ಕೊಯಮತ್ತೂರಿನ ಕಾರು ಸ್ಫೋಟ ಪ್ರಕರಣ, ಯುಎಪಿಎ ಕಾಯ್ದೆ ಅಡಿಯಲ್ಲಿ ತನಿಖೆ
ಕೊಯಮತ್ತೂರಿನಲ್ಲಿ ನಡೆದ ಕಾರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ-ವಿರೋಧಿ ಕಾನೂನಿನ (ಯುಎಪಿಎ) ಅಡಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ಈ ಕಾರ್ ಸ್ಫೋಟದಲ್ಲಿ 25 ವರ್ಷದ ಜಮೇಜಾ ಮುಬಿನ್ ಸಾವನ್ನಪಿದ್ದ.
ದೆಹಲಿ: ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ-ವಿರೋಧಿ ಕಾನೂನಿನ (ಯುಎಪಿಎ) ಅಡಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ಈ ಕಾರು ಸ್ಫೋಟದಲ್ಲಿ 25 ವರ್ಷದ ಜಮೇಜಾ ಮುಬಿನ್ ಸಾವನ್ನಪಿದ್ದ. ಆತ ಮನೆಯಲ್ಲಿದ್ದ 75 ಕೆಜಿ ಕಚ್ಚಾ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯ ಅಡಿಯಲ್ಲಿ ತನಿಖಾ ನಡೆಸಲಾಗುತ್ತಿದೆ. ಈ ಪ್ರಕರಣದ ತನಿಖೆಯನ್ನು ತಮಿಳುನಾಡು ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಕೈಗೆತ್ತಿಕೊಂಡಿದೆ.
ಆರೋಪಿ ಮನೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆಯಾದ ನಂತರ ಕಾರಿನ ಸ್ಫೋಟಕ್ಕೂ ಮತ್ತು ಭಯೋತ್ಪಾದಕರಿಗೂ ಸಂಬಂಧವಿದೆ ಎಂದು ರಾಜ್ಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಕೊಯಮತ್ತೂರಿನ ದೇವಸ್ಥಾನದ ಬಳಿ ನಡೆದ ಸ್ಫೋಟದಲ್ಲಿ ಜಮೇಜಾ ಮುಬಿನ್ ಕೈವಾಡವಿದೆ ಎಂದು ಆರೋಪಿಸಿ ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆಯು ಆತನನ್ನು ವಿಚಾರಣೆಗೊಳಪಡಿಸಿದ ನಂತರ ಹತ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಆರೋಪಿ ಇಂಜಿನಿಯರಿಂಗ್ ಪದವೀಧರನಾಗಿದ್ದು, ಇದೀಗ ಆತನ ಸಹಚರರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.