Viral News: ತನ್ನ ಡೈವೋರ್ಸ್​ ಪಾರ್ಟಿಗೆ ಬಂದಿದ್ದ ವೇಟರ್​​ನನ್ನೇ ಮದುವೆಯಾದ ಯುವತಿ; ಇವರ ಲವ್ ಸ್ಟೋರಿ ಭಾರೀ ವೈರಲ್

2019ರಲ್ಲಿ ಈ ರೀತಿ ಆಕೆಯ ಹೊಸ ಪ್ರೇಮಕತೆ ಶುರುವಾಯಿತು. ಗಂಡನ ಜೊತೆ ಸಂಬಂಧ ಮುರಿದುಕೊಂಡ ಬಳಿಕ ಒಂಟಿಯಾಗಿದ್ದ ಆಕೆ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಳು.

Viral News: ತನ್ನ ಡೈವೋರ್ಸ್​ ಪಾರ್ಟಿಗೆ ಬಂದಿದ್ದ ವೇಟರ್​​ನನ್ನೇ ಮದುವೆಯಾದ ಯುವತಿ; ಇವರ ಲವ್ ಸ್ಟೋರಿ ಭಾರೀ ವೈರಲ್
Image Credit source: times now
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 01, 2022 | 8:34 AM

ಮದುವೆ (Marriage) ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಈ ಜೋಡಿಯ ಮದುವೆ ನಿಶ್ಚಯವಾಗಿದ್ದು ಆಕೆಯ ಡೈವೋರ್ಸ್​ ಪಾರ್ಟಿಯಲ್ಲಿ! ತನ್ನ ಮೊದಲ ಗಂಡನಿಗೆ ಡೈವೋರ್ಸ್​ (Divorce) ನೀಡಿದ ಯುವತಿ ತನ್ನ ಸ್ನೇಹಿತರಿಗಾಗಿ ಡೈವೋರ್ಸ್​ ಪಾರ್ಟಿ ಆಯೋಜಿಸಿದ್ದಳು. ಆ ಪಾರ್ಟಿಯ ಕ್ಯಾಟರಿಂಗ್​ನಲ್ಲಿ ವೇಟರ್ ಆಗಿ ಬಂದಿದ್ದ ಯುವಕನನ್ನು ನೋಡಿ ಆಕೆ ಮನಸೋತಿದ್ದಳು. ಕೊನೆಗೆ ಆತನನ್ನೇ ಲವ್ ಮಾಡಿ, ಮದುವೆಯಾಗಿದ್ದಾಳೆ. ಈ ಜೋಡಿಯ ಲವ್ ಸ್ಟೋರಿ (Love Story) ಇದೀಗ ಭಾರೀ ವೈರಲ್ ಆಗಿದೆ.

ಗೇಬ್ರಿಯೆಲಾ ಮತ್ತು ಜಾನ್ ಅವರ ಈ ಪ್ರೇಮಕತೆ ವೈರಲ್ ಆಗುತ್ತಿದೆ. ಗೇಬ್ರಿಯೆಲಾ ಲ್ಯಾಂಡೋಲ್ಫಿ ತನ್ನ ಗಂಡನಿಗೆ ವಿಚ್ಛೇದನ ನೀಡಿದ್ದಳು. ಅದೇ ಖುಷಿಯಲ್ಲಿ ಡೈವೋರ್ಸ್​ ಪಾರ್ಟಿಯನ್ನು ಆಯೋಜಿಸಿದ್ದ ಆಕೆ ತನ್ನ ಅತಿಥಿಗಳಿಗೆ ಸರ್ವಿಸ್ ನೀಡಲು ಟಾಪ್‌ಲೆಸ್ ವೇಟರ್ ಜಾನ್‌ ಎಂಬಾತನನ್ನು ಕರೆಸಿದ್ದಳು. ಆದರೆ, ಆತನ ಟಾಪ್​ಲೆಸ್ ಬಾಡಿ ನೋಡಿ ಮನಸೋತಿದ್ದ ಆಕೆಗೆ ಆತನ ಮೇಲೆ ಕ್ರಶ್ ಆಗಿತ್ತು. ಬಳಿಕ ಆತನ ಜೊತೆ ಡೇಟಿಂಗ್ ಶುರು ಮಾಡಿದ ಆಕೆ ಕೊನೆಗೂ ಆತನನ್ನೇ ಮದುವೆಯಾಗಿದ್ದಾಳೆ.

2019ರಲ್ಲಿ ಈ ರೀತಿ ಆಕೆಯ ಹೊಸ ಪ್ರೇಮಕತೆ ಶುರುವಾಯಿತು. ಗಂಡನ ಜೊತೆ ಸಂಬಂಧ ಮುರಿದುಕೊಂಡ ಬಳಿಕ ಒಂಟಿಯಾಗಿದ್ದ ಆಕೆ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಳು. ಆ ದಿನದ ಡೈವೋರ್ಸ್​ ಪಾರ್ಟಿಯಲ್ಲಿ ಗೇಬ್ರಿಯೆಲಾ ಕಂಠಪೂರ್ತಿ ಕುಡಿದು ಎಂಜಾಯ್ ಮಾಡಿದ್ದಳು. ಆಕೆ ಹೇಗಿದ್ದಾಳೆ, ಆರೋಗ್ಯವಾಗಿದ್ದಾಳಾ ಎಂದು ವಿಚಾರಿಸಲು ವೇಟರ್ ಬೆಳಗ್ಗೆ ಫೋನ್ ಮಾಡಿದ್ದ. ಹೀಗೇ ಅವರಿಬ್ಬರ ನಡುವೆ ಮೆಸೇಜ್​ಗಳ ವಿನಿಮಯವಾಗುತ್ತಿತ್ತು. ಅದಾದ ನಂತರ ಇಬ್ಬರ ನಡುವೆ ಪ್ರೀತಿ ಶುರುವಾಯಿತು.

ಇದನ್ನೂ ಓದಿ: Viral News: ತಮ್ಮ 600 ಕೋಟಿ ರೂ. ಆಸ್ತಿಯನ್ನು ಸರ್ಕಾರದ ಹೆಸರಿಗೆ ಬರೆದ ವೈದ್ಯ; ಯಾರಿವರು?

ನನ್ನ ವಿಚ್ಛೇದನದ ಪಾರ್ಟಿಗೆ ನಾನು ನೇಮಿಸಿಕೊಂಡ ಟಾಪ್‌ಲೆಸ್ ವೇಟರ್​​ನೊಂದಿಗೆ ನಾನು ಸಂಬಂಧ ಹೊಂದುತ್ತೇನೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ಇದೀಗ ಅವನನ್ನೇ ಮದುವೆಯಾಗುತ್ತಿದ್ದೇನೆ. ಒಂದು ಪುಸ್ತಕವನ್ನು ಕೇವಲ ಅದರ ಕವರ್ ಪೇಜಿನಿಂದ ನಿರ್ಧರಿಸಲು ಸಾಧ್ಯವಿಲ್ಲ. ಅದನ್ನು ಓದಿದಾಗ ಮಾತ್ರ ಸಂಪೂರ್ಣವಾಗಿ ಅರ್ಥವಾಗುತ್ತದೆ ಎಂದು ಗೇಬ್ರಿಯೆಲಾ ಹೇಳಿದ್ದಾರೆ.

ಇಬ್ಬರೂ ಈಗ ಮದುವೆಯಾಗಿದ್ದಾರೆ. ಜಾನ್ ಕೂಡ ಈ ಹಿಂದೆ ಒಂದು ಮದುವೆಯಾಗಿದ್ದು, ಒಬ್ಬಳು ಮಗಳೂ ಇದ್ದಾಳೆ. ಗೇಬ್ರಿಯೆಲಾ ಈಗ ಜಾನ್​ನ ಮೊದಲ ಹೆಂಡತಿಯ ಮಗಳನ್ನು ತಾನೇ ನೋಡಿಕೊಳ್ಳುತ್ತಿದ್ದಾಳೆ.

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು