Viral Video: ಮಳೆಯಿಂದ ಹೈದರಾಬಾದ್ ಜಲಾವೃತ, ರಸ್ತೆಯಲ್ಲಿ ಕೊಚ್ಚಿ ಹೋದ ಬಿರಿಯಾನಿ ಪಾತ್ರೆ
ಹೈದರಾಬಾದ್ನಲ್ಲಿ ಶುಕ್ರವಾರದಂದು ಸುರಿದ ಧಾರಾಕಾರ ಮಳೆಗೆ ಪ್ರವಾಹದಂತೆ ರಸ್ತೆಯಲ್ಲಿ ನೀರು ಕೊಚ್ಚಿ ಹೋಗಿದೆ. ವಿಶೇಷವೆಂದರೆ, ರಸ್ತೆಯಲ್ಲಿ ಹರಿದು ಹೋಗುತ್ತಿದ್ದ ನೀರಿನಲ್ಲಿ ಬಿರಿಯಾನಿ ಪಾತ್ರೆಯೇ ಕೊಚ್ಚಿಹೋಗಿದೆ.
ವೈರಲ್ ವಿಡಿಯೋ: ತೆಲಂಗಾಣದಲ್ಲಿ ಭಾರೀ ಮಳೆಯಾಗಿದ್ದು, ರಾಜ್ಯ ರಾಜಧಾನಿ ಹೈದರಾಬಾದ್ನಲ್ಲಿ ಶುಕ್ರವಾರದಂದು ಸುರಿದ ಧಾರಾಕಾರ ಮಳೆಗೆ ಪ್ರವಾಹದಂತೆ ರಸ್ತೆಯಲ್ಲಿ ನೀರು ಕೊಚ್ಚಿ ಹೋಗಿದೆ. ವಿಶೇಷವೆಂದರೆ, ರಸ್ತೆಯಲ್ಲಿ ಹರಿದು ಹೋಗುತ್ತಿದ್ದ ನೀರಿನಲ್ಲಿ ಬಿರಿಯಾನಿ ಪಾತ್ರೆಯೇ ಕೊಚ್ಚಿಹೋಗಿದೆ ಮಾರಾಯ್ರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ. ಹೈದರಾಬಾದ್ನ ಓಲ್ಡ್ ಸಿಟಿಯಲ್ಲಿ ಈ ದೃಶ್ಯಾವಳಿಯನ್ನು ಸೆರೆಹಿಡಿಯಲಾಗಿದೆ.
ವೀಡಿಯೊವನ್ನು Ibn Crowley ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಯಾರೋ ಬಿರಿಯಾನಿ ಆರ್ಡರ್ ಸಿಗದೆ ಅತೃಪ್ತರಾಗಿದ್ದಾರೆ” ಎಂದು ಶೀರ್ಷಿಕೆ ಬರೆದು ಹೈದರಾಬಾದ್ ಮತ್ತು ಹೈದರಾಬಾದ್ ಮಳೆಯನ್ನು ಹ್ಯಾಷ್ಟ್ಯಾಗ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಪಡೆದು 7.26 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಸಂಗ್ರಹಿಸಿದೆ. ರೆಸ್ಟೋರೆಂಟ್‌ನಿಂದ ಬಿರಿಯಾನಿ ಪಾತ್ರೆಗಳು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋವನ್ನು ನೋಡಿದ ನೆಟ್ಟಿಗರು “ಇತ್ತೀಚಿನ ಮತ್ತು ವೇಗದ ಮನೆ ವಿತರಣೆ!” ಎಂದು ಲೇವಡಿ ಮಾಡಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, “ತೇಲುವ ಬಿರಿಯಾನಿ” ಎಂದು ಹೇಳಿಕೊಂಡಿದ್ದಾರೆ.
Somebody is going to be unhappy for not getting his biryani order.#Hyderabad #HyderabadRains pic.twitter.com/OPdXsjSoKs
— Ibn Crowley (@IbnFaraybi) July 28, 2022
ಶುಕ್ರವಾರ ಸುರಿದ ಭಾರೀ ಮಳೆಗೆ ಹೈದರಾಬಾದ್ನ ಹಲವೆಡೆ ಪ್ರವಾಹದಂತೆ ನೀರು ರಸ್ತೆಯಲ್ಲಿ ಹರಿದುಹೋಗಿದ್ದು, ಹಲವು ಅಂಗಡಿಗಳಿಗೆ ನೀರು ನುಗ್ಗಿದೆ. ಅದರಂತೆ ನವಾಬ್ ಸಾಹೇಬ್ ಕುಂಟಾದಲ್ಲಿರುವ ಶಾಸ್ತ್ರಿಪುರಂ ಮುಖ್ಯ ರಸ್ತೆಯಲ್ಲಿರುವ ಅದಿಬಾ ಹೋಟೆಲ್‌ಗೆ ನೀರು ನುಗ್ಗಿದ್ದು, ಅಲ್ಲಿದ್ದ ಮಾತ್ರೆಗಳು ಕೊಚ್ಚಿಕೊಂಡು ಹೋಗಿವೆ.ಎಂದು ವೈರಲ್ ವಿಡಿಯೋ ಅಡಿಯಲ್ಲಿ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಈ ಬಾರಿಯ ಮಾನ್ಸೂನ್ ಮಳೆಯ ಅಬ್ಬರಕ್ಕೆ ವಿವಿಧ ರಾಜ್ಯಗಳಲ್ಲಿ ಪ್ರವಾಹಗಳು ತಲೆದೋರಿತ್ತು. ಸದ್ಯ ಮಳೆಯ ಅಬ್ಬರವಾಗಿದ್ದರೂ ಆ ಸಮಯದಲ್ಲಿ ರಸ್ತೆಗಳಿಗೆ ಮೀನು ಬಂದಿರುವ, ಮೀನಿನ ಮಳೆಯಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಮೀನಿನ ಮಳೆಯನ್ನು ನೋಡಿದ ಜನರು ಮತ್ತು ನೆಟ್ಟಿಗರು ಅಚ್ಚರಿಗೊಂಡಿದ್ದರು.
Published On - 1:58 pm, Sun, 31 July 22