋನ್ ತಯಾರಿಕೆಯನ್ನು (iPhone Manufacturing) ಚೀನಾದಿಂದ ಹಂತ ಹಂತವಾಗಿ ಭಾರತಕ್ಕೆ ವರ್ಗಾಯಿಸುತ್ತಿರುವುದು ಗೊತ್ತಿರಬಹುದು. ಈಗ ಗೂಗಲ್ ಕಂಪನಿಯೂ ಕೂಡ ತನ್ನ ಪಿಕ್ಸೆಲ್ ಫೋನ್​ಗಳನ್ನು ಚೀನಾದಿಂದ ಹೊರಗೆ ತಯಾರಿಸಲು ಆಲೋಚನೆ ನಡೆಸುತ್ತಿರುವ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ತನ್ನ ಪಿಕ್ಸೆಲ್ ಬ್ರ್ಯಾಂಡ್​ನ ಸ್ಮಾರ್ಟ್​ಫೋನ್​ಗಳನ್ನು (Google Pixel) ತಯಾರಿಸಲು ಭಾರತದ ವಿವಿಧ ಕಂಪನಿಗಳನ್ನು ಗೂಗಲ್ ಸಂಪರ್ಕಿಸುತ್ತಿದೆ. ಲಾವಾ ಇಂಟರ್ನ್ಯಾಷನಲ್ ಲಿ, ಡಿಕ್ಸಾನ್ ಟೆಕ್ನಾಲಜೀಸ್ ಇಂಡಿಯಾ ಹಾಗೂ ಭಾರತ್ ಎಫ್​ಐಎಚ್ ಕಂಪನಿಗಳ ಜೊತೆ ಗೂಗಲ್ ಆರಂಭಿಕ ಮಾತುಕತೆಯ ಹಂತದಲ್ಲಿದೆ ಎಂದು ಮನಿಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ. ಭಾರತ್ ಎಫ್​ಐಎಚ್ ಸಂಸ್ಥೆಯು ಐಫೋನ್ ತಯಾರಕ ಫಾಕ್ಸ್​ಕಾನ್ ಟೆಕ್ನಾಲಜಿ ಗ್ರೂಪ್​ನ ಭಾರತೀಯ ಅಂಗಸಂಸ್ಥೆಯಾಗಿದೆ.

ಈ ತಿಂಗಳ ಆರಂಭದಲ್ಲಿ ಗೂಗಲ್​ನ ಉನ್ನತ ಸ್ತರದ ಅಧಿಕಾರಿಗಳಾದ ಆನಾ ಕೊರಾಲ್ಸ್, ಮ್ಯಾಗೀ ವೇ ಅವರು ಭಾರತಕ್ಕೆ ಭೇಟಿ ನೀಡಿ ಈ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವಂತಹ ಸುದ್ದಿ ಇದೆ.

ಸದ್ಯ ಗೂಗಲ್​ನ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳು ಹೆಚ್ಚಾಗಿ ಚೀನಾ ಮತ್ತು ವಿಯೆಟ್ನಾಂಗಳಲ್ಲಿ ತಯಾರಾಗುತ್ತಿವೆ. ಅಮೆರಿಕ ಮತ್ತು ಚೀನಾ ಮಧ್ಯೆ ಸಂಬಂಧ ದಿನೇ ದಿನೇ ಸೂಕ್ಷ್ಮಗೊಳ್ಳುತ್ತಿರುವುದರಿಂದ ಚೀನಾ ಮೇಲೆ ಅತಿಯಾಗಿ ಅವಲಂಬನೆ ಆಗುವುದನ್ನು ತಪ್ಪಿಸಲು ವಿವಿಧ ಅಮೆರಿಕನ್ ಕಂಪನಿಗಳು ತಮ್ಮ ಉತ್ಪನ್ನಗಳ ತಯಾರಿಕೆಯನ್ನು ಚೀನಾದಿಂದ ಹೊರಗೆ ವರ್ಗಾಯಿಸುವ ಪ್ರಯತ್ನದಲ್ಲಿವೆ. ಆ್ಯಪಲ್​ನ ಶೇ. 7ರಷ್ಟು ಐಫೋನ್​ಗಳು ಈ ಭಾರತದಲ್ಲಿ ತಯಾರಾಗುತ್ತಿವೆ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಶೇ. 25ರಷ್ಟು ಐಫೋನ್​ಗಳನ್ನು ತಯಾರಿಸುವುದು ಆ್ಯಪಲ್​ನ ಗುರಿಯಾಗಿದೆ. ಪೆಗಾಟ್ರಾನ್, ಫಾಕ್ಸ್​ಕಾನ್ ಕಂಪನಿಗಳು ಐಫೋನ್ ತಯಾರಿಸಲು ಆ್ಯಪಲ್​ನಿಂದ ಗುತ್ತಿಗೆ ಪಡೆದಿವೆ.

ಇದನ್ನೂ ಓದಿTax Evasion: ಪ್ಯಾನ್, ಆಧಾರ್ ಕದ್ದು ಶೆಲ್ ಕಂಪನಿ ಮೂಲಕ ತೆರಿಗೆ ವಂಚಿಸುತ್ತಿದ್ದ ಜಾಲಗಳು ಬೆಳಕಿಗೆ; 30,000 ಕೋಟಿ ರೂ ಕರ್ಮಕಾಂಡ ಬಯಲು

ಈಗ ಆ್ಯಪಲ್ ಹಾದಿಯಲ್ಲಿ ಗೂಗಲ್ ಕೂಡ ಸಾಗಲು ಯೋಜಿಸುತ್ತಿದೆ. ಕಳೆದ ತಿಂಗಳು ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಮೆರಿಕದ ಕ್ಯಾಲಿಫೋರ್ನಿಯಅದಲ್ಲಿರುವ ಗೂಗಲ್ ಕಚೇರಿಗೆ ಹೋಗಿ ಸಿಇಒ ಸಿಂದರ್ ಪಿಚೈ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ವಲಯ ಬೆಳೆಯುತ್ತಿರುವ ಬಗ್ಗೆ ಗೂಗಲ್ ಸಿಇಒಗೆ ಸಚಿವರು ಮನದಟ್ಟು ಮಾಡಲು ಯತ್ನಿಸಿದರೆನ್ನಲಾಗಿದೆ.

ಪಿಕ್ಸೆಲ್ ಸ್ಮಾರ್ಟ್​ಫೋನ್ ಗೂಗಲ್​ನ ಇದೂವರೆಗಿನ ಅತ್ಯುತ್ತಮ ಫೋನ್ ಎನಿಸಿದೆ. 2022ರಲ್ಲಿ 90 ಲಕ್ಷದಷ್ಟು ಪಿಕ್ಸೆಲ್ ಫೋನ್​ಗಳು ತಯಾರಾಗಿದ್ದವು. ಹೆಚ್ಚಿನವು ಚೀನಾ ಮತ್ತು ವಿಯೆಟ್ನಾಂಗಳಲ್ಲಿ ತಯಾರಾಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ