ನವದೆಹಲಿ: ಕೇರಳದ ಮಲಪ್ಪುರಂನ (Malappuram) 42 ವರ್ಷದ ಮಹಿಳೆ ಮತ್ತು ಆಕೆಯ 24 ವರ್ಷದ ಮಗ ಸಾರ್ವಜನಿಕ ಸೇವಾ ಆಯೋಗದ (PSC) ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ. “ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್ಗೆ ಹೋಗಿದ್ದೆವು. ನನ್ನ ತಾಯಿಯೇ ನನ್ನನ್ನು ಪಿಎಸ್ಸಿ (PSC Exam) ಪರೀಕ್ಷೆ ಬರೆಯಲು ಪ್ರೇರೇಪಿಸಿದರು. ನಾವಿಬ್ಬರೂ ಒಟ್ಟಿಗೇ ಪಾಸ್ ಆಗಿರುವುದು ಬಹಳ ಖುಷಿ ತಂದಿದೆ” ಎಂದು ವಿವೇಕ್ ಹೇಳಿದ್ದಾರೆ.
ನಾವಿಬ್ಬರೂ ಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದಾಗ ನನ್ನ ತಂದೆ ನಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರು. ನಮಗೆ ನಮ್ಮ ಶಿಕ್ಷಕರಿಂದ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದರೂ ನಾವು ಒಟ್ಟಿಗೆ ತೇರ್ಗಡೆಯಾಗುತ್ತೇವೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಈಗ ನಮಗೆ ತುಂಬಾ ಸಂತೋಷವಾಗಿದೆ ಎಂದು ವಿವೇಕ್ ಹೇಳಿದ್ದಾರೆ.
Kerala | A 42-year-old mother and her 24 years old son from Malappuram have cleared Public Service Commission (PSC) examination together pic.twitter.com/BlBKYJiDHh
— ANI (@ANI) August 10, 2022
ಬಿಂದು ಅವರ ಮಗ 10ನೇ ತರಗತಿಯಲ್ಲಿದ್ದಾಗ ಆತನೊಂದಿಗೆ ತಾನೂ ಕುಳಿತು ಪುಸ್ತಕಗಳನ್ನು ಓದಲು ಆರಂಭಿಸಿದರು. ಪಬ್ಲಿಕ್ ಎಕ್ಸಾಂ ಆದ್ದರಿಂದ ಮಗನಿಗೆ ಒಬ್ಬನೇ ಓದಲು ಹೇಳಿದರೆ ಆತನಿಗೆ ಬೋರ್ ಆಗಬಹುದು ಎಂಬ ಕಾರಣಕ್ಕೆ ಆತನೊಂದಿಗೆ ಕುಳಿತು ತಾವೂ ಪುಸ್ತಕ ಓದಲಾರಂಭಿಸಿದರು. ಆದರೆ, ಇದು ಅವರನ್ನು ಕೇರಳ PSC ಪರೀಕ್ಷೆಗಳಿಗೆ ತಯಾರಾಗಲು ಪ್ರೇರೇಪಿಸಿತು. ಅದಾಗಿ 9 ವರ್ಷಗಳ ಬಳಿಕ ಇದೀಗ ಬಿಂದು ಮತ್ತು ಅವರ ಮಗ ವಿವೇಕ್ ಒಟ್ಟಿಗೆ ಸರ್ಕಾರಿ ಕೆಲಸವನ್ನು ಪಡೆಯಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: Viral News: ತನ್ನ ಡೈವೋರ್ಸ್ ಪಾರ್ಟಿಗೆ ಬಂದಿದ್ದ ವೇಟರ್ನನ್ನೇ ಮದುವೆಯಾದ ಯುವತಿ; ಇವರ ಲವ್ ಸ್ಟೋರಿ ಭಾರೀ ವೈರಲ್
ಬಿಂದು ಲೋವರ್ ಡಿವಿಜನಲ್ ಕ್ಲರ್ಕ್ (LDC) ಪರೀಕ್ಷೆಯಲ್ಲಿ 38ನೇ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ. ಅವರ ಮಗ 92ನೇ ಶ್ರೇಣಿಯೊಂದಿಗೆ ಕೊನೆಯ ದರ್ಜೆಯ ಸೇವಕರ (LGS) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮೂರು ಬಾರಿ ಪ್ರಯತ್ನಿಸಿದ ನಂತರ ಆತ LGS ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿಂದು 4 ಬಾರಿ ಎಲ್ಡಿಸಿ ಪರೀಕ್ಷೆಯನ್ನು ಬರೆದಿದ್ದರು. ಇದೀಗ ಅವರು ಪಾಸ್ ಆಗಿದ್ದಾರೆ.
“We went together to coaching classes. My mother brought me to this and my father arranged all facilities for us. We got a lot of motivation from our teachers. We both studied together but never thought that we’ll qualify together. We’re both very happy,” said Vivek, son of Bindu pic.twitter.com/2qu23d0IHX
— ANI (@ANI) August 10, 2022
ಬಿಂದು ಕಳೆದ 10 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ಪಾಠ ಮಾಡುತ್ತಿದ್ದಾರೆ. ಮನೆ ಕೆಲಸ ಮತ್ತು ಅಂಗನವಾಡಿ ಕೆಲಸವೂ ಇರುತ್ತಿದ್ದುದರಿಂದ ಬಿಂದು ಪರೀಕ್ಷೆಯ ದಿನಾಂಕಕ್ಕೆ 6 ತಿಂಗಳಿರುವಾಗ ಅಧ್ಯಯನ ಮಾಡಲು ಪ್ರಾರಂಭಿಸುತ್ತಿದ್ದರು. ಪರೀಕ್ಷೆ ಬರೆದಾದ ಮೇಲೆ ಮತ್ತೆ ಅದರ ಕಡೆ ತಲೆ ಹಾಕುತ್ತಿರಲಿಲ್ಲ. ಮತ್ತೆ ಪರೀಕ್ಷೆ ಅನೌನ್ಸ್ ಆದಾಗ ಓದುತ್ತಿದ್ದರು. ಇದೇ ಈ ಹಿಂದೆ ತಾವು ಪರೀಕ್ಷೆಯಲ್ಲಿ ಫೇಲ್ ಆಗಲು ಕಾರಣವಿರಬಹುದು ಎಂದು ಬಿಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral News: ಹೊಸ ಪೆನ್ಸಿಲ್ ಕೇಳಿದರೆ ಅಮ್ಮ ಹೊಡೆಯುತ್ತಾರೆ; ಪ್ರಧಾನಿ ಮೋದಿಗೆ ಪತ್ರ ಬರೆದ 6 ವರ್ಷದ ಬಾಲಕಿ
ಕೇರಳದಲ್ಲಿ ಸ್ಟ್ರೀಮ್-2 ಹುದ್ದೆಗಳಿಗೆ ವಯಸ್ಸಿನ ಮಿತಿ 40. ಆದರೆ ನಿರ್ದಿಷ್ಟ ವರ್ಗಗಳಿಗೆ ಕೆಲವು ವಿನಾಯಿತಿಗಳಿವೆ. ಇತರೆ ಹಿಂದುಳಿದ ವರ್ಗಗಳ ಗುಂಪಿನಲ್ಲಿ 3 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಧವೆಯರಿಗೆ ಇದು 5 ವರ್ಷಗಳವರೆಗೆ ವಿನಾಯಿತಿ ಇರುತ್ತದೆ.