ಅಮ್ಮನ ಮರಣದ ನಂತರ ಮಗಳನ್ನು ಬಿಟ್ಟು ಹೋದ ಅಪ್ಪ; ಅಜ್ಜಿ ಮಡಿಲಲ್ಲಿ ಬೆಳೆದ ಬಾಲೆಗೆ 10ನೇ ತರಗತಿಯಲ್ಲಿ ಶೇ 99.4 ಅಂಕ

ಪುಸ್ತಕಗಳನ್ನು  ಓದುವುದನ್ನು ಇಷ್ಟ ಎಂದ  ಶ್ರೀಜಾ ತಮ್ಮ ಪರೀಕ್ಷೆಯ ತಯಾರಿ ವೇಳಾಪಟ್ಟಿಯ ಬಗ್ಗೆಯೂ ಹೇಳಿದ್ದಾರೆ.“ನನಗೆ, ಅಧ್ಯಯನದ ಗಂಟೆಗಳ ಎಷ್ಟು ಎಂಬುದು ಮುಖ್ಯವಲ್ಲ. ನಾನು ಯಾವಾಗಲೂ ಅಧ್ಯಯನ ಮತ್ತು ಇತರ ಚಟುವಟಿಕೆಗಳ ನಡುವೆ,,,

ಅಮ್ಮನ ಮರಣದ ನಂತರ ಮಗಳನ್ನು ಬಿಟ್ಟು ಹೋದ ಅಪ್ಪ; ಅಜ್ಜಿ ಮಡಿಲಲ್ಲಿ ಬೆಳೆದ ಬಾಲೆಗೆ 10ನೇ ತರಗತಿಯಲ್ಲಿ ಶೇ 99.4 ಅಂಕ
ಅಜ್ಜಿ ಜತೆ ಬಾಲಕಿ ಶ್ರೀಜಾ
TV9kannada Web Team

| Edited By: Rashmi Kallakatta

Jul 25, 2022 | 8:31 PM

ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಪಟನಾದ (Patna) ಬಾಲಕಿಯೊಬ್ಬಳು ಶೇ 99.4 ಅಂಕಗಳಿಸಿದ್ದಾಳೆ. ಈಕೆ ತನ್ನ ಸಾಧನೆಯ ಖುಷಿ ಹಂಚುವಾಗ  ಬದುಕಿನ ಪುಟಗಳನ್ನು ಆಕೆಯ ಅಜ್ಜಿ ತಿರುವಿ ಹಾಕಿದ್ದಾರೆ. ಈ ಅಜ್ಜಿ ಮತ್ತು ಮೊಮ್ಮಗಳ ಸಂದರ್ಶನ ವಿಡಿಯೊ ತುಣುಕನ್ನು ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi) ಟ್ವೀಟ್ ಮಾಡಿದ್ದು ನೆಟ್ಟಿಗರು ಬಾಲಕಿಯ ಸಾಧನೆಯನ್ನು ಕೊಂಡಾಡಿದ್ದಾರೆ. ಬಾಲಕಿಯ ಹೆಸರು ಶ್ರೀಜಾ. ಈಕೆಯ ಅಮ್ಮ ತೀರಿದಾಗ ಅಪ್ಪ ಆಕೆಯನ್ನು ಬಿಟ್ಟು ಹೋದ. ಅಮ್ಮನ ಅಮ್ಮನೇ ಆಕೆಯನ್ನು ಬೆಳೆಸಿದ್ದು. ವರುಣ್ ಗಾಂಧಿ ಟ್ವಿಟರ್​​ನಲ್ಲಿ ಶೇರ್ ಮಾಡಿದ ವಿಡಿಯೊದಲ್ಲಿ ಶ್ರೀಜಾಳ ಅಜ್ಜಿ, ನಾನು ಈ ಫಲಿತಾಂಶ ಬಗ್ಗೆ ತುಂಬಾ ಖುಷಿ ಪಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆಕೆಯ ಅಳಿಯ ಅಂದರೆ ಶ್ರೀಜಾಳ ಅಪ್ಪನ ಬಗ್ಗೆ ವಿಚಾರಿಸಿದಾಗ ನನ್ನ ಮಗಳ ಸಾವಿನ ನಂತರ ಅವ ಬಿಟ್ಟು ಹೋದ. ಆನಂತರ ನಾವು ಅವನನ್ನು ನೋಡಲೇ ಇಲ್ಲ. ಅವ ಮತ್ತೊಂದು ಮದುವೆಯಾಗಿದ್ದಾನೆ. ಈಗ ಮಗಳ ಫಲಿತಾಂಶ ನೋಡಿ ಅವ ತನ್ನ ನಿರ್ಧಾರದ ಬಗ್ಗೆ ಮರುಗುತ್ತಿರಬಹುದು ಎಂದಿದ್ದಾರೆ ಅಜ್ಜಿ.

ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಮಂದಿ ಶ್ರೀಜಾ ಮತ್ತು ಆಕೆಯ ಅಜ್ಜಿಯನ್ನು ಅಭಿನಂದಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಡಿಎವಿ ಪಬ್ಲಿಕ್ ಸ್ಕೂಲ್-ಬಿಎಸ್‌ಇಬಿ ಕಾಲೋನಿಯ ವಿದ್ಯಾರ್ಥಿನಿ ಶ್ರೀಜಾ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಲು ಬಯಸಿದ್ದಾಳೆ. ಈಕೆ ಸಂಸ್ಕೃತ ಮತ್ತು ವಿಜ್ಞಾನ ವಿಷಯಗಳಲ್ಲಿ 100 ಮತ್ತು ಇಂಗ್ಲಿಷ್, ಗಣಿತ ಮತ್ತು ಸಮಾಜ ಅಧ್ಯಯನದಲ್ಲಿ 99 ಅಂಕಗಳನ್ನು ಗಳಿಸಿದ್ದಾಳೆ. ಶೇ99.4 ಗಳಿಸಿರುವ ಶ್ರೀಜಾ ರಾಜ್ಯದ ಟಾಪರ್‌ಗಳಲ್ಲಿ ಒಬ್ಬರು., “ನಾನು ಈಗಾಗಲೇ DAV-BSEB ನಲ್ಲಿ XI ತರಗತಿಯಲ್ಲಿ ವಿಜ್ಞಾನದ ಸ್ಟ್ರೀಮ್‌ಗೆ ಪ್ರವೇಶ ಪಡೆದಿದ್ದೇನೆ ಎಂದು ಶ್ರೀಜಾ ಹೇಳಿದ್ದಾಳೆ.

ಪುಸ್ತಕಗಳನ್ನು  ಓದುವುದನ್ನು ಇಷ್ಟ ಎಂದ  ಶ್ರೀಜಾ ತಮ್ಮ ಪರೀಕ್ಷೆಯ ತಯಾರಿ ವೇಳಾಪಟ್ಟಿಯ ಬಗ್ಗೆಯೂ ಹೇಳಿದ್ದಾರೆ.“ನನಗೆ, ಅಧ್ಯಯನದ ಗಂಟೆಗಳ ಎಷ್ಟು ಎಂಬುದು ಮುಖ್ಯವಲ್ಲ. ನಾನು ಯಾವಾಗಲೂ ಅಧ್ಯಯನ ಮತ್ತು ಇತರ ಚಟುವಟಿಕೆಗಳ ನಡುವೆ ಉತ್ತಮ ಸಮತೋಲನವನ್ನು ಇಟ್ಟುಕೊಳ್ಳುತ್ತೇನೆ. ಪರೀಕ್ಷೆಯ ಮೊದಲು, ನಾನು ಬಹಳಷ್ಟು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ ಅವುಗಳ ಪುನರಾವಲೋಕನ ಮಾಡುತ್ತಿದ್ದೆ ಎಂದಿದ್ದಾಳೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada