Video Viral: 7 ಮಕ್ಕಳೊಂದಿಗೆ ಸ್ಕೂಟರ್ ಸವಾರಿ ಮಾಡಿದ ವ್ಯಕ್ತಿಗೆ, ಟ್ವಿಟರ್​​ನಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

|

Updated on: Jun 26, 2023 | 5:10 PM

ಇಲ್ಲೊಬ್ಬ ವ್ಯಕ್ತಿ ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿರುವ ವೀಡಿಯೊ ಎಲ್ಲ ಕಡೆ ವೈರಲ್​​ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಒಂದು ಸ್ಕೂಟರ್​​​​ನಲ್ಲಿ 7 ಜನರು ಕೂರಿಸಿಕೊಂಡು ಹೋಗಿರುವುದು, ರಸ್ತೆ ಸುರಕ್ಷತಾ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ

Video Viral: 7 ಮಕ್ಕಳೊಂದಿಗೆ ಸ್ಕೂಟರ್ ಸವಾರಿ ಮಾಡಿದ ವ್ಯಕ್ತಿಗೆ, ಟ್ವಿಟರ್​​ನಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು
ವೈರಲ್​ ವೀಡಿಯೊ
Follow us on

ಕಾನೂನುಗಳನ್ನು ಮಾಡುವುದು ನಮ್ಮ ರಕ್ಷಣೆಗೆ ಹೊರತು, ಅದು ನಮಗೆ ಹಿಂಸೆ ನೀಡಲು ಅಲ್ಲ. ಅಂತಹಃ ಕೆಟ್ಟ ಕಾನೂನುಗಳನ್ನು ನಾವು ಒಪ್ಪುವುದಿಲ್ಲ. ಆದರೆ ಅದು ನಮಗೆ ರಕ್ಷಣೆ ನೀಡುತ್ತದೆ. ನಮಗೆ ಅದು ಒಳ್ಳೆಯದ್ದನ್ನು ಮಾಡುತ್ತದೆ ಎಂದಾಗ ಅದನ್ನು ನಾವು ಪಾಲಿಸುವುದು ನಮ್ಮ ಕರ್ತವ್ಯ, ಜತೆಗೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಎಲ್ಲರೂ ಈ ದೇಶದ ಕಾನೂನುಗಳನ್ನು ಪಾಲಿಸಲೇಬೇಕು. ಆದರೆ ಇಲ್ಲೊಬ್ಬ ವ್ಯಕ್ತಿ ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿರುವ ವೀಡಿಯೊ ಎಲ್ಲ ಕಡೆ ವೈರಲ್​​ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಒಂದು ಸ್ಕೂಟರ್​​​​ನಲ್ಲಿ 7 ಜನರು ಕೂರಿಸಿಕೊಂಡು ಹೋಗಿರುವುದು, ರಸ್ತೆ ಸುರಕ್ಷತಾ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಮುಂಬೈನಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿ ವ್ಯಕ್ತಿಯೊಬ್ಬರು ಏಳು ಮಕ್ಕಳನ್ನು ತನ್ನ ಸ್ಕೂಟರ್‌ನಲ್ಲಿ ಸಾಗಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ವೀಡಿಯೊವನ್ನು ಟ್ವಿಟರ್​​ನಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ತನ್ನ ಸ್ಕೂಟರ್‌ನಲ್ಲಿ ಇಬ್ಬರು ಮಕ್ಕಳನ್ನು ಸ್ಕೂಟರ್​​ನ ಮುಂಭಾಗದಲ್ಲಿ ಇತರ ಮೂವರು ಮಕ್ಕಳು ಸೀಟಿನಲ್ಲಿ ಕುಳಿತಿದ್ದಾರೆ ಮತ್ತು ಇಬ್ಬರು ಹಿಂದೆ ನಿಂತಿದ್ದಾರೆ.

ಈ ವೀಡಿಯೊ ಹಂಚಿಕೊಂಡಿರುವುದ ಜತೆಗೆ ಈ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. ಇದು ಬೇಜವಾಬ್ದಾರಿತನ ಮತ್ತು ಹುಚ್ಚುತನ, ಏಳು ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಿರುವ ಈ ವ್ಯಕ್ತಿಗೆ ಬುದ್ದಿ ಇಲ್ಲವೆ. ಆ ಏಳು ಪುಟ್ಟ ಮಕ್ಕಳ ಪ್ರಾಣಕ್ಕೆ ಅಪಾಯ ತಂದಿರುವ ಅವರನ್ನು ಕೂಡಲೇ ಬಂಧಿಸಬೇಕು. ಈ ಮಕ್ಕಳ ಪೋಷಕರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ವೀಡಿಯೊಗೆ ಟ್ವಿಟರ್​​​​ನಲ್ಲಿ ಪ್ರತಿಕ್ರಿಯಿಸಿದ ಮುಂಬೈ ಟ್ರಾಫಿಕ್ ಪೊಲೀಸರು ಮಕ್ಕಳು ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡಿದ್ದಕ್ಕಾಗಿ ಈ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 308 (ಅಪರಾಧೀಯ ನರಹತ್ಯೆ ಮಾಡುವ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Video Viral: ಕೈ ಹಿಡಿದು ಎಳೆದ ರೋಡ್ ರೋಮಿಯೋಗೆ ಬಿತ್ತು ಗೂಸಾ, ಈ ಯುವತಿಯರ ಧೈರ್ಯಕ್ಕೆ ಮೆಚ್ಚಲೇಬೇಕು ಎಂದ ನೆಟ್ಟಿಗರು

ಇಲ್ಲಿ ನಿಯಮದ ಉಲ್ಲಂಘನೆ ಆಗಿರುವುದು ನಿಜ, ಇದು ಸರಿಯಾದ ಸವಾರಿ ಅಲ್ಲ. ಇಂತಹ ಕೃತ್ಯ ಮಕ್ಕಳಿಗೂ, ಸಾರ್ವಜನಿಕರ ಪ್ರಾಣಕ್ಕೂ ಅಪಾಯ ಎಂದು ಹೇಳಿದ್ದಾರೆ. ಆರೋಪಿ ಸವಾರನ ವಿರುದ್ಧ ನರಹತ್ಯೆ ಮಾಡಲು ಯತ್ನಿಸಿದ ಗಂಭೀರ ಅಪರಾಧ u/sec 308 IPC ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಈ ವೀಡಿಯೊ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಬೆಚ್ಚಿಬೀಳಿಸಿದೆ ಮತ್ತು ಜೀವಕ್ಕೆ ಅಪಾಯವನ್ನುಂಟು ಮಾಡುವ ಕೃತ್ಯವಾಗಿದೆ, ಇದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರೂ, ಆತನಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಒಬ್ಬ ಬಳಕೆದಾರ ಇದು ತುಂಬಾ ಅಪಾಯಕ್ಕೆ ಗುರಿ ಮಾಡುವ ಕೃತ್ಯ, ಮಕ್ಕಳ ಜೀವದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಒಂದು ವೇಳೆ ಇವರ ಭಾರಕ್ಕೆ ಸ್ಕೂಟರ್​​ ಬ್ಯಾನೆಸ್ಸ್​ ತಪ್ಪಿ ಬೇರೆ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಕಥೆ ಎಂದು ಕಮೆಂಟ್​ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:08 pm, Mon, 26 June 23