Viral Video: ಪಾಲಕನ ಬೆನ್ನ ಮೇಲೇರಲು ಮಕ್ಕಳಂತೆ ಹಟ ಹಿಡಿದ ಮುದ್ದಾದ ಪಾಂಡಾ; ವಿಡಿಯೋ ನೋಡಿ ಆನಂದಿಸಿ
ಮುದ್ದಾದ ಪಾಂಡಾವೊಂದು ಪಾಲಕನ ಬೆನ್ನಿನ ಮೇಲೆ ಏರಲು ಹಟ ಹಿಡಿಯುವ ಹಾಗೂ ಉಳಿದ ಮೂರು ಪಾಂಡಾಗಳು ಪಾಲಕನ ಕೆಲಸಕ್ಕೆ ಅಡ್ಡಿಪಡಿಸುತ್ತಾ ತಮಾಷೆಯಾಗಿ ಜಗಳವಾಡುವ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.
ಮಕ್ಕಳು ಹೇಗೆ ತಂದೆ ಹೆಗಲ ಮೇಲೆ ಏರಲು ಇಷ್ಟಪಡುತ್ತಾರೋ ಅದೇ ರೀತಿಯ ವರ್ತನೆಯನ್ನು ಕೆಲವೊಂದು ಮುಗ್ದ ಸಾಕು ಪ್ರಾಣಿಗಳು ಕೂಡ ಮಾಡುತ್ತದೆ. ಮರದ ಕೊಂಬೆಗಳಲ್ಲಿ ಹೆಚ್ಚಾಗಿ ಕುಳಿತುಕೊಳ್ಳಲು ಇಷ್ಟಪಡುವ ಪಾಂಡಾವೊಂದು ತನ್ನ ಪಾಲಕನ ಹೆಗಲ ಮೇಲೆ ಏರಿ ಕುಳಿತುಕೊಳ್ಳಲು ಹಟ ಮಾಡುವುದು ಮತ್ತು ತಮಾಷೆಯಾಗಿ ನಡೆದುಕೊಳ್ಳುವ ವಿಡಿಯೋ ಇಂಟರ್ನೆಟ್ನಲ್ಲಿ ನೆಟ್ಟಿಗರ ಹೃದಯ ಗೆದ್ದಿದೆ. ಮುದ್ದಾದ ಪಾಂಡಾವೊಂದು ಪಾಲಕನ ಬೆನ್ನಿನ ಮೇಲೆ ಏರಲು ಹಟ ಹಿಡಿದು ಪ್ರಯತ್ನಿಸುತ್ತದೆ. ಅಲ್ಲದೆ ತಮ್ಮ ಕೆಲಸವನ್ನು ಮಾಡಲು ಬಿಡುವುದಿಲ್ಲ, ನಮ್ಮೊಂದಿಗೆ ಆಟ ಆಡಿ ಎಂದು ಹೇಳುವಂತಿರುವ ನಾಲ್ಕು ಪಾಂಡಾಗಳು ಪಾಲಕನನ್ನು ಹಿಂಬಾಲಿಸುತ್ತಾ ತಮಾಷೆಯಾಗಿ ಕೀಟಲೆ ಕೊಡುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋವನ್ನು pups ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪಾಂಡಾ ಪಾಲಕನ ಜೀವನದಲ್ಲಿ ಒಂದು ದಿನ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ ಹಂಚಿಕೊಂಡಾಗಿನಿಂದ ಈವರೆಗೆ 7 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದ್ದು, 2.27 ಲಕ್ಷಕ್ಕೂ ಹೆಚ್ಚು ಲೈಕ್ಗಳು, 38 ಸಾವಿರಕ್ಕೂ ಹೆಚ್ಚು ರೀಟ್ವೀಟ್ಗಳು ಆಗಿವೆ.
ವಿಡಿಯೋದಲ್ಲಿ ಕಾಣವಂತೆ, ಪಾಂಡಾಗಳನ್ನು ನೋಡಿಕೊಳ್ಳುವ ಪಾಲಕನು ಅವುಗಳ ವಾಸ ಜಾಗದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಈ ವೇಳೆ ಪಾಲಕ ಬೆನ್ನುಬಿದ್ದ ಮುದ್ದಾದ ಪಾಂಡಾವೊಂದು ಆತನ ಬೆನ್ನ ಮೇಲೆ ಏರಲು ಮಕ್ಕಳಂತೆ ಹಟ ಹಿಡಿಯುತ್ತದೆ. ಬೆನ್ನಿನ ಮೇಲೆ ಏರಲು ಬಿಡದಿದ್ದಾಗ ಆ ಪಾಂಡ ಪಾಲಕನ ಕಾಲನ್ನೇ ಹಿಡಿದುಕೊಂಡು ಮೇಲೇರಲು ಪ್ರಯತ್ನಿಸುತ್ತದೆ. ವಿಧಿ ಇಲ್ಲದೆ ಆ ವ್ಯಕ್ತಿ ಕುಳಿತುಕೊಂಡು ಪಾಂಡಾ ಮೇಲೇರಲು ಬಿಡುತ್ತಾನೆ. ಅಷ್ಟಕ್ಕೂ ಸುಮ್ಮನಾಗದ ಆ ಪಾಂಡಾ ಬೆನ್ನ ಮೇಲೆ ಕುಳಿತುಕೊಂಡು ತೊಂದರೆ ಕೊಡಲು ಪ್ರಾರಂಭಿಸುತ್ತದೆ. ನಂತರ ಅದನ್ನು ಕೆಳಗಿಳಿಸಲಾಗುತ್ತಾನೆ. ಈ ವೇಳೆ ಪಾಲಕನ ಸುತ್ತುವರಿದ ನಾಲ್ಕು ಪಾಂಡಾಗಳು ತಮ್ಮ ಪಾಲಕನ ಕಾಲುಗಳನ್ನು ಹಿಡಿದು ಕೆಲಸಕ್ಕೆ ಅಡ್ಡಿಪಡಿಸುತ್ತಾ ತಮಾಷೆಯಾಗಿ ಜಗಳವಾಡುತ್ತದೆ.
A day in the life of a panda caretaker? pic.twitter.com/ATmA6NLJns
— pups (@pups_Puppies1) July 29, 2022
ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ತಮ್ಮ ತಮಾಷೆಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪಾಂಡಾಗಳು ಅವರನ್ನು ಇಷ್ಟು ದಿನ ಬದುಕಲು ಹೇಗೆ ಬಿಟ್ಟವು ಎಂದು ತಮಾಷೆಯಾಗಿ ಕೆಲವರು ಹೇಳಿಕೊಂಡಿದ್ದಾರೆ. ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ನಾನು ಈ ಕೆಲಸವನ್ನು ಉಚಿತವಾಗಿ ಮಾಡುತ್ತೇನೆ, ನನಗೆ ಕಿರಿಕಿರಿ ಉಂಟುಮಾಡಲು ಯಾರೂ ಇಲ್ಲ, ವರ್ಷದ 365 ದಿನಗಳು ಕೂಡ ಸಂತೋಷದ ದಿನಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, “ಆ ಪಾಂಡಾಗಳು ಎಷ್ಟು ಮುದ್ದಾಗಿವೆ, ನಾನು ನೋಡಿದ ಅತ್ಯಂತ ಮೋಹಕವಾದ ವಿಡಿಯೋ ಇದು, ನಾನು ಈ ವಿಡಿಯೋವನ್ನು ಪ್ರೀತಿಸುತ್ತೇನೆ” ಎಂದಿದ್ದಾರೆ.
Published On - 10:19 am, Mon, 1 August 22