ವೈರಲ್ ವಿಡಿಯೋ: ದೋಣಿಯಲ್ಲಿ ಮಜವಾಗಿ ವಿಹರಿಸುತ್ತಿದ್ದವರ ಮೇಲೆ ಎಲ್ಲಿಂದಲೋ ಹಾರಿಬಂದ ಹಾವು ಬಿತ್ತು!

ಕೆರೆಯ ತೀರದಲ್ಲಿರುವ ಒಬ್ಬ ವ್ಯಕ್ತಿ ಅಲ್ಲಿ ಕಾಣಿಸುವ ಒಂದು ಹಾವನ್ನು ಹಿಡಿದು ಕೆರೆಯಲ್ಲಿ ದೂರ ಎಸೆಯುವ ಪ್ರಯತ್ನ ಮಾಡುತ್ತಾನೆ. ಆದರೆ ಅವನ ಗುರಿ ತಪ್ಪಿ ಹತ್ತಿರದಲ್ಲೇ ದೋಣಿಯಲ್ಲಿ ವಿಹರಿಸುತ್ತಿದ್ದ ಇಬ್ಬರ ನಡುವೆ ಬೀಳುತ್ತದೆ!

ವೈರಲ್ ವಿಡಿಯೋ: ದೋಣಿಯಲ್ಲಿ ಮಜವಾಗಿ ವಿಹರಿಸುತ್ತಿದ್ದವರ ಮೇಲೆ ಎಲ್ಲಿಂದಲೋ ಹಾರಿಬಂದ ಹಾವು ಬಿತ್ತು!
ಹಾವನ್ನು ಎಸೆಯಲು ಅಣಿಯಾಗುತ್ತಿರುವ ವ್ಯಕ್ತಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2022 | 3:08 PM

ನಾವೆಷ್ಟೇ ಧೈರ್ಯಶಾಲಿಗಳಾಗಿದ್ದರೂ (brave) ಹಾವನ್ನು ಕಂಡಾಕ್ಷಣ ಹೆದರಿ ಬಿಡುತ್ತೇವೆ. ಹಾವಿನ (snake) ಗಾತ್ರ ಎಷ್ಟೇ ಅಗಿರಲಿ ನಮ್ಮಲ್ಲಿ ಭಯ ಹುಟ್ಟೋದು ಮಾತ್ರ ಗ್ಯಾರಂಟಿ. ಒಕೆ, ನೀವು ಹಾಯಾಗಿ ರಜೆ ಕಳೆಯಲೆಂದು ಕುಟುಂಬ ಇಲ್ಲವೇ ಸ್ನೇಹಿತರೊಂದಿಗೆ ಯಾವುದಾದರೂ ನದಿ ಅಥವಾ ಕೆರೆಯಲ್ಲಿ (lake) ದೋಣಿ ವಿಹಾರ ಮಾಡುವಾಗ ಎಲ್ಲಿಂದಲೋ ಹಾರಿ ಬರುವ ಹಾವೊಂದು ನಿಮ್ಮ ಮೇಲೆ ಬಿದ್ದರೆ ಹೇಗಾಗಬೇಡ!?

ಥೇಟ್ ಇಂಥದ್ದೇ ಒಂದು ಸನ್ನಿವೇಶ ಸೆರೆಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮಾರಾಯ್ರೇ. ಇದು ಕೆಲವರಿಗೆ ಭಯಾನಕ ಎನಿಸಿದರೆ ಉಳಿದವರಿಗೆ ಭಾರಿ ತಮಾಷೆಯಾಗಿ ಕಂಡಿದೆ. ಗೆಳೆಯರ ಗುಂಪೊಂದು ಒಂದು ಕೆರೆಯಲ್ಲಿ ದೋಣಿ ವಿಹಾರ ಮಾಡಿತ್ತಾ ಎಂಜಾಯ್ ಮಾಡುತ್ತಿದೆ. ಕೆರೆಯ ತೀರದಲ್ಲಿರುವ ಒಬ್ಬ ವ್ಯಕ್ತಿ ಅಲ್ಲಿ ಕಾಣಿಸುವ ಒಂದು ಹಾವನ್ನು ಹಿಡಿದು ಕೆರೆಯಲ್ಲಿ ದೂರ ಎಸೆಯುವ ಪ್ರಯತ್ನ ಮಾಡುತ್ತಾನೆ. ಆದರೆ ಅವನ ಗುರಿ ತಪ್ಪಿ ಹತ್ತಿರದಲ್ಲೇ ದೋಣಿಯಲ್ಲಿ ವಿಹರಿಸುತ್ತಿದ್ದ ಇಬ್ಬರ ನಡುವೆ ಬೀಳುತ್ತದೆ.

ಐಪಿಎಸ್ ಅಧಿಕಾರಿ ದಿಪಾಂಶು ಕಾಬ್ರಾ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಇದನ್ನು ಶೇರ್ ಮಾಡಿ ‘ನಾಟ್ ಓನ್ಲೀ ದಿ ಟಾರ್ಗೆಟ್, ದಿ ಟಾರ್ಗೆಟ್ ಶುಡ್ ಆಲ್ಸೋ ಶುಡ್ ಬಿ ರೈಟ್’ ಅಂತ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದೆ ಮಾರಾಯ್ರೇ. ಅದನ್ನು ವೀಕ್ಷಿಸಿದವರು ಭಾರಿ ಆನಂದಪಡುತ್ತಿದ್ದಾರೆ. ಒಬ್ಬರು, ‘ಹಾವನ್ನು ಹೀಗೆ ಬೇರೆಯವರ ಮೇಲೆ ಎಸೆಯುವುದು ಅಪಾಯಕಾರಿ, ಎಚ್ಚರದಿಂದರಬೇಕು,’ ಅಂತ ಕಾಮೆಂಟ್ ಮಾಡಿದರೆ, ‘ತಮ್ಮ ಪಾಡಿಗೆ ತಾವು ಎಂಜಾಯ್ ಮಾಡುತ್ತಿದ್ದವರ ಜೊತೆ ನೀವು ತಮಾಷೆ ಮಾಡಿದಿರಾ?’ ಎಂದು ಮತ್ತೊಬ್ಬರು ಬರೆದಿದ್ದಾರೆ. ಮೂರನೇಯವರು ‘ದೋಣಿಯಲ್ಲಿ ಮಜವಾಗಿ ವಿಹರಿಸುತ್ತಿದ್ದವರ ಬಗ್ಗೆ ಯೋಚಿಸಿ, ಎಲ್ಲಿಂದಲೋ ಬರುವ ಹಾವು ಅವರ ಮೇಲೆ ಬೀಳೋದು ಅಂದ್ರೆ!’ ಅಂತ ಹೇಳಿದ್ದಾರೆ.