Viral Video: ನಾಗಿನ್ ಡಾನ್ಸ್ ಮಾಡುತ್ತಿದ್ದ ಇಬ್ಬರು ಯುವಕರು ಮಾಡಿದ್ದೇನು ಗೊತ್ತಾ? ವೈರಲ್ ವಿಡಿಯೋ ಇಲ್ಲಿದೆ
ಇಬ್ಬರು ಯುವಕರ ನಾಗಿನ್ ನಾಗಿನ್ ಮ್ಯೂಸಿಕ್ಗೆ ಡಾನ್ಸ್ ಮಾಡುತ್ತಿದ್ದರು. ನೋಡನೋಡುತ್ತಿದ್ದಂತೆ ಹಾವಿನಂತೆ ಡಾನ್ಸ್ ಮಾಡುತ್ತಿದ್ದ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ: ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಅಥವಾ ಇನ್ಯಾವುದೋ ಮನರಂಜನಾ ಸಮಾರಂಭಗಳಲ್ಲಿ ನೃತ್ಯ ಮಾಡುವುದು ಕಾಮನ್, ಅದು ವಿದೇಶಗಳಲ್ಲೂ ಇದೆ. ಆದರೆ ಭಾರತದಲ್ಲಿ ಡಿಜೆ ಡಾನ್ಸ್ನಲ್ಲಿ ನಾಗಿನ್ ನಾಗಿನ್ ಡಾನ್ಸ್ ಬಹಳ ವಿಶೇಷವಾಗಿದೆ. ಇದಕ್ಕೆ ಯುವಕ-ಯುವತಿಯರು ಕೂಡ ಹುಚ್ಚೆದ್ದು ಕುಣಿಯುತ್ತಾರೆ. ಆದರೆ ಇಲ್ಲಿಬ್ಬರು ಯುವಕರು ಈ ಹಾಡಿಗೆ ಡಾನ್ಸ್ ಮಾಡುತ್ತಾ ಪರಸ್ಪರ ಹಾವಿನಂತೆ ಹೊಡೆದಾಡಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.
ಸಮಾರಂಭವೊಂದರಲ್ಲಿ ಬ್ಯಾಂಡ್ ವಾದಕರು ನಾಗಿನ್ ಹಾಡಿನ ಮ್ಯೂಸಿಕ್ ಅನ್ನು ಹಾಕಿದ್ದಾರೆ. ಈ ವೇಳೆ ಬ್ಯಾಂಡ್ ವಾದಕರ ನಡುವೆ ಬಂದ ಇಬ್ಬರು ಯುವಕರು ಬಹಳ ಜೋಷ್ ಆಗಿ ಹಾವಿನಂತೆ ಡಾನ್ಸ್ ಮಾಡುತ್ತಾರೆ. ಕೆಲವೇ ಸೆಕೆಂಡುಗಳಲ್ಲಿ ಒಬ್ಬಾತ ಹಾವು ಕೋಪಗೊಂಡರೆ ಯಾವ ರೀತಿ ಕುಟುಕುತ್ತದೆಯೋ ಅದೇ ರೀತಿಯಲ್ಲಿ ಕುಟುಕುತ್ತಾನೆ. ಈ ವೇಳೆ ಕೋಪಗೊಂಡ ಮತ್ತೊಬ್ಬ ಅದೇ ರೀತಿಯಲ್ಲಿ ಆತನಿಗೂ ಕುಟುಕುತ್ತಿದ್ದಾನೆ. ಇದೇ ವೇಳೆ ನಾಗಿನ್ ಡಾನ್ಸ್ ಜಗಳಕ್ಕೆ ತಿರುಗಿದೆ. ಇದು ಕೇವಲ ಜಗಳವಲ್ಲ ಅವರು ಹಾವುಗಳಂತೆ ಪರಸ್ಪರ ಹೊಡೆದಾಟಿಕೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ನೆರೆದಿದ್ದವರು ಜಗಳ ಬಿಡಿಸುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.
View this post on Instagram
ಈ ವಿಡಿಯೋವನ್ನು ಮೀಮ್ಸ್ ಮಾಡಿ iam_a_dreamer_5 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾನುವಾರ ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು, ಸಂಪೂರ್ಣ ಉಲ್ಲಾಸದಾಯಕವಾಗಿದೆ ಎಂದು ಹೇಳಿಕೊಂಡಿದ್ದು, ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
ಈ ಹಿಂದೆ ಲಾರಿಯ ಹಾರನ್ ಸೌಂಡ್ ಭಾರಿ ವೈರಲ್ ಆಗಿತ್ತು. ಇದಕ್ಕೆ ಕಾರಣ ಏನೆಂದರೆ, ಆ ಹಾರನ್ನಲ್ಲಿನ ಮ್ಯೂಸಿಕ್ ನಾಗಿನ್ ನಾಗಿನ್ ಆಗಿತ್ತು. ಲಾರಿ ಚಾಲಕ ಹಾರನ್ ಹಾಕುತ್ತಿದ್ದಂತೆ ಬೈಕ್ನಲ್ಲಿ ಬಂದ ಹತ್ತಾರು ಯುವಕರು ರಸ್ತೆಯಲ್ಲೇ ಹುಚ್ಚೆದ್ದು ಕುಣಿದಿದ್ದರು. ಈ ವಿಡಿಯೋ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿತ್ತು.