Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ 100ಕ್ಕೆ 151 ಅಂಕ; ರಿಸಲ್ಟ್​ ನೋಡಿ ವಿದ್ಯಾರ್ಥಿಯೇ ಶಾಕ್

Bihar News: ಎರಡೂ ಮಾರ್ಕ್‌ಶೀಟ್‌ಗಳು ಟೈಪಿಂಗ್ ದೋಷಗಳನ್ನು ಹೊಂದಿವೆ. ಮುದ್ರಣ ದೋಷಗಳನ್ನು ಸರಿಪಡಿಸಿದ ನಂತರ, ಇಬ್ಬರು ವಿದ್ಯಾರ್ಥಿಗಳಿಗೂ ಹೊಸ ಅಂಕಪಟ್ಟಿಗಳನ್ನು ನೀಡಲಾಗುವುದು ಎಂದು ವಿವಿ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್ ತಿಳಿಸಿದ್ದಾರೆ.

Viral News: ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ 100ಕ್ಕೆ 151 ಅಂಕ; ರಿಸಲ್ಟ್​ ನೋಡಿ ವಿದ್ಯಾರ್ಥಿಯೇ ಶಾಕ್
ಸಂಗ್ರಹ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 01, 2022 | 12:01 PM

ಪಾಟ್ನಾ: ಪರೀಕ್ಷೆಗಳನ್ನು ಆಯೋಜಿಸುವಾಗ ಅಥವಾ ಫಲಿತಾಂಶ (Exam Results) ಪ್ರಕಟಿಸುವಾಗ ಕೆಲವು ಪ್ರಮಾದಗಳು ಆಗುವುದು ಸಾಮಾನ್ಯ. ಇದರಿಂದ ಶಿಕ್ಷಣ ಇಲಾಖೆ (Education Department) ತೀವ್ರ ಮುಜುಗರಕ್ಕೀಡಾಗಿ ತಲೆ ತಗ್ಗಿಸಿರುವ ಅನೇಕ ಉದಾಹರಣೆಗಳೂ ಇವೆ. ಇದೀಗ ಬಿಹಾರದ (Bihar) ದರ್ಬಂಗಾ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ (ಎಲ್‌ಎನ್‌ಎಂಯು) ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ಪೊಲಿಟಿಕಲ್ ಸೈನ್ಸ್​ ವಿಭಾಗದಲ್ಲಿ 100ಕ್ಕೆ 151 ಅಂಕ ಬಂದಿದೆ. ತನ್ನ ರಿಸಲ್ಟ್ ನೋಡಿ ಆ ವಿದ್ಯಾರ್ಥಿಯೇ ಶಾಕ್​ನಿಂದ ಇನ್ನೂ ಹೊರಗೆ ಬಂದಿಲ್ಲ.

ವಾರ್ಸಿಟಿಯ ಕಲಾ ವಿಭಾಗದ ವಿದ್ಯಾರ್ಥಿಯು ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ 100ಕ್ಕೆ 151 ಅಂಕಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. “ನನ್ನ ಫಲಿತಾಂಶವನ್ನು ನೋಡಿ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು. ಇದು ತಾತ್ಕಾಲಿಕ ಅಂಕಪಟ್ಟಿಯಾಗಿದ್ದರೂ, ಫಲಿತಾಂಶವನ್ನು ಬಿಡುಗಡೆ ಮಾಡುವ ಮೊದಲು ಅಧಿಕಾರಿಗಳು ಅದನ್ನು ಪರಿಶೀಲಿಸಬೇಕಾಗಿತ್ತು” ಎಂದು ಆ ವಿದ್ಯಾರ್ಥಿ ಹೇಳಿದ್ದಾನೆ.

ಇದನ್ನೂ ಓದಿ: ಅಮ್ಮನ ಮರಣದ ನಂತರ ಮಗಳನ್ನು ಬಿಟ್ಟು ಹೋದ ಅಪ್ಪ; ಅಜ್ಜಿ ಮಡಿಲಲ್ಲಿ ಬೆಳೆದ ಬಾಲೆಗೆ 10ನೇ ತರಗತಿಯಲ್ಲಿ ಶೇ 99.4 ಅಂಕ

ಮತ್ತೊಬ್ಬ ವಿದ್ಯಾರ್ಥಿ ತನ್ನ ಬಿಕಾಂ ಪರೀಕ್ಷೆಯಲ್ಲಿ ಅಕೌಂಟಿಂಗ್ ಮತ್ತು ಫೈನಾನ್ಸ್​ ಪ್ರಶ್ನೆಪತ್ರಿಕೆಯಲ್ಲಿ ಸೊನ್ನೆ ಅಂಕವನ್ನು ಪಡೆದಿದ್ದಾನೆ. ಆದರೂ ಆತನ ಪತ್ರಿಕೆಯಲ್ಲಿ ಪಾಸ್ ಎಂದು ನಮೂದಿಸಲಾಗಿದ್ದು, ಮುಂದಿನ ತರಗತಿಗೆ ಆತ ತೇರ್ಗಡೆ ಹೊಂದಿದ್ದಾನೆ.

“ಇದು ಟೈಪಿಂಗ್ ದೋಷ ಎಂದು ವಿಶ್ವವಿದ್ಯಾನಿಲಯ ಒಪ್ಪಿಕೊಂಡಿದೆ. ಬಳಿಕ ಅವರು ನನಗೆ ಪರಿಷ್ಕೃತ ಅಂಕ ಪಟ್ಟಿಯನ್ನು ನೀಡಿದ್ದಾರೆ” ಎಂದು ಆ ವಿದ್ಯಾರ್ಥಿ ಹೇಳಿದ್ದಾನೆ.

ಇದನ್ನೂ ಓದಿ: KCET Results 2022: ಸಿಇಟಿ ಫಲಿತಾಂಶ ಪ್ರಕಟ: ಈ ಬಾರಿ ವಿದ್ಯಾರ್ಥಿನಿಯರದ್ದೇ ಮೇಲುಗೈ

ಎರಡೂ ಮಾರ್ಕ್‌ಶೀಟ್‌ಗಳು ಟೈಪಿಂಗ್ ದೋಷಗಳನ್ನು ಹೊಂದಿವೆ ಎಂದು ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್ ಪಿಟಿಐಗೆ ತಿಳಿಸಿದ್ದಾರೆ. ಮುದ್ರಣ ದೋಷಗಳನ್ನು ಸರಿಪಡಿಸಿದ ನಂತರ, ಇಬ್ಬರು ವಿದ್ಯಾರ್ಥಿಗಳಿಗೂ ಹೊಸ ಅಂಕಪಟ್ಟಿಗಳನ್ನು ನೀಡಲಾಗುವುದು. ಅದು ಕೇವಲ ಮುದ್ರಣ ದೋಷವಾಗಿದ್ದು, ಮೌಲ್ಯಮಾಪನದಲ್ಲಿ ಬೇರೇನೂ ಸಮಸ್ಯೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

Published On - 11:59 am, Mon, 1 August 22

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !