Viral Video: ನೀವು ಕ್ಯಾಟ್ ಲವರ್ಸ್ ಆಗಿದ್ದರೆ ಈ ವೈರಲ್ ವಿಡಿಯೋವನ್ನು ಮಿಸ್ ಮಾಡದೆ ನೋಡಿ
ಇಪ್ಪತ್ತು ವರ್ಷದ ಬೆಕ್ಕೊಂದು ಮುದ್ದುಮುದ್ದಾಗಿ ಜಾಗರೂಕತೆಯಿಂದ ಮೆಟ್ಟಿಲುಗಳನ್ನು ಇಳಿದುಕೊಂಡು ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸದ್ಯದ ಜೀವನಶೈಲಿಯಲ್ಲಿ ಮನುಷ್ಯರು 60-70 ವರ್ಷ ಬದುಕುವುದು ಕಷ್ಟ. ಅದಾಗ್ಯೂ ಒಂದಷ್ಟು ಮಂದಿ 100 ವರ್ಷ ಪೂರೈಸುವವರೂ ಇದ್ದಾರೆ. ಇಂತಹ ಜೀವಿತಾವಧಿ ಉತ್ತಮ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ನಿರ್ದಿಷ್ಟ ಜೀವಿತಾವಧಿಗಿಂತ ಹೆಚ್ಚು ಬದುಕುವುದು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಇರುತ್ತದೆ. ಇದಕ್ಕೆ ನಿದರ್ಶನವಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಬೆಕ್ಕಿನ ಆಯಸ್ಸು 12 ವರ್ಷದಿಂದ 18 ವರ್ಷ. ಈ ಆಯಸ್ಸನ್ನು ಮೀರಿ ಬದುಕಿರುವ ಬೆಕ್ಕೊಂದು ಇಂಟರ್ನೆಟ್ನಲ್ಲಿ ಅಚ್ಚರಿಗೊಳಿಸಿದೆ. ವಯಸ್ಸಾದರೂ ಆ ಬೆಕ್ಕು ಮನೆಯ ಮೆಟ್ಟಿಲುಗಳನ್ನು ಮುದ್ದುಮುದ್ದಾಗಿ ಇಳಿದು ಬರುವುದನ್ನು ನೀವು ನೋಡಿದರೆ ಖಂಡಿತವಾಗಿಯೂ ಫಿದಾ ಆಗುತ್ತೀರಿ.
13.4 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕ್ಯಾಟ್ಸ್ ಆಫ್ ಇನ್‌ಸ್ಟಾಗ್ರಾಮ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜುಲೈ 31 ರಂದು ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, 1.48 ಲಕ್ಷ ಲೈಕ್ಗಳನ್ನು ಹಾಗೂ 1.9 ಮಿಲಿಯನ್ ವೀಕ್ಷಣಗಳನ್ನು ಸಂಗ್ರಹಿಸಿದೆ. ವಿಡಿಯೋವನ್ನು ಹಂಚಿಕೊಳ್ಳುವಾಗ, “ನಿಧಾನವಾಗಿ… ಮತ್ತು ವಿರಾಮ ತೆಗೆದುಕೊಳ್ಳಿ” ಎಂದು ಶೀರ್ಷಕೆ ಬರೆಯಲಾಗಿದೆ.
20ವರ್ಷ ಬೆಕ್ಕು ಮೆಟ್ಟಿಲಿನಲ್ಲಿ ಕುಳಿತಿರುವಲ್ಲಿಂದ ವಿಡಿಯೋ ಆರಂಭವಾಗುತ್ತದೆ. ನಂತರದ ಕೆಲವೇ ಸೆಕೆಂಡುಗಳಲ್ಲಿ ಬೆಕ್ಕು ಮೆಟ್ಟಿಲುಗಳನ್ನು ಇಳಿಯಲು ಆರಂಭಿಸುತ್ತದೆ. ಜಾಗರೂಕತೆಯಿಂದ ನಿಧಾನವಾಗಿ ಒಂದೊಂದೇ ಮೆಟ್ಟಿಲುಗಳನ್ನು ಇಳಿಯುತ್ತದೆ. ನಾಲ್ಕೈದು ಮೆಟ್ಟಿಲುಗಳನ್ನು ಇಳಿದು ಮೆಟ್ಟಿಲಿನಲ್ಲೇ ಕುಳಿತುಕೊಳ್ಳುತ್ತದೆ.
ವಿಡಿಯೋವನ್ನು ಸರಿಯಾಗಿ ಗಮನಿಸಿದರೆ, ಮಹಡಿ ಮೇಲಿಂದ ನೆಲ ಮಹಡಿಗೆ ಬೆಕ್ಕು ಇಳಿದು ಬಂದಿದೆ. ವಯಸ್ಸಾಗಿರುವುದರಿಂದ ನಾಲ್ಕೈದು ಮೆಟ್ಟಿಲುಗಳನ್ನು ಇಳಿದು ಆಯಾಸ ಕಳೆಯಲು ಕುಳಿತುಕೊಳ್ಳುತ್ತದೆ. ಇದೇ ರೀತಿ ಮಾಡುತ್ತಾ ಬೆಕ್ಕು ಕೆಳಗೆ ಇಳಿದಂತೆ ಕಾಣುತ್ತದೆ.
View this post on Instagram
ವಿಡಿಯೋ ನೋಡಿದ ಒಂದಷ್ಟು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ಅದು ಮೇಲೆ ಹತ್ತಲು ಒಟ್ಟಿಗೆ ಯಾರಾದರು ಬೇಕು” ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ಆರೋಗ್ಯದ ಮತ್ತು ಸಂತೋಷದ ಹಾರೈಕೆಯನ್ನು ಮಾಡಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಅಯ್ಯೋ ಅವನು ತುಂಬಾ ಮುದ್ದಾಗಿದ್ದಾನೆ. ನಾನು ಅವನನ್ನು ಎತ್ತಿಕೊಂಡು ಕೆಳಗಿಳಿಸುತ್ತೇನೆ” ಎಂದು ಹೇಳಿದ್ದಾರೆ.