ಇತ್ತೀಚೆಗೆ ಅಂದರೆ ಜುಲೈ ಪ್ರಾರಂಭದಲ್ಲಿ ಮನಾಲಿ(Manali) ಯ ಮಾಲ್ ರಸ್ತೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ವಿಪರೀತ ಜನಸಂದಣಿ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದ ಕೆಲವು ಫೇಸ್ಬುಕ್, ಟ್ವಿಟರ್ ಬಳಕೆದಾರರು ಕೊವಿಡ್ 2ನೇ ಅಲೆಯ ಹೊತ್ತಲ್ಲಿ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಇಷ್ಟೊಂದು ಪ್ರವಾಸಿಗರು ನೆರೆದಿದ್ದಾರೆ. ಇಲ್ಲಿ ಯಾವುದೇ ಸಾಮಾಜಿಕ ಅಂತರ ನಿಯಮ ಪಾಲನೆಯಾಗುತ್ತಿಲ್ಲ ಎಂದು ಕ್ಯಾಪ್ಷನ್ಗಳನ್ನು ಬರೆದಿದ್ದರು. ಅಲ್ಲಿ ಪ್ರವಾಸಿಗರು ನೆರೆದಿದ್ದನ್ನು ನೋಡಿದವರೆಲ್ಲ ಹುಬ್ಬೇರಿಸಿದ್ದರು.
ಆದರೆ ಈ ಫೋಟೋ ಹಳೇಯದಾಗಿದ್ದು, ಕೊವಿಡ್ 19 ಎರಡನೇ ಅಲೆ ಬರುವುದಕ್ಕೂ ಮೊದಲೇ Amigosblink ಎಂಬ ಸ್ಟುಡಿಯೋ ತೆಗೆದಿದ್ದು ಎಂಬುದು ಫ್ಯಾಕ್ಟ್ಚೆಕ್ (FactCheck) ನಿಂದ ಗೊತ್ತಾಗಿದೆ. ಆಲ್ಟ್ ನ್ಯೂಸ್ ಈ ಫೋಟೋವನ್ನು ರಿವರ್ಸ್ ಸರ್ಚ್ ಇಮೇಜ್ಗೆ ಹಾಕಿತ್ತು. ಆಗ ಇದೇ ಫೋಟೋ 2021ರ ಜನವರಿ 24ರಂದೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈ ಫೋಟೋ ತೆಗೆಯಲ್ಪಟ್ಟಿದೆ ಎಂದೂ ಗೊತ್ತಾಗಿದೆ. ಹಾಗೇ, ಇದು ಹಿಮಾಚಲ ಪ್ರದೇಶ ಮನಾಲಿಯದ್ದೇ ಫೋಟೋ ಆದರೂ 2020ರ ಡಿಸೆಂಬರ್ 31ರಂದೇ ಕ್ಲಿಕ್ಕಿಸಿದ್ದು ಎಂದು ಬೂಮ್ ಫ್ಯಾಕ್ಟ್ಚೆಕ್ ಕೂಡ ಸ್ಪಷ್ಟಪಡಿಸಿದೆ.
ಹಳೇ ಫೋಟೋವನ್ನು ಜುಲೈ 4ರಂದು ಅಮರ್ಪ್ರೀತ್ ಸಿಂಗ್ ಎಂಬುವರು ಶೇರ್ ಮಾಡಿಕೊಂಡಿದ್ದರು. ಈ ಫೋಟೋ ಮಾತನಾಡುತ್ತದೆ. ಆಸ್ಪತ್ರೆಯಲ್ಲಿ ರೂಂ ಇಲ್ಲ..ಹಾಗೇ ಮನಾಲಿಯ ಹೋಟೆಲ್ಗಳಲ್ಲೂ ರೂಂ ಇಲ್ಲ ಎಂದು ಕ್ಯಾಪ್ಷನ್ ಬರೆದಿದ್ದರು.
Amigosblink ಸ್ಟುಡಿಯೋದ ಫೇಸ್ಬುಕ್ ಪೇಜ್ನ ಅಡ್ಮಿನಿಸ್ಟ್ರೇಟರ್ ಆಗಿರುವ ಅಜಯ್ ಕುಮಾರ್ ಅವರನ್ನು ಬೂಮ್ ಸಂಪರ್ಕಿಸಿ ಈ ಬಗ್ಗೆ ಪ್ರಶ್ನೆ ಮಾಡಿದೆ. ಈ ಫೋಟೋವನ್ನು ತೆಗೆದಿದ್ದು 2020ರ ಡಿಸೆಂಬರ್ನಲ್ಲಿ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅದರ ಫೇಸ್ಬುಕ್ ಪೇಜ್ನಲ್ಲಿ ಕಳೆದ ಡಿಸೆಂಬರ್ನಲ್ಲಿ ನೀಡಲಾದ ಲೈವ್ನಲ್ಲಿಯೂ ಈ ಸನ್ನಿವೇಶ ಕಂಡುಬಂದಿದೆ. ಹಾಗಾಗಿ ಇತ್ತೀಚೆಗೆ ತೆಗೆಯಲಾದ ಫೋಟೋ ಇದಲ್ಲ ಎಂದು ಆಲ್ಟ್ ಮತ್ತು ಬೂಮ್ ಮಾದ್ಯಮಗಳು ವರದಿ ಮಾಡಿವೆ.
ತಪ್ಪು ಮಾಹಿತಿಯೊಂದಿಗೆ ಫೋಟೋ ಶೇರ್ ಮಾಡಲಾಗಿದ್ದು..
Pictures speak- No room in hospital to no room in hotels at Manali in some days. ?#manali pic.twitter.com/uKkLFRyMW9
— Amarpreet Singh (@amarpreet_ka) July 4, 2021
ಆರು ತಿಂಗಳ ಹಿಂದೆಯೇ ವೈರಲ್ ಆಗಿತ್ತು ಈ ಫೋಟೋ
ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್