ಥಾಣೆ: ದೀಪಾವಳಿಯ ಸಂದರ್ಭದಲ್ಲಿ ಎಲ್ಲ ಕಡೆ ಪಟಾಕಿ ಹೊಡೆಯುವುದು ಸಹಜ, ಆದರೆ ಅದು ಇನ್ನೊಬ್ಬರಿಗೆ ಹಾನಿಯನ್ನುಂಟು ಮಾಡಬಾರದು, ದೆಹಲಿಯಲ್ಲಿ ಸರ್ಕಾರ ಪಟಾಕಿ ನಿಷೇಧ ಮಾಡಿದ್ದರು ಪಟಾಕಿ ಹೊಡೆಯುತ್ತಿದ್ದಾರೆ. ದೀಪಾವಳಿಯಲ್ಲಿ ಪಟಾಕಿ ಹೊಡೆಯುವ ಮುನ್ನ ಎಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವಂತೆ ಅನೇಕ ರಾಜ್ಯ ಸರ್ಕಾರಗಳು ಹೇಳಿವೆ. ಪಟಾಕಿಯಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ಪಟಾಕಿ ಹೊಡೆಯಿರಿ ಎಂದು ಹೇಳಿದೆ.
ಆದರೆ ಇಲ್ಲೊಬ್ಬ ಒಂದು ವಸತಿ ಕಟ್ಟಡದ ಒಳಗೆ ರಾಕೇಟ್ ಬಿಟ್ಟಿದ್ದಾನೆ. ಮನೆಯವರೆಲ್ಲ ಭಯಗೊಂಡಿರುವ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ಪಟಾಕಿ ಸಿಡಿಸುವ ಮೂಲಕ ಇನ್ನೊಬ್ಬರ ಜೀವಕ್ಕೆ ಅಪಾಯ ತಂದಿಟ್ಟಿದ್ದ , ಈ ವ್ಯಕ್ತಿ ಉದ್ದೇಶಪೂರ್ವಕವಾಗಿ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ರಾಕೆಟ್‌ಗಳನ್ನು ಸಿಡಿಸಿದ್ದಾನೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.
उल्हासनगर के पुलिस इस अज्ञात युवक की तलाश में है, जो इमारत हीरा पना जो गोल मैदान के पास में फ्लैटों को निशाना बनाकर पटाखा चलाकर दहशत फैला रहा है उसका वीडियो वायरल होने के बाद आईपीसी की धारा 285, 286, 336 के तहत मामला दर्ज किया गया।#firecrackers #DiwaliFestival #Diwali pic.twitter.com/XuPJYVyfx3
— Satark Nagrik News (@satarknagnews) October 25, 2022
ರಾಕೆಟ್‌ಗಳು ಆ ಮನೆಯೊಳಗೆ ಹೋಗಿ ಸ್ಫೋಟಗೊಂಡಿದೆ. ಇದನ್ನು ನೋಡಿ ಮನೆಯೊಳಗೆ ಇದ್ದ ಜನರು ಭಯಗೊಂಡಿದ್ದಾರೆ. ಇದನ್ನು ಕೆಲವರು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸನಗರದಲ್ಲಿ ಈ ಭಯಾನಕ ಘಟನೆ ನಡೆದಿದೆ.
ಇದನ್ನು ಓದಿ: ಪಟಾಕಿ ಅವಾಂತರದಿಂದ ಮಾರುಕಟ್ಟೆಗೆ ಬೆಂಕಿ, 200 ಕ್ಕೂ ಹೆಚ್ಚು ಅಂಗಡಿಗಳು ಭಸ್ಮ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯುವಕನೊಬ್ಬ ವಸತಿ ಕಟ್ಟಡದ ಕೆಳಗೆ ನಿಂತು ರಾಕೆಟ್ ಹಾರಿಸುತ್ತಿರುವುದನ್ನು ನೀವು ನೋಡಬಹುದು. ಈ ರಾಕೆಟ್‌ಗಳು ಮತ್ತೊಂದು ಕಟ್ಟದಲ್ಲಿರುವ ಜನರ ಮನೆಗೆ ನೆರವಾಗಿ ಹೋಗುತ್ತಿರುವುದನ್ನು ಕಾಣಬಹುದು. ಇದನ್ನು ಆತ ಉದ್ದೇಶಪೂರ್ವಕವಾಗಿ ಮಾಡಿದ್ದಾನೆ ಎಂದು ವಿಡಿಯೋದಲ್ಲಿ ಕಾಣಬಹುದು