ದೀದಿ ನಾಡಲ್ಲಿ ಇನ್ನೂ ಮುಗಿದಿಲ್ಲ ಹಿಂಸಾಚಾರ..: ವಿಡಿಯೋ ಬಿಡುಗಡೆ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ ಪಶ್ಚಿಮಬಂಗಾಳ ರಾಜ್ಯಪಾಲ

ಪಶ್ಚಿಮಬಂಗಾಳದಲ್ಲಿ ಈಗಲೂ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಡಿಜಿಪಿಗೆ ತಿಳಿಸಲಾಗಿದೆ. ಹಲವು ಸಂದರ್ಭಗಳಲ್ಲಿ ಅವರ ಗಮನಕ್ಕೆ ತರಲಾಗಿದೆ ಆದರೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ದೀದಿ ನಾಡಲ್ಲಿ ಇನ್ನೂ ಮುಗಿದಿಲ್ಲ ಹಿಂಸಾಚಾರ..: ವಿಡಿಯೋ ಬಿಡುಗಡೆ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ ಪಶ್ಚಿಮಬಂಗಾಳ ರಾಜ್ಯಪಾಲ
ಜಗದೀಪ್​ ಧನ್​ಕರ್​​
Edited By:

Updated on: Jun 06, 2021 | 12:52 PM

ಪಶ್ಚಿಮಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಂತರವೂ ಹಿಂಸಾಚಾರ ನಡೆದಿದ್ದು ಗೊತ್ತೇ ಇದೆ. ಆದರೆ ಅದಿನ್ನೂ ಮುಗಿದಿಲ್ಲ..ಇನ್ನೂ ಹಿಂಸಾಚಾರ ನಡೆಯುತ್ತಲೇ ಇದೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನ್​ಕರ್​ ಟ್ವೀಟ್​​ ಮಾಡಿದ್ದಾರೆ. ಈ ರಾಜ್ಯದಲ್ಲಿ ಹಿಂಸಾಚಾರ ಇನ್ನೂ ಮುಂದುವರಿಯುತ್ತಿದೆ. ಮನುಕುಲಕ್ಕೇ ಅವಮಾನವಾಗುವಂಥ ವಿಚಾರ ಇದು ಟ್ವೀಟ್​ ಮಾಡಿರುವ ಜಗದೀಪ್​ ಧನ್​ಕರ್​, ಹಿಂಸಾಚಾರದಿಂದ ಕೆಲವು ಮನೆಗಳು ಧ್ವಂಸಗೊಂಡಿದ್ದರ ಫೋಟೋಗಳನ್ನೂ ಶೇರ್​ ಮಾಡಿದ್ದಾರೆ. ಹೀಗೆ ವಿಧ್ವಂಸಕ ಕೃತ್ಯ ನಡೆಸುತ್ತಿರುವವರ ವಿರುದ್ಧ ರಾಜ್ಯ ಪೊಲೀಸರು ಯಾರೂ ಕ್ರಮ ಕೂಡ ಕೈಗೊಳ್ಳುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳುವ ದಿನದಿಂದಲೂ ಹಿಂಸಾಚಾರ ನಡೆಯುತ್ತಲೇ ಇದೆ. ಈ ಮೂಲಕ ಪ್ರಜಾಪ್ರಭುತ್ವದಲ್ಲಿ ಧೈರ್ಯವಾಗಿ ಪ್ರತಿಪಕ್ಷಗಳಿಗೆ ಮತಚಲಾಯಿಸುವವರಿಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಈಗಲೂ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಡಿಜಿಪಿಗೆ ತಿಳಿಸಲಾಗಿದೆ. ಹಲವು ಸಂದರ್ಭಗಳಲ್ಲಿ ಅವರ ಗಮನಕ್ಕೆ ತರಲಾಗಿದೆ. ಇಂಥ ಹೀನ ಕೃತ್ಯಗಳಿಗೆ ಲೆಕ್ಕ ಚುಕ್ತಾ ಮಾಡುವುದು ಅನಿವಾರ್ಯ. ಪ್ರಜಾಪ್ರಭುತ್ವ ಎಂದಿಗೂ ದುರ್ಬಲಗೊಳ್ಳುವುದಿಲ್ಲ..ಕಾನೂನು ಮತ್ತು ಸುವ್ಯವಸ್ಥೆ ಇಲ್ಲಿ ಪುನಃಸ್ಥಾಪನೆಯಾಗುತ್ತದೆ ಎಂಬುದು ನನ್ನ ಆಶಯ ಎಂದು ಜಗದೀಪ್​ ಧನ್​ಕರ್​ ಹೇಳಿದ್ದಾರೆ.