ನವದೆಹಲಿ: ಉತ್ತರ ಪ್ರದೇಶದ ಮಹೋಬಾದಲ್ಲಿ 19 ವರ್ಷದ ಯುವತಿಯೊಬ್ಬಳಿಗೆ ಕಳೆದ 5 ವರ್ಷಗಳಿಂದ ಪದೇ ಪದೇ ಕಪ್ಪು ಹಾವು ಕಚ್ಚಿರುವ ವಿಚಿತ್ರ ಮತ್ತು ಭಯಾನಕ ಘಟನೆ ಬೆಳಕಿಗೆ ಬಂದಿದೆ. 5 ವರ್ಷಗಳಲ್ಲಿ 11 ಬಾರಿ ಸರ್ಪ ಕಚ್ಚಿದ್ದು, ಇತ್ತೀಚೆಗೆ ಮತ್ತೊಮ್ಮೆ ಕಚ್ಚಿದೆ. ಇದರಿಂದ ಆಕೆಯ ಸ್ಥಿತಿ ಗಂಭೀರವಾಗಿದೆ. ಆಕೆ ಪ್ರಸ್ತುತ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವಿನ ದ್ವೇಷದ ಈ ಪ್ರಕರಣ ಮಹೋಬಾದ ಚರಖಾರಿ ತೆಹಸಿಲ್‌ನಲ್ಲಿರುವ ಪಂಚಂಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 2019ರಿಂದ ತನ್ನ ಮಗಳು ರೋಷನಿಗೆ ಕಪ್ಪು ಹಾವು ಪದೇ ಪದೇ ಕಚ್ಚುತ್ತಿದೆ ಎಂದು ಯುವತಿಯ ತಂದೆ ದಳಪತ್ ಹೇಳುತ್ತಾರೆ. ಗದ್ದೆಯಲ್ಲಿ ಕೆಲಸ ಮಾಡುವಾಗ ರೋಷನಿ ಆಕಸ್ಮಿಕವಾಗಿ ಹಾವಿನ ಮೇಲೆ ಕಾಲಿಟ್ಟಾಗ ಮೊದಲ ಬಾರಿ ಹಾವು ಕಚ್ಚಿತ್ತು. ವೈದ್ಯಕೀಯ ಚಿಕಿತ್ಸೆಯ ವೇಳೆಯೂ ಹಾವು ಅವಳನ್ನು ಹಿಂಬಾಲಿಸಲು ಪ್ರಾರಂಭಿಸಿತು. ಅಂದಿನಿಂದ 11 ಬಾರಿ ಆಕೆಗೆ ಹಾವು ಕಚ್ಚಿದೆ.
ಇದನ್ನೂ ಓದಿ: Video: ತಿರುಮಲದಲ್ಲಿ 8 ಅಡಿಯ ದೈತ್ಯ ನಾಗರಹಾವು ಪತ್ತೆ: ವೈರಲ್ ವಿಡಿಯೋ
ಆಕೆ ಸಂಬಂಧಿಕರ ಮನೆಗೆ ಹೋದಾಗಲೂ ಹಾವು ಕಡಿತ ಮುಂದುವರಿದಿದೆ ಎಂಬುದು ಅಚ್ಚರಿಯ ಸಂಗತಿ. ಹಾವು ತನ್ನ ಮಗಳನ್ನು ಹಿಂಬಾಲಿಸುವುದು ನಿಲ್ಲಿಸಿಲ್ಲ, ಸಂಬಂಧಿಕರ ಮನೆಗೆ ಹೋದಾಗಲೂ ಅವಳನ್ನು ಕಚ್ಚುತ್ತಿತ್ತು. ಪ್ರತಿ ಬಾರಿ ಕಚ್ಚಿದಾಗ, ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ವೈದ್ಯರು ಅವಳನ್ನು ಉಳಿಸುತ್ತಿದ್ದರು ಎಂದು ಆಕೆಯ ತಂದೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Viral: ನಡು ಬೀದಿಯಲ್ಲಿ ನಡೆಯಿತು ಕಾಳಿಂಗ ಸರ್ಪಗಳ ಕಾಳಗ, ಕೊನೆಗೆ ಗೆದ್ದಿದ್ದು ಯಾರು?
ತಮ್ಮ ಮಗಳಿಗೆ ಸರ್ಪ ದೋಷ ಇರಬಹುದು ಎಂದು ರೋಷನಿಯ ತಂದೆ ಪುರೋಹಿತರನ್ನು ಕೂಡ ಸಂಪರ್ಕಿಸಿದರು. ಅವರ ಸಲಹೆಯನ್ನು ಅನುಸರಿಸಿ, ಅವರು ಶಿವನ ವಿಶೇಷ ಪೂಜೆ ಮತ್ತು ಗ್ರಾಮದಲ್ಲಿ ಸಮುದಾಯದ ಹಬ್ಬ ಸೇರಿದಂತೆ ಪ್ರಾರ್ಥನೆ ಮತ್ತು ಆಚರಣೆಗಳನ್ನು ಮಾಡಿದರು. ಈ ಪ್ರಯತ್ನಗಳ ಹೊರತಾಗಿಯೂ ಮತ್ತೆ ಹಾವು ರೋಷನಿಯನ್ನು ಹಿಂಬಾಲಿಸುವುದು ಮತ್ತು ಕಚ್ಚುವುದನ್ನು ಮುಂದುವರೆಸಿದೆ. ಇದು ಅವರ ಕುಟುಂಬಕ್ಕೆ ಆತಂಕ ಉಂಟುಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ