AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೈಕಲ್​ನಿಂದ ಬಿದ್ದ ಬಾಲಕ ಮುಜುಗರವನ್ನು ತಪ್ಪಿಸಲು ಎದ್ದು ಡಾನ್ಸ್ ಮಾಡಿದ ವಿಡಿಯೋ ವೈರಲ್

ಬಾಲಕನೊಬ್ಬ ಸೈಕಲ್​ನಿಂದ ಬಿದ್ದ ನಂತರ ಡಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಪಡೆದು 10ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.

Viral Video: ಸೈಕಲ್​ನಿಂದ ಬಿದ್ದ ಬಾಲಕ ಮುಜುಗರವನ್ನು ತಪ್ಪಿಸಲು ಎದ್ದು ಡಾನ್ಸ್ ಮಾಡಿದ ವಿಡಿಯೋ ವೈರಲ್
ಸೈಕಲ್​ನಿಂದ ಬಿದ್ದು ಡಾನ್ಸ್ ಮಾಡಿದ ಬಾಲಕ
TV9 Web
| Edited By: |

Updated on:Jul 29, 2022 | 4:04 PM

Share

ಸಣ್ಣವರಿದ್ದಾಗ ಓಡುವಾಗ, ನಡೆದುಕೊಂಡು ಹೋಗುವಾಗ ಅಥವಾ ಸೈಕಲ್​ನಲ್ಲಿ ಹೋಗುವಾಗ ಬಿದ್ದರೆ ನೋವಾಗಿ ಅಳುವವರಿಗಿಂತ ಮುಜುಗುರಕ್ಕೀಡಾದೆ ಎಂದು ಅಳುವವರೇ ಹೆಚ್ಚು. ಅದಾಗ್ಯೂ ಕೆಲವರು ತಾನು ಬಿದ್ದಿಲ್ಲ ಎನ್ನಲು ಅಥವಾ ನನಗೇನಾಗಿಲ್ಲ ಎನ್ನಲು ನಟನೆ ಮಾಡುವುದನ್ನು ನೋಡಿದ್ದೇವೆ. ಇಂತಹ ಪ್ರಸಂಗಗಳನ್ನು ನೋಡುವಾಗ ನಗು ತಡೆಯಲು ಸಾಧ್ಯವೇ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಅಗುತ್ತಿದೆ. ಸೈಕಲ್​ನಿಂದ ಬಿದ್ದ ನಂತರ ಮುಜುಗರಕ್ಕೀಡಾದ ಬಾಲಕನೊಬ್ಬ ಕೂಡಲೇ ಡಾನ್ಸ್ ಮಾಡುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ. ಈ ವಿಡಿಯೋ ನೋಡಿದಾಗ ಸಖತ್ ಮನರಂಜನೆ ಸಿಗುವುದು ಖಚಿತ.

ವಿಡಿಯೋದಲ್ಲಿ ಇರುವಂತೆ, ಬಾಲಕನೊಬ್ಬ ಮೂರು ಚಕ್ರದ ಸೈಕಲ್​ನಲ್ಲಿ ಹೋಗುತ್ತಿರುತ್ತಾನೆ. ಕೂಡಲ ಆತ ತಿರುಗಿಸಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಬೀಳುತ್ತಾನೆ. ಈ ವೇಳೆ ಎದ್ದು ಆಚೆ ಈಚೆ ನೋಡಿ ಛೆ! ಎಂದು ಕೈಗಳನ್ನು ಹೊಡೆದುಕೊಂಡ ನಂತರ ಕೂಡಲೇ ಡಾನ್ಸ್ ಮಾಡಿದ್ದಾನೆ.

ಈ ವಿಡಿಯೋವನ್ನು Figen ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಜೀವನವು ನಿಮಗೆ ಸವಾಲು ಹಾಕಿದಾಗ ಇದು ನಿಮ್ಮ ಪ್ರತಿಕ್ರಿಯೆಯಾಗಿರಬೇಕು!” ಎಂದು ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೋ ವೈರಲ್ ಪಡೆದು 10 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 3.38 ಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಹಾಗೂ 62 ಸಾವಿರಕ್ಕೂ ಹೆಚ್ಚು ರೀಟ್ವೀಟ್​ಗಳು ಆಗಿವೆ. ವಿಡಿಯೋ ನೋಡಿದ ಒಂದಷ್ಟು ಮಂದಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದು, ದಂತಕಥೆ, ರಾಕ್​ಸ್ಟಾರ್ ಎಂದೆಲ್ಲಾ ಹೇಳಿಕೊಂಡಿದ್ದಾರೆ.

ಮುಗ್ಧ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳ ವಿಡಿಯೋಗಳು ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿರುತ್ತವೆ. ವಾರದ ಆರಂಭದಲ್ಲಿ, ಚಿಕ್ಕ ಬಾಲಕನೊಬ್ಬ ತನ್ನ ಪಾಸ್‌ಪೋರ್ಟ್ ಫೋಟೋವನ್ನು ಕ್ಲಿಕ್ ಮಾಡುವುದನ್ನು ತೋರಿಸುವ ವಿಡಿಯೋವೊಂದು ನೆಟ್ಟಿಗರ ಹೃದಯವನ್ನು ಗೆದ್ದಿತ್ತು.

ಛಾಯಗ್ರಾಹಕನ ಮುಂದೆ ನೇರವಾಗಿ ನಿಂತು ಕೈಕಟ್ಟಿಕೊಂಡು ನಗುತ್ತಾ ಪೋಸ್ ನೀಡುವಂತೆ ಮಹಿಳೆಯೊಬ್ಬರು ಚಿಕ್ಕ ಬಾಲಕನಿಗೆಗೆ ಸೂಚಿಸುತ್ತಿರುವುದನ್ನು ಕ್ಲಿಪ್ ತೋರಿಸಿದೆ. ಆದರೆ ಛಾಯಾಗ್ರಾಹಕ ತನ್ನ ಕೆಲಸವನ್ನು ಪ್ರಾರಂಭಿಸಿದ ತಕ್ಷಣ, ಮಗು ತನ್ನ ಹಲ್ಲುಗಳನ್ನು ಮುದ್ದಾಗಿ ತೋರಿಸಿ ಚೀಸ್ ಎಂದು ಹೇಳುತ್ತದೆ. ಈ ವಿಡಿಯೋ ವೈರಲ್ ಪಡೆದು 18.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.

Published On - 4:00 pm, Fri, 29 July 22