Viral News: ಫ್ರೈಡ್ ರೈಸ್​ನಲ್ಲಿ ಜಿರಳೆ ಪತ್ತೆ! ಆದರೆ ಇದು ಪಿತೂರಿ ಎಂದ ಫುಡ್ ಕೋರ್ಟ್ ಮಾಲೀಕ

ಗ್ರಾಹಕರೊಬ್ಬರು ಮತ್ತೊಂದು ಫುಡ್ ಕೋರ್ಟ್ ತಿನಿಸುಗಳಲ್ಲಿ ತಮ್ಮ ಆಹಾರದಲ್ಲಿ ಜಿರಳೆಯನ್ನು ಕಂಡಿದ್ದಾರೆ.ಮೌಲಿ ಕಾಂಪ್ಲೆಕ್ಸ್‌ನ ನಿವಾಸಿ ಅನಿಲ್ ಕುಮಾರ್ ಅವರು ತಮ್ಮ ಪತ್ನಿ ಮತ್ತು ಸಹೋದರಿಯೊಂದಿಗೆ ಊಟ ಮಾಡಲು ಬಂದಿರುವುದಾಗಿ ಹೇಳಿದರು. ಮಾಲ್‌ನ ಫುಡ್ ಕೋರ್ಟ್‌ನಲ್ಲಿರುವ ಚೈನೀಸ್ ಫುಡ್ ಔಟ್‌ಲೆಟ್ ನಿ ಹಾವೊನಿಂದ ಫ್ರೈಡ್ ರೈಸ್ ಅನ್ನು ಆರ್ಡರ್ ಮಾಡಿದ ಅವರು ಅದರಲ್ಲಿ ಜಿರಳೆ ಕಂಡು ಬೆಚ್ಚಿ ಬಿದ್ದಿದ್ದಾರೆ.

Viral News: ಫ್ರೈಡ್ ರೈಸ್​ನಲ್ಲಿ ಜಿರಳೆ ಪತ್ತೆ! ಆದರೆ ಇದು ಪಿತೂರಿ ಎಂದ ಫುಡ್ ಕೋರ್ಟ್ ಮಾಲೀಕ
Cockroach
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 30, 2022 | 5:59 PM

ನೆಕ್ಸಸ್ ಎಲಾಂಟೆ ಮಾಲ್‌ನ ಮೂರನೇ ಮಹಡಿಯಲ್ಲಿರುವ ಫುಡ್ ಕೋರ್ಟ್‌ನಲ್ಲಿನ ರೆಸ್ಟೋರೆಂಟ್‌ನ ಆಹಾರದಲ್ಲಿ ಹಲ್ಲಿ ಕಂಡುಬಂದ ಒಂದು ತಿಂಗಳ ನಂತರ, ಶುಕ್ರವಾರದಂದು ಗ್ರಾಹಕರೊಬ್ಬರು ಮತ್ತೊಂದು ಫುಡ್ ಕೋರ್ಟ್ ತಿನಿಸುಗಳಲ್ಲಿ ತಮ್ಮ ಆಹಾರದಲ್ಲಿ ಜಿರಳೆಯನ್ನು ಕಂಡಿದ್ದಾರೆ.ಮೌಲಿ ಕಾಂಪ್ಲೆಕ್ಸ್‌ನ ನಿವಾಸಿ ಅನಿಲ್ ಕುಮಾರ್ ಅವರು ತಮ್ಮ ಪತ್ನಿ ಮತ್ತು ಸಹೋದರಿಯೊಂದಿಗೆ ಊಟ ಮಾಡಲು ಬಂದಿರುವುದಾಗಿ ಹೇಳಿದರು. ಮಾಲ್‌ನ ಫುಡ್ ಕೋರ್ಟ್‌ನಲ್ಲಿರುವ ಚೈನೀಸ್ ಫುಡ್ ಔಟ್‌ಲೆಟ್ ನಿ ಹಾವೊನಿಂದ ಫ್ರೈಡ್ ರೈಸ್ ಅನ್ನು ಆರ್ಡರ್ ಮಾಡಿದ ಅವರು ಅದರಲ್ಲಿ ಜಿರಳೆ ಕಂಡು ಬೆಚ್ಚಿ ಬಿದ್ದಿದ್ದಾರೆ.

ಅದನ್ನು ರೆಸ್ಟೋರೆಂಟ್ ಸಿಬ್ಬಂದಿಗೆ ತೋರಿಸಿದಾಗ ಅವರು ಅದು ಈರುಳ್ಳಿ ತುಂಡು ಎಂದು ಹೇಳಿದ್ದಾರೆ. ಪೊಲೀಸರಿಗೆ ಕರೆ ಮಾಡಲು ಈ ಬಗ್ಗೆ ತಿಳಿಸಿದ್ದಾರೆ. ರೆಸ್ಟೊರೆಂಟ್ ಮತ್ತು ಮಾಲ್ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಎಲಾಂಟೆ ಫುಡ್ ಕೋರ್ಟ್ ಅಯಾನ್ ಫುಡ್ಸ್ ಒಡೆತನದಲ್ಲಿದೆ ಮತ್ತು ರೆಸ್ಟೋರೆಂಟ್ ನೇರವಾಗಿ ಅವರಿಂದಲೇ ಕಾರ್ಯನಿರ್ವಹಿಸುತ್ತಿದೆ.

ಇದು ಮಾಲ್ ಆಡಳಿತದ ಪಿತೂರಿ ಎಂದ ಫುಡ್ ಕೋರ್ಟ್ ಮಾಲೀಕರು

ಇದನ್ನೂ ಓದಿ
Image
ತಿಮಿಂಗಲ ಮತ್ತು ಮೀನುಗಾರರ ನಡುವಿನ ಹೃದಯಸ್ಪರ್ಶಿ ಸಂವಹನ ಮನಸ್ಸಿಗೆ ಮುದ ನೀಡುತ್ತದೆ!
Image
Viral Video: ಹುರಿದುಂಬಿಸುವವರಿದ್ದರೆ ಅಸಾಧ್ಯವೆಂಬುದೇ ಇಲ್ಲ, ಅಂತೂ ಕಿಕ್ ಫ್ಲಿಪ್ ಆಫ್ ಕಲಿತೇ ಬಿಟ್ಟ ಬಾಲೆ
Image
Viral Video: ಸೈಕಲ್​ನಿಂದ ಬಿದ್ದ ಬಾಲಕ ಮುಜುಗರವನ್ನು ತಪ್ಪಿಸಲು ಎದ್ದು ಡಾನ್ಸ್ ಮಾಡಿದ ವಿಡಿಯೋ ವೈರಲ್
Image
Viral Video: ಪೊಲೀಸ್ ಠಾಣೆಯಲ್ಲಿ ಜಾನಪದ ಗೀತೆ ಹಾಡಿದ ಬಾಲಕನ ವಿಡಿಯೋ ವೈರಲ್

ಅಯಾನ್ ಫುಡ್ಸ್ ಮಾಲೀಕ ಪುನೀತ್ ಗುಪ್ತಾ ಅವರು ಏಪ್ರಿಲ್‌ನಲ್ಲಿ ಬಾಡಿಗೆಗೆ ಸಂಬಂಧಿಸಿದಂತೆ ವಿವಾದವಾಗಿತ್ತು, ಮಾಲ್ ಆಡಳಿತದ ವಿಧ್ವಂಸಕ ಕೃತ್ಯ ಎಂದು ಹೇಳಿದ್ದಾರೆ. ಮಾಲ್ ಆಡಳಿತ ಮಂಡಳಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು.

ಈ ಗ್ರಾಹಕರು ಮಾಲ್‌ನ ಉದ್ಯೋಗಿಯಾಗಿದ್ದು, ಘಟನೆ ಸಂಭವಿಸುವ ಮೊದಲು ಮಾಲ್‌ನ ಇತರ ಕೆಲವು ಉದ್ಯೋಗಿಗಳೊಂದಿಗೆ ಚಾಟ್ ಮಾಡುತ್ತಿರುವುದು ಕಂಡುಬಂದಿದೆ ಎಂದು ಗುಪ್ತಾ ಆರೋಪಿಸಿದ್ದಾರೆ. ನಾವು ಈ ಫುಡ್ ಕೋರ್ಟ್​ನ್ನು ಒಂಬತ್ತು ವರ್ಷಗಳಿಂದ ನಡೆಸುತ್ತಿದ್ದೇವೆ, ಇಂತಹ ಯಾವುದೇ ಆರೋಪವು ನಮ್ಮ ಮೇಲೆ ಬಂದಿಲ್ಲ. ಆದರೆ, ಕಳೆದ ಎರಡು ತಿಂಗಳಲ್ಲಿ ಎರಡು ಘಟನೆಗಳು ನಡೆದಿವೆ. ನಮ್ಮ ಮತ್ತು ಮಾಲ್ ನಡುವಿನ ಫುಡ್ ಕೋರ್ಟ್ ಗುತ್ತಿಗೆ ವಿವಾದದ ನಂತರ ಇದು ಪ್ರಾರಂಭವಾಯಿತು ಮತ್ತು ಈ ವಿಷಯವು ನ್ಯಾಯಾಲಯದ ಮೆಟ್ಟಿಲೇರಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಹೇಳಿದ್ದು, ಈ ಕಾರಣಕ್ಕಾಗಿಯೇ ಈ ವಿಧ್ವಂಸಕ ಕೃತ್ಯಗಳನ್ನು ನಡೆಸಲಾಗುತ್ತಿದೆ, ಎಂದು ಆರೋಪಿಸಿದರು.

Published On - 5:59 pm, Sat, 30 July 22