Viral Video: ಪದವೀಧರನಾದ ತಂದೆ, ಇದೇ ಖುಷಿಯಲ್ಲಿ ಮಗಳು ಹೇಳಿದ್ದೇನು? ವೈರಲ್ ವಿಡಿಯೋ ಇಲ್ಲಿದೆ ನೋಡಿ

ಘಟಿಕೋತ್ಸವ ಸಮಾರಂಭದಲ್ಲಿ ವ್ಯಕ್ತಿಯೊಬ್ಬರು ವೇದಿಕೆಗೆ ಕಾಲಿಟ್ಟಾಗ ಸಭೆಯಲ್ಲಿ ಕುಳಿತಿದ್ದ ಅವರ ಪ್ರೀತಿಯ ಮಗಳು ಹೆಮ್ಮೆಯಿಂದ ಅಭಿನಂದನೆಗಳು ಡ್ಯಾಡಿ, ಲವ್ ಯು ಡ್ಯಾಡಿ ಎಂದು ಹೇಳಿದ ವಿಡಿಯೋ ವೈರಲ್ ಆಗುತ್ತಿದೆ.

Viral Video: ಪದವೀಧರನಾದ ತಂದೆ, ಇದೇ ಖುಷಿಯಲ್ಲಿ ಮಗಳು ಹೇಳಿದ್ದೇನು? ವೈರಲ್ ವಿಡಿಯೋ ಇಲ್ಲಿದೆ ನೋಡಿ
ಲವ್ ಯು ಡ್ಯಾಡಿ ಎಂದ ಮಗಳಿಗೆ ತಂದೆಯ ಪ್ರತಿಕ್ರಿಯೆ
Follow us
TV9 Web
| Updated By: Rakesh Nayak Manchi

Updated on:Jul 31, 2022 | 3:17 PM

ವೈರಲ್ ವಿಡಿಯೋ: ಪದವಿ ಪ್ರದಾನ ಸಮಾರಂಭದಲ್ಲಿ ವ್ಯಕ್ತಿಯೊಬ್ಬರು ವೇದಿಕೆಗೆ ಕಾಲಿಟ್ಟಾಗ ಸಭೆಯಲ್ಲಿ ಕುಳಿತಿದ್ದ ಅವರ ಪ್ರೀತಿಯ ಮಗಳು ಹೆಮ್ಮೆಯಿಂದ ಅಭಿನಂದನೆಗಳು ಡ್ಯಾಡಿ, ಲವ್ ಯು ಡ್ಯಾಡಿ ಎಂದು ಹೇಳಿದ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral) ಆಗುತ್ತಿದೆ. ಮಗಳ ಉತ್ಸಾಹಭರಿತ ಹರ್ಷೋದ್ಗಾರಗಳನ್ನು ಕೇಳಿಸಿದ ತಂದೆ, ಎದೆತುಂಬಿದ ಧನ್ಯವಾದಗಳನ್ನು ತಿಳಿಸಿರುವುದು ಕೂಡ ಇಂಟರ್ನೆಟ್​ನಲ್ಲಿ ಗಮನಸೆಳೆಯುತ್ತಿದೆ.

ಸ್ಕಾಟ್ಲೆಂಡ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಆಶಿಶ್ ನಲವಾಡೆ ಎಂಬವರು ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ಹೋದಾಗ ಅವರ ಮಗಳು ಶಿವಾಯಿ ಹೆಮ್ಮೆ ಪಟ್ಟಿದ್ದಾಳೆ. ವೇದಿಕೆಗೆ ಆಶಿಶ್ ಅವರು ಕಾಲಿಡುತ್ತಿದ್ದಂತೆ ಸಭೆಯಲ್ಲಿ ಕುಳಿತುಕೊಂಡೇ “ಅಭಿನಂದನೆಗಳು ಡ್ಯಾಡಿ ಎಂದು ಶಿವಾಯಿ ಹೇಳುತ್ತಾಳೆ. ಈ ವೇಳೆ ಆಶೀಶ್ ಹೃದಯತುಂಬಿದ ಧನ್ಯವಾದಗಳನ್ನು ಪ್ಲೈನ್ ಕಿಸ್​ನೊಂದಿಗೆ ತಿಳಿಸುತ್ತಾರೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ಮತ್ತೆ ಆಕೆ “ಲವ್ ಯು ಡ್ಯಾಡಿ” ಎಂದು ಹೇಳುತ್ತಾಳೆ. ಈ ವೇಳೆ ಆಶೀಶ್ ನಗಾಡುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋವನ್ನು ಸ್ವತಃ ಆಶೀಶ್ ನಲವಾಡೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ಪುಟ್ಟ ರಾಜಕುಮಾರಿ ಇಲ್ಲದೆ ನನ್ನ ಪದವಿ ಸಮಾರಂಭವು ಉತ್ತಮವಾಗುತ್ತಿರಲಿಲ್ಲ. ಮೌನ ಸಮಾರಂಭದ ಸಭಾಂಗಣದಲ್ಲಿ “ಅಭಿನಂದನೆಗಳು ಡ್ಯಾಡಿ!!! ನಾನು ನಿನ್ನನ್ನು ಪ್ರೀತಿಸುತ್ತೇನೆ!” ಎಂಬ ಅವಳ ಮಾತುಗಳು ಪ್ರತಿಧ್ವನಿಸುತ್ತಿದ್ದಂತೆ ಅಲ್ಲಿದ್ದವರೆಲ್ಲರ ಜೊತೆಗೆ ನನ್ನ ಹೃದಯವೂ ಕರಗಿತು. ಪದವಿ ಪ್ರಶಸ್ತಿಗಿಂತ ಹೆಚ್ಚಾಗಿ ನನ್ನ ಮಗಳಿಗೆ ತಂದೆಯಾಗಿರುವುದು ನನ್ನ ದೊಡ್ಡ ಸಾಧನೆ ಎಂದು ನಾನು ಭಾವಿಸಿದೆ. ಅವಳು ವಿಶ್ವದ ಅತ್ಯುತ್ತಮ ಮಗಳು, ಆದರೆ ಜನರು ನಿಜವಾಗಿ ಏನು ಹೇಳುತ್ತಾರೆಂದು ನಿಮಗೆ ತಿಳಿದಿದೆ “ತಂದೆಯಂತೆಯೇ ಮಗಳಂತೆ” ಇದು ನನ್ನ ಇಡೀ ಪದವಿ ಸಮಾರಂಭದ ಮೋಹಕವಾದ ಕ್ಷಣವಾಗಿದ್ದು, ಅದು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ” ಎಂದು ಶೀರ್ಷಿಕೆ ಬರೆದಿದ್ದಾರೆ.

View this post on Instagram

A post shared by Shivaee (@shivaeenalawade_)

ಈ ವಿಡಿಯೋ ವೈರಲ್ ಪಡೆದು 1.2 ಮಿಲಿಯನ್​ಗೂ ಅಧಿಕ ಲೈಕ್‌ಗಳು ಪಡೆದುಕೊಂಡಿದೆ. ವಿಡಿಯೋ ನೋಡಿದ ಒಂದಷ್ಟು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಬಳಕೆದಾರರೊಬ್ಬರು, “ಇದು ತುಂಬಾ ಸುಂದರವಾಗಿದೆ, ಪುನರಾವರ್ತಿತ ವಿಡಿಯೋ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, “ಈ ವೀಡಿಯೋ ತಮ್ಮ ದಿನವನ್ನಾಗಿಸಿದೆ” ಎಂದು ಹೇಳಿದ್ದಾರೆ. ವಿಶ್ವದಲ್ಲೇ ಅಂತ್ಯಂತ ಮುದ್ದಾಗಿದೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.

Published On - 3:09 pm, Sun, 31 July 22