Viral Video: ವಿದೇಶಿ ಮಹಿಳೆಯ ಭಾಂಗ್ರಾ ಸ್ಟೆಪ್ಗೆ ನೆಟ್ಟಿಗರು ಫಿದಾ; ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚಾದ ಫಾಲೋವರ್ಸ್
ಯುಎಸ್ನ ನೃತ್ಯಗಾರ್ತಿ ಒಮಲಾ ಎಂಬವರು ಪಂಜಾಬಿ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದು, ಪಂಜಾಬಿ ಹಾಡಿಗೆ ಲಿಪ್ ಲಿಂಕ್ ಕೂಡ ಮಾಡಿದ್ದಾರೆ. ವಿಡಿಯೋಗಳು ವೈರಲ್ ಆದ ನಂತರ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫಾಲೋವರ್ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
ಭಾರತದ ಸಂಸ್ಕೃತಿಯನ್ನು ಇಷ್ಟಪಡುವ ವಿದೇಶಿಗರು ಭಾರತೀಯ ಶೈಲಿಯಲ್ಲಿ ಉಡುಗೆ ತೊಡುಗೆ ಧರಿಸುವುದನ್ನು ಕಾಣಬಹುದು. ಇದರೊಂದಿಗೆ ಭಾರತೀಯ ಸಿನಿಮಾದಲ್ಲಿನ ಹಾಡುಗಳು ಕೂಡ ವಿದೇಶಗಳಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಗೊಂದು ಈಗೊಂದು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಯುಎಸ್ನ ನೃತ್ಯಗಾರ್ತಿ ಒಮಲಾ ಎಂಬವರು ಪಂಜಾಬಿ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದು, ಹಾಡಿಗೆ ಲಿಪ್ ಲಿಂಕ್ ಕೂಡ ಮಾಡಿದ್ದಾರೆ. ಇದರ ವಿಡಿಯೋಗಳನ್ನು ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳನ್ನು ಹಂಚಿಕೊಂಡಾಗಿನಿಂದ ಅವರ ಅನುಯಾಯಿಗಳು ಸಂಖ್ಯೆಯಲ್ಲಿಯೂ ಏರಿಕೆ ಕಂಡಿದೆ ಮಾರಾಯ್ರೆ.
ಇತ್ತೀಚೆಗೆ ಅಪ್‌ಲೋಡ್ ಮಾಡಿದ ರೀಲ್‌ನಲ್ಲಿ ಆಮಿ ವಿರ್ಕ್ ಮತ್ತು ಮನ್ನತ್ ನೂರ್ ಹಾಡಿರುವ ಚಿಡಿ ಬ್ಲೌರಿ ಹಾಡಿಗೆ ಒಮಲಾ ಅವರು ಭಾಂಗ್ರಾ ಸ್ಟೆಪ್ಗಳ ಪ್ರದರ್ಶನ ಮಾಡಿರುವುದನ್ನು ಕಾಣಬಹುದು. ಕೆಳಗಿನ ವೈರಲ್ ವೀಡಿಯೊವನ್ನು ವೀಕ್ಷಿಸಿ:
View this post on Instagram
ನಿಮ್ರತ್ ಖೈರಾ ಅವರ ಸಾನು ತಾ ಬುಲೌನೋ ವಿ ಗೆಯಾ ಎಂಬ ಪಂಜಾಬಿ ಹಾಡಿಗೆ ಒಮಲಾ ಅವರು ಲಿಪ್ ಸಿಂಕ್ ಮಾಡಿದ್ದಾರೆ. ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ದಾಟಿಸಿದೆ. ವೀಡಿಯೊಗಾಗಿ ಓಮಲಾ ಕುರ್ತಾ-ಪೈಜಾಮ ಮತ್ತು ದುಪಟ್ಟಾವನ್ನು ಧರಿಸಿದ್ದು, ಭಾರತೀಯ ಆಭರಣಗಳನ್ನು ಕೂಡ ಹಾಕಿಕೊಂಡಿದ್ದಾರೆ. ವೀಡಿಯೊವನ್ನು ಇಲ್ಲಿ ವೀಕ್ಷಿಸಿ:
View this post on Instagram
ಭಾರತೀಯ ಸಂಸ್ಕೃತಿ ಮತ್ತು ಪಂಜಾಬಿ ಸಂಗೀತದ ಮೇಲಿನ ಪ್ರೀತಿಯೊಂದಿಗೆ ದೇಸಿ ನೆಟಿಜನ್‌ಗಳನ್ನು ಸಾಕಷ್ಟು ಆಕರ್ಷಿಸಿದೆ. ಅವರ ಇನ್ನೊಂದು ಭಾಂಗ್ರಾ ನೃತ್ಯ ವೀಡಿಯೊ ಇಲ್ಲಿದೆ:
View this post on Instagram
ಇತ್ತೀಚಿನ ದಿನಗಳಲ್ಲಿ ವಿದೇಶಿಗರು ಭಾರತೀಯ ಹಾಡುಗಳಿಗೆ ಲಿಪ್ ಲಿಂಕ್ ಮಾಡುವುದು, ನೃತ್ಯ ಮಾಡುವುದು ಸಾಮಾನ್ಯವಾಗಿದೆ. ಈ ಹಿಂದೆ ಟನ್ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪಂಜಾಬಿ ಸಂಗೀತಕ್ಕೆ ಸಖತ್ ಸ್ಟೆಪ್ ಹಾಕಿ ಗಮನಸೆಳೆದಿದ್ದರು. ವಿವಿಧ ದೇಶಗಳ ವಿದ್ಯಾರ್ಥಿಗಳ ಗುಂಪೊಂದು ವಿಭಿನ್ನ ನೃತ್ಯವನ್ನು ಮಾಡಿದ್ದಾರೆ. ಡೋಲು ಹಿಡಿದುಕೊಂಡು ಪಂಜಾಬಿ ಸಂಗೀತವನ್ನು ಬಾರಿಸಿದಾಗ ವಿದ್ಯಾರ್ಥಿಯೊಬ್ಬ ಗುಂಪಿನ ಮಧ್ಯೆ ಬಂದು ಡೋಲು ಬಡಿತಕ್ಕೆ ಸರಿಯಾಗಿ ಸ್ಟೆಪ್ ಹಾಕುತ್ತಾನೆ. ಈ ವೇಳೆ ಉಳಿದ ವಿದ್ಯಾರ್ಥಿಗಳು ಕೂಡ ಹುಚ್ಚೆದ್ದು ಕುಣಿಯುತ್ತಾರೆ.
Published On - 11:07 am, Mon, 1 August 22