Viral Video: ಹುರಿದುಂಬಿಸುವವರಿದ್ದರೆ ಅಸಾಧ್ಯವೆಂಬುದೇ ಇಲ್ಲ, ಅಂತೂ ಕಿಕ್ ಫ್ಲಿಪ್ ಆಫ್ ಕಲಿತೇ ಬಿಟ್ಟ ಬಾಲೆ

ಜೀವನದಲ್ಲಿ ಅಸಾಧ್ಯವೆಂಬುದು ಏನೂ ಇಲ್ಲ, ಸಾಧ್ಯ ಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕಷ್ಟೇ ಎನ್ನುವ ಸಂದೇಶ ಸಾರುವ ಈ ವಿಡಿಯೋವನ್ನು ಎಲ್ಲರೂ ಒಮ್ಮೆ ನೋಡಲೇಬೇಕು. ಪುಟ್ಟ ಬಾಲೆಯೊಬ್ಬಳು ಸ್ಕೇಟಿಂಗ್ ಮಾಡುತ್ತಾ ವಿವಿಧ ಟ್ರಿಕ್​ಗಳನ್ನು ಕಲಿಯುವ ಪ್ರಯತ್ನದಲ್ಲಿದ್ದಾಳೆ, ಎರಡು ಮೂರು ಬಾರಿ ಪ್ರಯತ್ನ ಮಾಡಿದರೂ ಅದರಲ್ಲಿ ಸೋಲು ಕಾಣುತ್ತಾಳೆ.

Viral Video: ಹುರಿದುಂಬಿಸುವವರಿದ್ದರೆ ಅಸಾಧ್ಯವೆಂಬುದೇ ಇಲ್ಲ, ಅಂತೂ ಕಿಕ್ ಫ್ಲಿಪ್ ಆಫ್ ಕಲಿತೇ ಬಿಟ್ಟ ಬಾಲೆ
SkatingImage Credit source: Hindustan Times
Follow us
TV9 Web
| Updated By: ನಯನಾ ರಾಜೀವ್

Updated on:Jul 30, 2022 | 10:43 AM

ಜೀವನದಲ್ಲಿ ಅಸಾಧ್ಯವೆಂಬುದು ಏನೂ ಇಲ್ಲ, ಸಾಧ್ಯ ಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕಷ್ಟೇ ಎನ್ನುವ ಸಂದೇಶ ಸಾರುವ ಈ ವಿಡಿಯೋವನ್ನು ಎಲ್ಲರೂ ಒಮ್ಮೆ ನೋಡಲೇಬೇಕು. ಪುಟ್ಟ ಬಾಲೆಯೊಬ್ಬಳು ಸ್ಕೇಟಿಂಗ್ ಮಾಡುತ್ತಾ ವಿವಿಧ ಟ್ರಿಕ್​ಗಳನ್ನು ಕಲಿಯುವ ಪ್ರಯತ್ನದಲ್ಲಿದ್ದಾಳೆ, ಎರಡು ಮೂರು ಬಾರಿ ಪ್ರಯತ್ನ ಮಾಡಿದರೂ ಅದರಲ್ಲಿ ಸೋಲು ಕಾಣುತ್ತಾಳೆ.

ಬಳಿಕ ಸಹೋದರಿಯರು ನೀನು ಮಾಡೇ ಮಾಡುತ್ತೀಯ ಎಂದು ಹುರಿದುಂಬಿಸಿದಾಗ ಕಿಕ್ ಫ್ಲಿಪ್ ಆಫ್​ ಅನ್ನು ಕೆಲವೇ ಕ್ಷಣಗಳಲ್ಲೇ ಕರಗತಗೊಳಿಸಿಕೊಳ್ಳುತ್ತಾಳೆ. ಲುಲು ಎಂಬ ಬಾಲಕಿ  ಸ್ಕೇಟ್‌ಬೋರ್ಡ್​ನ 50/50 ಕಿಕ್​ ಫ್ಲಿಪ್ ಆಫ್ ಟ್ರಿಕ್ ಮಾಡಲು ಪ್ರಯತ್ನಿಸುತ್ತಾಳೆ ಆ ಟ್ರಿಕ್ ಆಕೆಗೆ ಒಲಿಯದಿದ್ದಾಗ ಹತಾಶೆ ಮೂಡುತ್ತದೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾಳೆ. ಆದರೆ, ಲುಲು ಸಹೋದರಿಯರು ಅಲ್ಲಿಯೇ ಬಂದು ಕುಳಿತಾಗ ತನ್ನ ‘ಕಿಕ್‌ಫ್ಲಿಪ್ ಆಫ್’ ಮೂಲಕ ಎಲ್ಲರನ್ನೂ ವಿಸ್ಮಯಗೊಳಿಸುತ್ತಾಳೆ.

ಜುಲೈ 7 ರಂದು ಮಿಂಡಿ ಜಾನ್ಸನ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ರೀಲ್ ಅನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿರುವ ಯುವತಿಯರ ತಾಯಿ ಜಾನ್ಸನ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತನಗೆ ಆ ಟ್ರಿಕ್ ಮಾಡಲು ಬರುತ್ತಿಲ್ಲ ಎಂದು ಲುಲು ಹತಾಶಳಾಗಿದ್ದಳು, ಆದರೆ ಅವಳು ಅಂತಿಮವಾಗಿ ಸ್ಕೇಟಿಂಗ್ ಟ್ರಿಕ್ ಮಾಡಿ ತೋರಿಸಿದಾಗ ಅವಳ ಮುಖದಲ್ಲಿದ್ದ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಇನ್‌ಸ್ಟಾಗ್ರಾಂ ಬಳಕೆದಾರರು ಚಿಕ್ಕ ಹುಡುಗಿಯ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಎಂಬತ್ತು ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿರುವ ಈ ವಿಡಿಯೋ ಜನರಿಗೆ ತುಂಬಾ ಇಷ್ಟವಾಗುತ್ತಿದೆ.

ದಶಕಗಳಿಂದ ಸ್ಕೇಟಿಂಗ್ ಮಾಡುತ್ತಿರುವ ಮತ್ತೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರರು ವಿಡಿಯೋ ನೋಡಿ ಬರಗಾಗಿ . ನಾನು ದಶಕಗಳಿಂದ ಸ್ಕೇಟಿಂಗ್ ಮಾಡುತ್ತಿದ್ದೇನೆ ಮತ್ತು ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ ಧೈರ್ಯಶಾಲಿ ಹುಡುಗಿ ಎಂದು ಕೊಂಡಾಡಿದ್ದಾರೆ ಈ ವಿಡಿಯೋ ಸಾಕಷ್ಟು ಮಂದಿಗೆ ಆದರ್ಶವಾಗಿದೆ.

Published On - 10:42 am, Sat, 30 July 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ